ಮಲ್ಪೆ ಬಂದರು ಭೇಟಿಗೆ ಮೀನುಗಾರಿಕೆ ಸಚಿವರಿಗೆ ಮನವಿ : ಯಶ್ಪಾಲ್ ಸುವರ್ಣ

Spread the love

ಮಲ್ಪೆ ಬಂದರು ಭೇಟಿಗೆ ಮೀನುಗಾರಿಕೆ ಸಚಿವರಿಗೆ ಮನವಿ : ಯಶ್ಪಾಲ್ ಸುವರ್ಣ

ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಸ್ಪಂದಿಸಲು ಶೀಘ್ರದಲ್ಲೇ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮೀನುಗಾರಿಕೆ ಹಾಗೂ ಬಂದರು ಸಚಿವರಾದ  ಮಾಂಕಾಳ ವೈದ್ಯ ರವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪತ್ರ ಬರೆದು ಮನವಿ ಮಾಡಿದ್ದಾರೆ.

ದೇಶದ ಅತೀದೊಡ್ಡ ಸರ್ವ ಋತು ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಲ್ಪೆ ಮೀನುಗಾರಿಕಾ ಬಂದರು ಕರಾವಳಿ ಜಿಲ್ಲೆಯ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದು, ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಸುಮಾರು 7 ತಿಂಗಳು ಕಳೆದರೂ ಸಚಿವರೂ ಈವರೆಗೆ ಮಲ್ಪೆಗೆ ಭೇಟಿ ನೀಡಿಲ್ಲ ಹಾಗೂ ಯಾವುದೇ ಅಭಿವೃಧ್ದಿ ಕಾಮಗಾರಿಗಳನ್ನು ನಡೆಸಿಲ್ಲ.

ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ನಡೆದ ಹಲವು ಸಭೆಯಲ್ಲಿಯೂ ಈ ಬಗ್ಗೆ ಮೀನುಗಾರ ಮುಖಂಡರಿಂದ ಅಸಮಾಧಾನ ವ್ಯಕ್ತವಾಗಿದ್ದು, ಮಾನ್ಯ ಸಚಿವರು ಅತೀ ಶೀಘ್ರದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿ, ಮುಂಬರುವ ಬಜೆಟ್ ನಲ್ಲಿ ಮಲ್ಪೆ ಬಂದರಿನ ಅಭಿವೃಧ್ದಿ ಕಾರ್ಯಗಳಿಗೆ ಅನುದಾನ ಒದಗಿಸುವಂತೆ ಮನವಿ ಮಾಡಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love