ಮಲ್ಪೆ ಮಧ್ವರಾಜ್ ಪ್ರತಿಮೆ ಸ್ಥಾಪನೆಗೆ ಅಭಿಮಾನಿ ಬಳಗದಿಂದ ನಗರಸಭೆಗೆ ಮನವಿ
ಉಡುಪಿ: ಕರಾವಳಿ ಬೈಪಾಸ್- ಮಲ್ಪೆ ರಸ್ತೆಗೆ ಮಲ್ಪೆ ಮಧ್ವರಾಜ್ ಹೆಸರು ಹಾಗೂ ಮಲ್ಪೆ ಹೃದಯಭಾಗದಲ್ಲಿ ಮಧ್ವರಾಜರ ಪ್ರತಿಮೆ ಅಳವಡಿಸುವಂತೆ ಆಗ್ರಹಿಸಿ ಮಲ್ಪೆ ಮಧ್ವರಾಜ್ ಅಭಿಮಾನಿ ಬಳಗ ಉಡುಪಿ ನಗರಸಭಾ ಅಧ್ಯಕ್ಷರಿಗೆ ಮನವಿ ನೀಡಿತು.
ಮಲ್ಪೆ ಮಧ್ವರಾಜರು ಜಾತಿ-ಮತ ಭೇಧವಿಲ್ಲದೆ ನೂರಾರು ಜನಪರ ಕಾರ್ಯಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದು, ಮೀನುಗಾರರು ಮತ್ತು ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಕಾರಣಿಭೂತರಾಗಿದ್ದರು. ಉಡುಪಿ ಜಿಲ್ಲೆಯ ಮಲ್ಪೆಗೆ ರಾಷ್ಟ್ರ ಮಟ್ಟದ ಸ್ಥಾನಮಾನವನ್ನು ಕಲ್ಪಿಸಲು ಕಾರಣಿಭೂತರಾದ ಮಧ್ವರಾಜರ ಗೌರವಾರ್ಥವಾಗಿ ಅವರ ಹೆಸರು ಮತ್ತು ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು ಅಥವಾ ಪ್ರತಿಮೆ ಸ್ಥಾಪನೆಗೆ ಸ್ಥಳ ಮತ್ತು ಅನುಮತಿಯನ್ನು ನೀಡಿದರೆ ಅಭಿಮಾನಿ ಬಳಗದ ನೆರವಿನಿಂದ ನಿರ್ಮಿಸಲು ಅನುವು ಮಾಡಿಕೊಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ನೀಡುವ ವೇಳೆ ನಗರಸಭಾ ಉಪಾಧ್ಯಕ್ಷೆ ಸಂದ್ಯಾ ಕುಮಾರಿ, ಪೌರಾಯುಕ್ತ ಡಿ ಮಂಜುನಾಥಯ್ಯ ಜೊತೆ ಮಧ್ವರಾಜ್ ಅಭಿಮಾನಿ ಬಳಗದ ಪುಟ್ಟಯ್ಯ ಪೂಜಾರಿ, ಪ್ರಖ್ಯಾತ್ ಶೆಟ್ಟಿ, ಕೇಶವ ಎಂ ಕೋಟ್ಯಾನ್, ಆನಂದ ಆರ್ ಸಾಲ್ಯಾನ್, ಯತೀಶ್ ಕರ್ಕೆರಾ, ರಮೇಶ್ ಕಾಂಚನ್, ಸತೀಶ್ ಅಮೀನ್, ಪ್ರವೀಣ್ ಕಾಂಚನ್, ನಾರಾಯಣ ಪಿ ಕುಂದರ್, ಕಿರಣ್ ಕುಂದರ್, ಸತೀಶ್ ಕುಂದರ್, ಮನ್ಸೂರ್ ಆಲಿ, ಮುದ್ದು ಅಮೀನ್, ಶಶಿಧರ್ ಅಮೀನ್, ಜಯಕರ ಪೂಜಾರಿ, ಜೈವೀರ್, ಗೀರೀಶ ಸುವರ್ಣ, ಗಣಪತಿ ಶೆಟ್ಟಿಗಾರ್, ಜಗದೀಶ್ ಸುವರ್ಣ, ತಿಲಕ್ ರಾಜ್, ಸಂತೋಶ್ ಸಾಲ್ಯಾನ್ ಇತರರು ಉಪಸ್ಥಿತರಿದ್ದರು.