ಮಲ್ಪೆ ವಡಭಾಂಡ ಬಲರಾಮ ದೇವಸ್ಥಾನ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಲೋಕಾರ್ಪಣೆ
ಮಲ್ಪೆ: ಇಲ್ಲಿನ ಇತಿಹಾಸ ಪ್ರಸಿದ್ದ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ ಬಹ್ಮಕಲಶೋತ್ಸ ವದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಫೆ. 11 ರಂದು ದೇವಸ್ಥಾನದಲ್ಲಿ ನಡೆಯಿತು.
ಶಾಸಕ ಯಶ್‌ಪಾಲ್ ಸುವರ್ಣ ಅವರು ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಗ್ರಾಮದ ಭಕ್ತರ ಒಮ್ಮತದ ಸಹಕಾರದಿಂದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ಸಾಗಲಿ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ಕಾರ್ಯಾಧ್ಯಕ್ಷ ನಾಗರಾಜ್ ಮೂಲಿಗಾರ್, ಪ್ರಧಾನಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು, ಕೋಶಾಧಿಕಾರಿ ಟಿ. ಶ್ರೀನಿವಾಸ್ ಭಟ್, ಉಪಾಧ್ಯಕ್ಷರಾದ ಸುಭಾಷ್ ಮೆಂಡನ್, ಶರತ್ ಬೈಲಕರೆ, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಧರ ಎಂ. ಅಮೀನ್, ಪ್ರಮುಖರಾದ ದಯಾನಂದ ಕೆ. ಸುವರ್ಣ, ಮೀನಾಕ್ಷಿ ಮಾದವ, ಈಶ್ವರ ಸಾಲ್ಯಾನ್, ಸಂಧ್ಯಾ ರಮೇಶ್, ಶಶಿಧರ್ ಹರೀಶ್ ಕಾಂಚನ್, ಸುಬ್ರಹ್ಮಣ್ಯ, ರತ್ನಾಕರ ಸಾಲ್ಯಾನ್, ಬಿ.ಬಿ.ಪೂಜಾರಿ, ದಯಾನಂದ, ಜಯಕರ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.