ಮಲ್ಪೆಯಲ್ಲಿ ರಂಜಿಸಿದ ಅದ್ದೂರಿ ಮುಕ್ತ ತುಳು ಫಿಲ್ಮ್ ಅವಾರ್ಡ್ 2016

Spread the love

ಮಲ್ಪೆಯಲ್ಲಿ ರಂಜಿಸಿದ ಅದ್ದೂರಿ ಮುಕ್ತ ತುಳು ಫಿಲ್ಮ್ ಅವಾರ್ಡ್ 2016

ಉಡುಪಿ: ಕರಾವಳಿಯ ಮಾಧ್ಯಮ ಲೋಕಕ್ಕೆ ನೂತನವಾಗಿ ಕಾಲಿಡುತ್ತಿರುವ ಮುಕ್ತ ವಾಹಿನಿಯ ಲೋಕಾರ್ಪಣೆಗ ಹಾಗೂ ಮುಕ್ತ ತುಳು ಫಿಲ್ಮ್ ಅವಾರ್ಡ್ 2016 ಕಾರ್ಯಕ್ರಮ ರವಿವಾರ ಮಲ್ಪೆ ಕಡಲ ಕಿನಾರೆಯಲ್ಲಿ ನಡೆಯಿತು.

ಉದ್ಯಮಿ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕರಾದ ಡಾ ಜಿ ಶಂಕರ್ ದೀಪ ಬೆಳಗಿಸುವುದರೊಂದಿಗೆ ಮುಕ್ತ ವಾಹಿನಿಗೆ ಅಧಿಕೃತ ಚಾಲನೆ ನೀಡಿದರೆ, ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಯವರು ಮುಕ್ತ ವಾಹಿನಿಯ ಲೋಗೊ ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಉದ್ಯಮಿ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕರಾದ ಡಾ ಜಿ ಶಂಕರ್ ಸಮಾಜದ ಕುಂದು ಕೊರತೆಗಳನ್ನು ಎತ್ತಿ ತೋರಿಸುವ ಮೂಲಕ ಬಡವರ ನೋವಿಗೆ ಸ್ಪಂದಿಸವ ಕೆಲಸ ನಡೆಯಲಿ ಎಂದರು.

ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಮಾತನಾಡಿದ ಪ್ರತಿ ಮಾಧ್ಯಮಗಳು ಇಂದು ಉತ್ತಮ ಸಾಧನೆ ಮಾಡುತ್ತಿದ್ದು ಅವ್ಯವಹಾರವನ್ನು ತೋರಿಸಿ ಕೊಡುವ ಮೂಲಕ ಸಮಾಜ ತಿದ್ದುವ ಕೆಲಸ ಮಾಡಬೇಕು ಎಂದರು.

ಮಾಜಿ ಶಾಸಕ ರಘುಪತಿ ಭಟ್, ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಅದಾನಿ ಯುಪಿಸಿಎಲ್ ನ ಕೀಶೋರ್ ಆಳ್ವ, ಮೀನು ಮಾರಾಟ ಫೆಡರೆಶನ್ ಇದರ ಯಶ್ ಪಾಲ್ ಸುವರ್ಣ, ಉದ್ಯಮಿಗಳಾದ ಪುರುಷೋತ್ತಮ್ ಶೆಟ್ಟಿ, ಜಯ ಆಚಾರ್ಯ, ಕಿರಣ್ ಕುಮಾರ್, ನವೀನ್ ಭಂಡಾರಿ, ಸಂದೀಪ್ ಶೆಟ್ಟಿ ಗಣೇಶ್ ಕೊಳ, ಸಮಾಜ ಸೇವಕ ಭಾಗವತ ಪಟ್ಲ ಸತೀಶ್ ಆಚಾರ್ಯ ಹಾಗೂ ಇತರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶು ಶೆಟ್ಟಿ, ನಿತ್ಯಾನಂದ ಒಳಕಾಡು, ನೇಹಾ ರೈ, ಗುಡ್ಡ ಪಾಣಾರ, ಗಣೇಶ್, ಸಿಂಚನ ಗೌಡ, ರವಿ ಕಟಪಾಡಿ, ಹರೇಕಳ ಹಾಜಬ್ಬ, ಪದ್ಮನಾಭ, ಚಂದ್ರಶೇಖರ್, ಸತೀಶ್ ಪಟ್ಲ ಹಾಗೂ ಇತರರಿಗೆ ಸನ್ಮಾನಿಸಲಾಯಿತು.

ಮುಕ್ತ ಟಿವಿಯ ಆಡಳೀತ ವ್ಯವಸ್ಥಾಪಕ ಅಶ್ವಥ್ ಕಾಂಚನ್, ಸ್ವಾಗತಿಸಿದರು, ಆಡಳಿತ ಮಂಡಳಿಯ ವಿವೇಕ್ ಸುವರ್ಣ ಪ್ರಸ್ತಾವನೆಗೈದರು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತುಳುರಂಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ತುಳು ಚಿತ್ರರಂಗಕ್ಕಾಗಿ ದುಡಿದ ಭೋಜ ಸುವರ್ಣ, ಡಾ ಸಂಜೀವ ಡಂಡಕೇರಿ, ವಿ ಜಿ ಪಾಲ್ ಮತ್ತು ಟಿ ಎ ಶ್ರೀನಿವಾಸ್ ಅವರನ್ನು ಈ ವೇಳೆ ಗುರುತಿಸಿ ಗೌರವಿಸಲಾಯಿತು. ಚಿತ್ರರಂಗದಲ್ಲಿ ದುಡಿದು ಅಗಲಿದ ಸುಂದರನಾಥ್ ಸುವರ್ಣ ಮತ್ತು ಕೆ ಎನ್ ಟೇಲರ್ ಅವರಿಗೆ ಮರಣೋತ್ತರವಾಗಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ವಿಜಯ ರಾಘವೇಂದ್ರ, ದಿಗಂತ್ ಸೇರಿದಂತೆ ವಿವಧ   ತಾರೆಯರು ಸೇರಿದಂತೆ ಇತರ ಗಣ್ಯ ವ್ಯಕ್ತಿಗಳು ಭಾಗವಹಿಸಿ ತಾರಾ ಮೆರುಗು ನೀಡಿದರು.

ತುಳೂ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ 2016ರಲ್ಲಿ ಬಿಡುಗಡೆಯಾದ ಎಲ್ಲಾ ತುಳುಚಿತ್ರಗಳು ಭಾಗವಹಿಸಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ, ಸಂಯೋಜನೆ, ಹಿನ್ನಲೆ, ಸಂಗೀತ, ಸಾಹಸ ಸಂಯೋಜನೆ, ನೃತ್ಯ, ಸಂಕಲನ, ಛಾಯಾಗ್ರಹಣ, ಜನಮೆಚ್ಚಿದ ಹಾಸ್ಯ ನಟ, ಜನಮೆಚ್ಚಿದ ನಟ, ನಟಿ ತೀರ್ಪುಗಾರರ ಆಯ್ಕೆ, ಉತ್ತಮ ನಾಯಕ ನಟ, ನಾಯಕಿ ನಿರ್ದೇಶನ, ಮುಕ್ತ ತುಳು ಫಿಲ್ಮ್ ಅವಾರ್ಡ್ ಮೊದಲಾದ ಪ್ರಶಸ್ತಿಗಳು ನೀಡಲಾಯಿತು.

ತುಳು ಫಿಲ್ಮ್ ಅವಾರ್ಡ್ 2016 – ಪ್ರಶಸ್ತಿ ವಿವರ

ಉತ್ತಮ ಕತೆ – ಪವಿತ್ರ

ಉತ್ತಮ ಚಿತ್ರಕತೆ ಪಿಲಿಬೈಲು

ಉತ್ತಮ ಗೀತ ರಚನೆ ಪಿಲಿಬೈಲು ಮಯೂರ್ ಆರ್ ಶೆಟ್ಟಿ

ಉತ್ತಮ ಸಾಹಸ ರಂಬಾರುಟ್ಟಿ

ಉತ್ತಮ ನಟಿ ದಬಕ್ ದಬ ಐಸಾ ಶೀತಲ್ ನಾಯಕ್

ಉತ್ತಮ ನಟ ಪನೋಡಾ ಬೊಡ್ಚಾ ? ಶಿವಧ್ವಜ್ ಶೆಟ್ಟಿ

ಬೆಸ್ಟ್ ಫಿಲ್ಮ್ ಕುಡ್ಲ ಕೆಫೆ

ಬೆಸ್ಟ್ ನಿರ್ದೇಶನ ದೇವ್ ದಾಸ್ ಕಾಪಿಕಾಡ್ ( ಬರ್ಸ)

ಉತ್ತಮ ನೃತ್ಯ ಸಂಯೋಜನೆ ಗಿರಿ  (ಪಿಲಿ ಬೈಲು ಯಮುನಕ್ಕ )

ಉತ್ತಮ ಹಿನ್ನೆಲೆ ಸಂಗೀತ ಮಣಿಕಾಂತ್ ಕದ್ರಿ (ಬರ್ಸ)

ತೀರ್ಪುಗಾರರ ವಿಶೇಷ ಪ್ರಶಸ್ತಿ ಬೋಜರಾಜ್ ವಾಮಂಜೂರು , ಅರ್ಜುನ್ ಕಾಪಿಕಾಡ್

ಉತ್ತಮ ಸಂಗೀತ ಸಂಯೋಜನೆ ಕಿಶೋರ್ ಡಿ ಶೆಟ್ಟಿ ( ಪಿಲಿಬೈಲು ಯಮುನಕ್ಕ )

ಉತ್ತಮ ಗಾಯಕ ಪಟ್ಲ ಸತೀಶ್ ಶೆಟ್ಟಿ

ಉತ್ತಮ ಗಾಯಕಿ  ನೇಹಾ ಮಂಗಳೂರು

ಉತ್ತಮ ಹಾಸ್ಯನಟ ಅರವಿಂದ್ ಬೋಳಾರ್ (ಜೈ ತುಳುನಾಡು )

ಉತ್ತಮ ಹಾಸ್ಯ ನಟಿ  ಸುಜಾತ (ಬರ್ಸ)

ಉತ್ತಮ ಖಳನಟ ಗೋಪಿನಾಥ್ ಭಟ್ ( ಬರ್ಸ )

ಉತ್ತಮ ಪೋಷಕ ನಟ  ನವೀನ್ ಡಿ ಪಡೀಲ್

ಉತ್ತಮ ಸಂಭಾಷಣೆ  ಬರ್ಸ ದೇವದಾಸ್ ಕಾಪಿಕಾಡ್

ಉತ್ತಮ ಛಾಯಾಗ್ರಹಣ ಸಂತೋಷ್ ರೈ ಪಾತಾಜೆ

ಉತ್ತಮ ಸಂಕಲನ ಪಿಲಿಬೈಲು ಯಮುನಕ್ಕ  ಕೆ ಲಿಂಗರಾಜು

ಜನ ಮೆಚ್ಚಿದ ನಾಯಕ ಆಸ್ಥಿಕ್ ಶೆಟ್ಟಿ

ಜನ ಮೆಚ್ಚಿದ ನಾಯಕಿ ಚಿರಶ್ರೀ ಅಂಚನ್

ಜನ ಮೆಚಿದ ಹಾಸ್ಯ ನಟ ಮಂಜು ರೈ ಮೂಳೂರು

 


Spread the love