ಮಸಾಜ್ ಕೇಂದ್ರಕ್ಕೆ ದಾಳಿ ; 5 ಬಂಧನ, 11 ಮಹಿಳೆಯರ ರಕ್ಷಣೆ
ಮಂಗಳೂರು: ನಗರದ ಎರಡು ಪ್ರತ್ಯೇಕ ಮಸಾಜ್ ಕೇಂದ್ರಗಳಿಗೆ ದಾಳಿ ನಡೆಸಿರುವ ಪೋಲಿಸರು ಐವರು ಆರೋಪಿಗಳನ್ನು ಬಂಧಿಸಿ 11 ಮಹಿಳೆಯರನ್ನು ರಕ್ಷಿಸಿದ್ದಾರೆ.
ಕದ್ರಿ ಶಿವಬಾಗ್ ಬಳಿಯ ಇಂಡಿಯನ್ ಸ್ಯಾಂಡಲ್ ಆಯುರ್ವೇದಿಕ್ ಮಸಾಜ್ ಸೆಂಟರಿಗೆ ದಾಳಿ ನಡೆಸಿರುವ ಪೋಲಿಸರು ಮಸಾಜ್ ಸೆಂಟರಿನ ಮಾಲಕ ತೊಕ್ಕೊಟ್ಟಿನ ಪ್ರದೀಪ್ ಹಾಗೂ ಗ್ರಹಕರಾದ ಮುಳಿಹಿತ್ಲುವಿನ ಅಭಿಷೇಕ್, ಬೊಕ್ಕಪಟ್ಣದ ಚಂದ್ರನಾಥ ಎಂಬವರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರಿಂದ 1500 ನಗದು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದಲ್ಲಿ ಐವರು ಮಹಿಳೆಯರನ್ನು ರಕ್ಷಿಸಲಾಗಿದೆ.
ಮಂಗಳೂರು ಉರ್ವ ಪೂರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕೆಎಸ್ ರಾವ್ ರಸ್ತೆಯ ಸಂಜೀವಿನಿ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ಗೆ ದಾಳಿ ನಡೆಸಿರುವ ಪೋಲಿಸರು ಇಬ್ಬರನ್ನು ಬಂಧಿಸಿ, ಆರು ಮಂದಿಯನ್ನು ರಕ್ಷಿಸಿದ್ದಾರೆ.
ಮಸಾಜ್ ಸೆಂಟರ್ ಮಾಲಕ ಮಂಗಳೂರಿನ ಹರೀಶ್ ಶೆಟ್ಟಿ ಹಾಗೂ ಮಂಜೇಶ್ವರದ ರವಿ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತರಿಂದ 500 ನಗದು ವಶಕ್ಕೆ ಪಡೆದಿದ್ದು, ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.