ಮಹಿಳೆ ವೇದಾವತಿ ಕೊಲೆ; ದಂಪತಿಗಳ ಬಂಧನ
ಮಂಗಳೂರು: ಗುತ್ತಿಗಾರು ನಿವಾಸಿ ಜಯರಾಮ ಅವರ ಪತ್ನಿ ವೇದಾವತಿ ಕೊಲೆ ಪ್ರಕರಣಕ್ಕೆ ಸಂಬಂಧೀಸಿ ಪುತ್ತೂರು ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುಳ್ಯ ನಿವಾಸಿಗಳಾದ ಕರುಣಾಕರ (52) ಹಾಗೂ ಆತನ ಪತ್ನಿ ಪ್ರೇಮ ಎಂದು ಗುರುತಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೂಷಣ್ ರಾವ್ ಭೋರಸೆ ಅವರು ಕರುಣಾಕರ ಅವರು ಜಯರಾಮ ಅವರು ದೂರದ ಸಂಬಂಧಿಯಾಗಿದ್ದರು. ಅಲ್ಲದೆ ಕರುಣಾಕರ್ ಹಲವರಿಂದ 30 ಲಕ್ಷದ ವರೆಗೆ ಸಾಲ ಪಡೆದಿದ್ದು, ಹಿಂತಿರುಗಿಸರಲಿಲ್ಲ. ಜಯರಾಮ್ ಪ್ರತಿನಿತ್ಯ ಕೆಲಸಕ್ಕೆ ಹೋಗುತ್ತಿದ್ದು, ಮನೆಯಲ್ಲಿ ಪತ್ನಿ ವೇದಾವತಿ ಮಾತ್ರ ಇರುವುದು ಕರುಣಾಕರನಿಗೆ ತಿಳಿದಿತ್ತು. ಅಂತೆಯೇ ಎಪ್ರಿಲ್ 16 ರಂದು ಜಯರಾಮ ಎಂದಿನಂತೆ ಮನೆಯಿಂದ ಹೊರಗೆ ಹೋದ ಸಮಯ ತಿಳಿದು ಕರುಣಾಕರ ಅದರ ಲಾಭ ಪಡೆದು ವೆದಾವತಿಯನ್ನು ಕೊಲ್ಲುವ ಸಂಚು ರೂಪಿಸಿದ್ದ.
ಅಂದು ಬೆಳಿಗ್ಗೆ 11.30 ಕ್ಕೆ ಕರುಣಾಕರ ತನ್ನ ದ್ವಿಚಕ್ರ ವಾಹನವನ್ನು ವೆದಾವತಿ ಮನೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಹಿಂದಿನ ಬಾಗಿಲಿನಿಂದ ಮನೆಯೊಳಗೆ ಪ್ರವೇಶ ಪಡೆಯುತ್ತಾನೆ. ಮನೆಗೆ ಬಂದ ಕರುಣಾಕರನನ್ನು ಉಪಚರಿಸಿದ ವೇದಾವತಿಯಲ್ಲಿ ಕರುಣಾಕರ ಹಣದ ಸಹಾಯವನ್ನು ಕೇಳಿದ್ದಾನೆ. ಇದಕ್ಕೆ ಒಪ್ಪದ ವೇದಾವತಿಯಲ್ಲಿ ಕುಡಿಯಲು ನೀರು ಕೇಳಿದ ಕರುಣಾಕರ, ನೀರು ತರಲು ವೇದಾವತಿ ಅಡುಗೆ ಕೋಣೆಗೆ ತೆರಳಿದ್ದ ವೇಳೆ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದನು. ಬಳಿಕ ವೇದಾವತಿಯ ಮನೆಯಲ್ಲಿದ್ದ ರೂ 2 ಲಕ್ಷ ಮೌಲ್ಯದ ಚಿನ್ನವನ್ನು ಮನೆಯಿಂದ ಕೊಂಡೊಯ್ದಿದ್ದ.
ಮನೆಯಿಂದ ಹೊರಹೋಗುವ ವೇಳೆ ಅಲ್ಲಿ ಸಾಕ್ಷಗಳನ್ನು ನಾಶ ಮಾಡಿದ್ದು, ತನ್ನ ಬಗ್ಗೆ ಸಂಶಯ ಬರದಿರಲು ಊರಿನಿಂದ ಅದೇ ದಿನ ಹೊರಹೋಗಿದ್ದು, ಆತನ ಪತ್ನಿ ಪ್ರೇಮ ಕೂಡ ಸಾಕ್ಷ್ಯ ನಾಶಕ್ಕೆ ಸಹಕರಿಸಿದ್ದಳು ಎಂದರು.
ಘಟನೆಯ ಕುರಿತು ತನಿಖೆ ನಡೆಸಲು 10 ಮಂದಿಯ ತಂಡವನ್ನು ಎಎಸ್ಪಿ ರೀಶಂತ್ ನೇತೃತ್ವದಲ್ಲಿ ರಚಿಸಿದ್ದು, ಎಲ್ಲಾ ರೀತಿಯ ಮಾಹಿತಿಗಳನ್ನು ಕಲೆಹಾಕಿ ಜುಲೈ 6 ರಂದು ಕರುಣಾಕರ ಹಾಗೂ ಆತನ ಪತ್ನಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಕಳವಾದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸು ಅಧೀಕ್ಷಕರಾದ ರಿಷ್ಯಂತ್.ಸಿ. ಬಿ, ಐ.ಪಿ.ಎಸ್,ವಿಶೇಷ ತಂಡದ ಸಿಬ್ಬಂದಿಗಳಾದ ಯೋಗಿಂದ್ರ, ಭಾಸ್ಕರ, ಧನೇಶ್, ತಾರನಾಥ್, ನವೀನ್, ಸುಳ್ಯ ವೃತ್ತನಿರೀಕ್ಷಕರಾದ ವಿ. ಕೃಷ್ಣಯ್ಯ, ಮತ್ತು ಅವರ ಕಛೇರಿ ಸಿಬ್ಬಂದಿಗಳಾದ ಕೃಷ್ಣಯ್ಯ, ಮಾಧವ, ದೇವರಾಜ್ ಮತ್ತು ಮಹಿಳಾ ಸಿಬ್ಬಂದಿ ಶ್ರೀಮತಿ ಯೋಗಿತಾ ಡಿ.ಸಿ.ಐ.ಬಿ ನಿರೀಕ್ಷಕರಾದ ಅಮಾನುಲ್ಲಾ, ಸಿಬ್ಬಂದಿಗಳಾದ ಸಂಜೀವ ಪುರುಷ, ಪಳನಿವೇಲು, ಉದಯ ರೈ, ಇಕ್ಬಾಲ್, ತಾರನಾಥ, ವಾಸು ನಾಯ್ಕ, ವಿಜಯಗೌಡ, ಸುಳ್ಯ ಪೊಲೀಸು ಉಪನಿರೀಕ್ಷಕರಾದ ಶ್ರೀ ಚಂದ್ರಶೇಖರ್, ಸಿಬ್ಬಂದಿಗಳಾದ ವಿಜಯ್ ಕುಮಾರ್, ಅಶೋಕ್, ಪುನೀತ್ ಕುಮಾರ್, ಸುಬ್ರಹ್ಮಣ್ಯ ಠಾಣಾ ಸಹಾಯಕ ಪೊಲೀಸು ಉಪನಿರೀಕ್ಷಕರಾದ ಐತು ನಾಯ್ಕ ಸಿಬ್ಬಂದಿಗಳಾದ ಚಂದ್ರಶೇಖರ, ಆನಂದ ನಾಯ್ಕ, ಚಾಲಕರಾದ ಯಜ್ಞನಾರಾಯಣ, ಹನುಮಂತ, ಗಣಕ ಯಂತ್ರ ವಿಭಾಗದ ಸಂಪತ್ ಕುಮಾರ್, ದಿವಾಕರ, ಮಂಜುನಾಥ್ ರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು.