ಮಾ. 8-9: ಉಡುಪಿಯಲ್ಲಿ ವಕೀಲರ ಅಂತಾರಾಜ್ಯ ಮಟ್ಟದ ಕ್ರಿಕೆಟ್, ವಾಲಿಬಾಲ್ ಹಾಗೂ ತ್ರೋಬಾಲ್ ಕ್ರೀಡಾಕೂಟ
ಉಡುಪಿ: ವೆಲ್ವೇರ್, ಸ್ಪೋರ್ಟ್ಸ್ ಆ್ಯಂಡ್ ಕಲ್ಬರಲ್ ಕ್ಲಬ್ ಅಸೋಸಿಯೇಶನ್ ಆಫ್ ಉಡುಪಿ ಅಡ್ವಕೇಟ್ಸ್) ವತಿಯಿಂದ ಕುಂದಾಪುರ ಬಾರ್ ಅಸೋಸಿಯೇಶನ್ ಸಹಯೋಗದಲ್ಲಿ ಹಿರಿಯ ವಕೀಲರಾಗಿದ್ದ ಚೇರ್ಕಾಡಿ ವಿಜಯ್ ಹೆಗ್ಡೆ ಸ್ಮರಣಾರ್ಥ ಅಂತಾರಾಜ್ಯ ಮಟ್ಟದ ವಕೀಲರ ಕ್ರಿಕೆಟ್, ವಾಲಿಬಾಲ್ ಹಾಗೂ ತ್ರೋಬಾಲ್ ಕ್ರೀಡಾಕೂಟವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ದೇವದಾಸ್ ವಿ. ಶೆಟ್ಟಿಗಾರ್ ಹೇಳಿದರು.
ಸೋಮವಾರ ಕಿದಿಯೂರು ಹೊಟೇಲ್ನ ವಾಸುಕೀಶಯನ ಹಾಲ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚೇರ್ಕಾಡಿ ವಿಜಯ್ ಹೆಗ್ಡೆಯವರ ಸ್ಮರಣೆಯ ಜತೆಗೆ ವಕೀಲರ ಆರೋಗ್ಯ ಕ್ಷೇಮಾಭಿವೃದ್ಧಿ ನಿಧಿ ಮೂಲ ಉದ್ದೇಶವಿಟ್ಟುಕೊಂಡು ಅಂತಾರಾಜ್ಯ ಮಟ್ಟದ ವಕೀಲರ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದೇವೆ. ಮಾ. 8 ಮತ್ತು 9ರಂದು ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯಲಿದೆ. ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರದ ಒಟ್ಟು 5 ಕ್ರಿಕೆಟ್ ತಂಡ, ಕರ್ನಾಟಕದ 19 ತಂಡಗಳು ಸಹಿತ 24 ಕ್ರಿಕೆಟ್ ತಂಡಗಳು ಭಾಗವಹಿಸಲಿವೆ. 16 ವಾಲಿಬಾಲ್ ತಂಡ ಹಾಗೂ 12 ಪ್ರೋಬಾಲ್ ತಂಡ ಪಾಲ್ಗೊಳ್ಳಲಿವೆ ಎಂಬ ಮಾಹಿತಿ ನೀಡಿದರು.
ಮಾ.8ರ ಬೆಳಗ್ಗೆ 9ಗಂಟೆಗೆ ಕ್ರೀಡಾಕೂಟವನ್ನು ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾ| ಪಿ.ವಿಶ್ವನಾಥ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕ್ಲಬ್ನ ಗೌರವ ಅಧ್ಯಕ್ಷ ಎಚ್. ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಬೆಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ದಿ| ಚೇರ್ಕಾಡಿ ವಿಜಯ ಹೆಗ್ಡೆ ಪತ್ನಿ ವಿಂಧ್ಯಾ ವಿ. ಹೆಗ್ಡೆ ಬ್ರಹ್ಮಾವರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಕಡೂರು ಪ್ರವೀಣ್ ಶೆಟ್ಟಿ ಕಾರ್ಕಳ ಬಾರ್ ಅಸೋಸಿಯೇಶನ್ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಎಂಜಿಎಂ ಪ್ರಾಂಶಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಂದುಸಂಜೆ6.30ಕ್ಕೆ ಅಂತಾರಾಷ್ಟ್ರೀಯ ಮಹಿಳಾ ‘ದಿನಾಚರಣೆಯನ್ನು ಆಯೋಜಿಸಲಿದ್ದೇವೆ. ವೈದ್ಯ ಡಾ| ಶ್ರುತಿ ಬಲ್ಲಾಳ್ ಮುಖ್ಯ ಅತಿಥಿಯಾಗಿರುವರು. ಮಾ.9ರ ಸಂಜೆ 6ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ನ್ಯಾಯವಾದಿ ವಿಕ್ರಮ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ. ಶಾಸಕ ಗುರ್ಮ ಸುರೇಶ್ ಶೆಟ್ಟಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಶ್ರೀದುರ್ಗಾಪರಮೇಶ್ವರಿ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಪ್ರೊ| ಜಯರಾಮ್ ಶೆಟ್ಟಿ ಎಸ್., ದಿ। ಚೇರ್ಕಾಡಿ ವಿಜಯ ವೀರೇನ್ ಹೆಗ್ಡೆ ಭಾಗವಹಿಸಲಿದ್ದಾರೆ ಎಂದರು.
ಕ್ಲಬ್ ಗೌರವ ಅಧ್ಯಕ್ಷ ಎಚ್. ರತ್ನಾಕರ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಅಖಿಲ್ ಬಿ. ಹೆಗ್ಡೆ ‘ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ಹಂದೆ ಮಾತನಾಡಿ, ಎಲ್ಲ ವಿಭಾಗದಲ್ಲೂ ನಗದು ಬಹುಮಾನ ಮತ್ತು ಶ್ರೇಷ್ಠ ಆಟಗಾರರನ್ನು ಗುರುತಿಸಿ, ಗೌರವಿಸಲಾಗುವುದು. ಯುವ ವಕೀಲರಿಗೆ ಆರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ನಿರ್ದಿಷ್ಟ ಆರ್ಥಿಕ ಸಹಕಾರ ನೀಡಲು ಅನುಕೂಲ ಆಗುವಂತೆ ಈ ಕ್ರೀಡಾಕೂಟದ ಮೂಲಕ ಒಂದು ನಿಧಿ ಸ್ಥಾಪನೆಯ ಗುರಿ ಹೊಂದಿದ್ದೇವೆ. ಕ್ರೀಡಾ ಕೂಟದ ಉಳಿಕೆ ಮೊತ್ತದಲ್ಲಿ ಈ ನಿಧಿ ಸ್ಥಾಪಿಸುವ ಎಂದರು. ಯೋಚನೆಯಿದೆ
ಖಜಾಂಚಿ ವೈ.ಟಿ. ರಾಘವೇಂದ್ರ, ನ್ಯಾಯವಾದಿಗಳಾದ ಪ್ರಕಾಶ್ ಕೆದ್ಲಾಯ, ಜಯ ವಾಣಿ ವಿ.ರಾವ್, ಗೀತಾ ಕೌಶಿಕ್, ಸಂಜಯ ನೀಲಾವರ, ಕಿರಣ್, ಬಾಲಕೃಷ್ಣ ಸುಮಿತ್ ಹೆಗ್ಡೆ ಉಪಸ್ಥಿತರಿದ್ದರು.