ಮಾದಕ ವಸ್ತುಗಳಿಂದ ದೂರವಿರಿ ‘ಚೈಲ್ಡ್ಲೈನ್ ಸೆ ದೋಸ್ತಿ-2017’
ಮಂಗಳೂರು: ‘ಚೈಲ್ಡ್ಲೈನ್ ಸೆ ದೋಸ್ತಿ-2017’ ಸಪ್ತಾಹದ ಅಂಗವಾಗಿ ಆನ್ಲೈನ್ ಸೇಪ್ಟೀ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಸಲುವಾಗಿ ಮಾಹಿತಿ ಕಾರ್ಯಕ್ರಮವು ದಿನಾಂಕ-15/11/2017ರಂದು ಮಂಗಳೂರಿನ ಬಲ್ಮಟ ಮಹಿಳಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟಕರಾದ ಮಂಗಳೂರು ಚೈಲ್ಡ್ಲೈನ್ ಇದರ ಕೇಂದ್ರ ಸಂಯೋಜನಾಧಿಕಾರಿಯಾದ ದೀಕ್ಷಿತ್ ಅಚ್ರಪ್ಪಾಡಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮತನಾಡುತ್ತಾ “ಚೈಲ್ಡ್ಲೈನ್ ಸೆ ದೋಸ್ತಿ-2017” ಸಪ್ತಾಹದ ಅಂಗವಾಗಿ ನವಂಬರ್ 14 ರಿಂದ 20ರ ತನಕ ನಿರಂತರ ಏಳು ದಿನದ ಕಾರ್ಯಕ್ರಮವು ವಿವಿಧ ಇಲಾಖೆಗಳ ಸಹಕಾರದೊಂದಿಗೆ ತಾಲೂಕಿನಾಧ್ಯಂತ ನಡೆಯಲಿದ್ದು ಕಾರ್ಯಕ್ರಮಕ್ಕೆ ತಮ್ಮಲೆಲ್ಲರೂ ಸಹಕಾರ ನೀಡಬೇಕಾಗಿ ಎಂದರು. .ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಲಿಂಕ್ ಡಿ ಎಡಿಕ್ಷನ್ ಸಂಸ್ಥೆಯ ಆಡಳಿತಾ ಅಧಿಕಾರಿ ಯಾದ ಶ್ರೀಮತಿ ಲೀಡಿಯಾ ಲೋಬೋ ರವರು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಾತನಾಡುತ್ತಾ ಮಾದಕ ವಸ್ತುಗಳ ಸೇವನೆಯು ಒಂದು ರೀತಿಯ ಕೆಟ್ಟ ಚಠವಾಗಿರುದ್ದು ನಿರಂತರ ಮಾದಕ ವಸ್ತುಗಳನ್ನು ಸೇವಿಸುವ ಯಾವುದೇ ವ್ಯಕ್ತಿ ಅದರಿಂದ ಹೊರ ಬರಲು ಬಹಳ ಕಷ್ಟಪಡುತ್ತಾನೆ ಹಾಗೂ ವ್ಯಕ್ತಿ ತನ್ನ ಒಳ್ಳೆಯ ಜೀವನದ ಮೌಲ್ಯಗಳನ್ನು ಕಳೆದುಕೊಳ್ಳುತ್ತಾನೆ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಸಮಸ್ಯೆಗಳನ್ನು ಈ ಮಾಹಿತಿ ಕಾರ್ಯಕ್ರಮದಲ್ಲಿ ವಿವರಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿರುವ ಇಕೋನೋಮಿಕ್ ಮತ್ತು ನಾರ್ಕೊಟಿಕ್ ಪೊಲೀಸ್ ನಿರೀಕ್ಷಕರಾದ. ಶ್ರೀಯುತ ಮೊಹಮ್ಮದ್ ಶರೀಪ್ ರವರು ಆನ್ಲೈನ್ ಸುರಕ್ಷತೆಯ ಕುರಿತು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪೇಸ್ಬುಕ್, ಸಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದು ತಮಗೆ ಅರಿವಿಲ್ಲ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಆದ್ದರಿಂದ ಆದಷ್ಟು ಮಟ್ಟಿಗೆ ಸಾಮಾಜಿಕ ಜಾಲತಾಣಗಳಿಂದ ಎಚ್ಚರವಾಗಿರಬೇಕೇಂಬುದಾಗಿ ಸೂಚಿಸಿದರು.
ಬಲ್ಮಟ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಾರಿಯಟ್ ಮಸ್ಕರೇನಸ್ ಸ್ವಾಗತಿಸಿದರು ಹಾಗೂ ಶ್ರೀಮತಿ ಆಶಲತ ಕುಂಪಲರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶ್ರೀಮತಿ ಅಸುಂತರವರು ವಂದನಾರ್ಪಣೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನೋಡಲ್ ಸಂಯೋಜಕರಾದ ಯೋಗಿಶ್ ಮಲ್ಲಿಗೆ ಮಾಡು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶ್ರೀಮತಿ ಸುರೇಖ, ಕಾಣೆಯಾದ ಮಕ್ಕಳ ಬ್ಯೂರೋದ ಯೋಗಿಶ್, ಚೈಲ್ಡ್ ಲೈನ್ ತಂಡದ ಸದಸ್ಯರಾದ ನಾಗರಾಜ್ ಪಣಕಜೆ, ಶ್ರೀಮತಿ ರೇವತಿ, ಶ್ರೀಮತಿ ಜಯಂತಿಯವರು ಉಪಸ್ಥಿತರಿದ್ದರು.