ಮಾದರಿ ಹುಟ್ಟು ಹಬ್ಬ; ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣರಿಂದ ನೇತ್ರದಾನದ ಪ್ರತಿಜ್ಞೆ

Spread the love

ಮಾದರಿ ಹುಟ್ಟು ಹಬ್ಬ; ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣರಿಂದ ನೇತ್ರದಾನದ ಪ್ರತಿಜ್ಞೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಜಿಲ್ಲೆಯಲ್ಲಿ ತನ್ನ ವಿಶೇಷ ಕೆಲಸಗಳ ಮೂಲಕ ಬೆಳೆಯುತ್ತಿರುವ ಯುವ ರಾಜಕಾರಣಿ. ಶುಕ್ರವಾರ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬ ಎಂದರೆ ಏನಿರುತ್ತೆ? ಕೇಕ್, ಮೋಜು ಮಸ್ತಿ, ಗೆಳೆಯರೊಂದಿಗೆ ಔಟಿಂಗ್ ಇತ್ಯಾದಿ. ಆದರೆ ಇದಕ್ಕೆ ಹೊರತುಪಡಿಸಿ ಅಕ್ಷಿತ್ ತನ್ನ ಹುಟ್ಟುಹಬ್ಬವನ್ನು ಸದಾ ನೆನಪಿನಲ್ಲಿಡುವಂತಹ ಪುಣ್ಯದ ಕಾರ್ಯದೊಂದಿಗೆ ಆಚರಿಸಿದ್ದು ಇತರರಿಗೆ ಮಾದರಿಯಾಗಿದ್ದಾರೆ.

ಹೌದು ಅಕ್ಷಿತ್ ಸುವರ್ಣ ತನ್ನ ಹುಟ್ಟುಹಬ್ಬದ ಪ್ರಯುಕ್ತ ಸರ್ವರೂ ಸದಾ ನೆನಪಿಡುವಂತೆ ತನ್ನ ನೇತ್ರಗಳನ್ನು ದಾನ ಮಾಡುವ ಪ್ರತಿಜ್ಞೆಯನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ ಫಾದರ್ ಮುಲ್ಲರ್ ಹಾಸ್ಪಿಟಲ್ ಕಂಕನಾಡಿಯಲ್ಲಿ   ತಮ್ಮ ಅಮೂಲ್ಯವಾದ ನೇತ್ರವನ್ನು ದಾನ ಮಾಡಿದರು. ನಂತರ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಈಗಿನ ಯುವ ಪೀಳಿಗೆ ಬೇರೆ ಬೇರೆ ಘಟನೆಗಳಲ್ಲಿ ಭಾಗಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ನೇತ್ರದಾನ, ರಕ್ತದಾನ ಮಾಡುವುದರ ಮುಖಾಂತರ ಬಡವರಿಗೆ ಹಾಗೂ ಕಷ್ಟ ಸಂಕಷ್ಟದಲ್ಲಿರುವ ರೋಗಿಗಳಿಗೆ ದಾನ ಮಾಡುವುದರ ಮುಖಾಂತರ ಯುವಕರು ಈಗಿನ ಸಾಮಾಜಿಕ  ನೆಲೆಯಲ್ಲಿ  ತಿದ್ದಿ ನಡೆಯುವ ಒಂದು ಉದಾಹರಣೆಯಾಗಿ ಮೂಡಿ ಬರಬೇಕು. ಕಣ್ಣುದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ತನ್ಮೂಲಕ ಅಂಧರ ಬಾಳಲ್ಲಿ ಬೆಳಕು ತರಬೇಕು  ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಪೈಸಲ್, ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ, ಜಿಲ್ಲಾ ಯುವ ಕಾರ್ಯದರ್ಶಿಗಳಾದ ಲಿಖಿತ್ ರಾಜ್, ಅರ್ಷಕ್ ಇಸ್ಮಾಯಿಲ್, ಜಿಲ್ಲಾ ಯುವ ಮುಖಂಡರುಗಳಾದ ರತೀಶ್, ಸಿನಾನ್, ನಿತಿನ್, ಕಾರ್ತಿಕ್ ಅಂಚನ್, ಹಿತೇಶ್ ರೈ, ಸಮರ್ಥ್ ಮೂದಲಾದ ಯುವ ನಾಯಕರು ಭಾಗವಹಿಸಿದ್ದರು

 


Spread the love