ಮಾನವೀಯತೆಯ ಮೆರೆಯಲು ಹೋಗಿ ಸಮಸ್ಯೆಯಲ್ಲಿ ಸಿಲುಕಿದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು

Spread the love

ಮಂಗಳೂರು: ಹೌದು..ಇಂಥಹದ್ದೊಂದು ಘಟನೆ ಮಂಗಳೂರಿನಲ್ಲಿ ನಡೆದಿದೆ.ಚಿಕ್ಕಮಗಳೂರು ನೆಲೆಸಿರುವ ದಂಪತಿಗಳ 5 ವರ್ಷದ ಮಗುವೊಂದು ಲಾಕ್ ಡೌನ್ ಗಿಂತ ಮೊದಲು ಅಡ್ಯಾರ್ ತನ್ನ ಸಂಬಂಧಿಕರ ಮನೆಗೆ ಬಂದಿತ್ತು.ಲಾಕ್ ಡೌನ್ ಆಗಿದ್ದರಿಂದ ಮಗು ಕಳೆದ 21 ದಿನಗಳಿಂದ ತನ್ನ ಹೆತ್ತವರ ನೆನೆದು ಮಾನಸಿಕ ಸ್ಥಿತಿಯಲ್ಲಿತ್ತು.ಈ ಮದ್ಯೆ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನುರವರನ್ನು ಸಂಪರ್ಕಿಸಿದ ಕುಟುಂಬ ತನ್ನ ಮಗುವನ್ನು ಹೇಗಾದರೂ ಚಿಕ್ಕಮಗಳೂರು ಮುಟ್ಟಿಸಬೇಕೆಂದು ಗೋಗರೆಯುತ್ತಾ ಇದ್ದರು.ಆದರೆ ತಾಲೂಕು ಪಂಚಾಯತ್ ಅಧ್ಯಕ್ಷರು ಎಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯುತ್ತದೆ ಅಲ್ಲಿಯವರೆಗೆ ದಯವಿಟ್ಟು ಕಾಯಿರಿ ಎಂದು ಮನವೊಲಿಸಿತ್ತು.

ಆದರೆ ಎಪ್ರಿಲ್ 14ರ ತನಕದ ನಂತರವೂ ಲಾಕ್ ಡೌನ್ ಮುಂದುವರಿದ ಹಿನ್ನಲೆಯಲ್ಲಿ ಪುನಹ ಅಧ್ಯಕ್ಷರನ್ನು ಸಂಪರ್ಕಿಸಿದ ಕುಟುಂಬ ದಯವಿಟ್ಟು ತಮ್ಮ ಮಗುವನ್ನು ಮುಟ್ಟಿಸುವಂತೆ ದಂಬಾಲು ಬಿದ್ದಿತ್ತು.ಹೆತ್ತವರ ರೋದನ ಮಗುವಿನ ಸ್ಥಿತಿಯನ್ನು ಕಂಡು ಕರಗಿದ ಅಧ್ಯಕ್ಷರು ತನ್ನ ಸರಕಾರಿ ವಾಹನದಲ್ಲಿ ಮಗುವನ್ನು ಕರೆದುಕೊಂಡು ತಮ್ಮಿಬ್ಬರ ಹಿತೈಷಿಗಳು ಹಾಗೂ ಡ್ರೈವರ್ ಜತೆಗೂಡಿ ಗಡಿ ತನಕ ಬಿಡಲು ಹೊರಟಿದ್ದರು.ಆ ಕಡೆಯಿಂದ ಬೇರೆ ವಾಹನ ಬಂದು ಮಗುವನ್ನು ಕರೆದುಕೊಂಡು ಹೋಗುವ ಬಗ್ಗೆ ಮಾತುಕತೆ ನಡೆದಿತ್ತು,ನಂತರ ಕಾರಣಾಂತರಗಳಿಂದ ಆ ಕಡೆಯಿಂದ ವಾಹನ ಬಾರದ ಹಿನ್ನೆಲೆಯಲ್ಲಿ ಬಣಕಲ್ ತನಕ ಹೋಗಿದ್ದಾರೆ.

ಕೊಟ್ಟಿಗೆಹಾರ ಬಣಕಲ್ ಸಮೀಪದಲ್ಲಿ ವಾಹನವನ್ನು ತಡೆದ ಪೋಲೀಸರು ಚಿಕ್ಕಮಗಳೂರು ಪ್ರವೇಶಿಸದಂತೆ ತಡೆದು ಹಿಂದೆ ಕಳುಹಿಸಿದ್ದರು.ಈ ಮದ್ಯೆ ಬಣಕಲ್ ನಲ್ಲಿ ತಮ್ಮ ವಾಹನದಲ್ಲಿದ್ದ ಹಿತೈಷಿಯೊಬ್ಬರ ಮನೆಗೆ ತೆರಳಿ ರೇಷನ್ ಕಿಟ್ ಹಾಗೂ ಸ್ವಲ್ಪ ಹಣವನ್ನು ನೀಡಿ ಬಂದಿದ್ದರು.ಈ ಸಂದರ್ಭದಲ್ಲಿ ಯಾರೋ ಫೋಟೋ ತೆಗೆದು ಪೋಲೀಸರಿಗೆ ತಪ್ಪು ಮಾಹಿತಿ ನೀಡಿ ವಾಹನದಲ್ಲಿ 15 ಜನ ತುಂಬಿಕೊಂಡು ಹೋಗಿದ್ದಾರೆಂದು ನಂಬಿಸಿ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಬಣಕಲ್ ಮನೆಗೆ ಜನರನ್ನು ಬಿಟ್ಟಿದ್ದಾರೆನ್ನಲಾದ ಮನೆಗೆ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು,ತಾಲೂಕು ಪಂಚಾಯತ್ ಕಾರ್ಯನಿರ್ವಾಣಾಧಿಕಾರಿ,ಬಣಕಲ್ ಠಾಣಾಧಿಕಾರಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿ ಪರಿಶೀಲನೆ ನಡೆಸಿದಾಗ ಯಾವುದೇ ಕೂಡಾ ಯಾವುದೇ ಹೊರಗಿನಿಂದ ಬಂದ ಜನ ಅಲ್ಲಿ ಕಂಡು ಬಂದಿಲ್ಲ.

ಇದೀಗ ಅಧ್ಯಕ್ಷರ ವಾಹನ ಸೀಝಾಗಿ ಅಧ್ಯಕ್ಷರು ಹಾಗೂ ಚಾಲಕನ ಮೇಲೆ ಕೇಸು ದಾಖಲಾಗಿದ್ದು ಮಾನವೀಯತೆಗೆ ಕರಗಿದ ಮನಸ್ಸಿಗೆ ಕಷ್ಟದ ಸಮಯ ಎದುರಾಗಿದೆ.ಮಾನವೀಯತೆಯ ಮೆರೆಯಲು ಹೋಗಿ ಸಮಸ್ಯೆಯಲ್ಲಿ ಸಿಲುಕಿದ ಮಂಗಳೂರು ತಾಪಂ ಅಧ್ಯಕ್ಷ ಮೊಹಮ್ಮದ್ ಮೋನು

ಮಂಗಳೂರು : ಹೌದು..ಇಂಥಹದ್ದೊಂದು ಘಟನೆ ಮಂಗಳೂರಿನಲ್ಲಿ ನಡೆದಿದೆ.ಚಿಕ್ಕಮಗಳೂರು ನೆಲೆಸಿರುವ ದಂಪತಿಗಳ 5 ವರ್ಷದ ಮಗುವೊಂದು ಲಾಕ್ ಡೌನ್ ಗಿಂತ ಮೊದಲು ಅಡ್ಯಾರ್ ತನ್ನ ಸಂಬಂಧಿಕರ ಮನೆಗೆ ಬಂದಿತ್ತು.ಲಾಕ್ ಡೌನ್ ಆಗಿದ್ದರಿಂದ ಮಗು ಕಳೆದ 21 ದಿನಗಳಿಂದ ತನ್ನ ಹೆತ್ತವರ ನೆನೆದು ಮಾನಸಿಕ ಸ್ಥಿತಿಯಲ್ಲಿತ್ತು.ಈ ಮದ್ಯೆ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನುರವರನ್ನು ಸಂಪರ್ಕಿಸಿದ ಕುಟುಂಬ ತನ್ನ ಮಗುವನ್ನು ಹೇಗಾದರೂ ಚಿಕ್ಕಮಗಳೂರು ಮುಟ್ಟಿಸಬೇಕೆಂದು ಗೋಗರೆಯುತ್ತಾ ಇದ್ದರು.ಆದರೆ ತಾಲೂಕು ಪಂಚಾಯತ್ ಅಧ್ಯಕ್ಷರು ಎಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯುತ್ತದೆ ಅಲ್ಲಿಯವರೆಗೆ ದಯವಿಟ್ಟು ಕಾಯಿರಿ ಎಂದು ಮನವೊಲಿಸಿತ್ತು.

ಆದರೆ ಎಪ್ರಿಲ್ 14ರ ತನಕದ ನಂತರವೂ ಲಾಕ್ ಡೌನ್ ಮುಂದುವರಿದ ಹಿನ್ನಲೆಯಲ್ಲಿ ಪುನಹ ಅಧ್ಯಕ್ಷರನ್ನು ಸಂಪರ್ಕಿಸಿದ ಕುಟುಂಬ ದಯವಿಟ್ಟು ತಮ್ಮ ಮಗುವನ್ನು ಮುಟ್ಟಿಸುವಂತೆ ದಂಬಾಲು ಬಿದ್ದಿತ್ತು.ಹೆತ್ತವರ ರೋದನ ಮಗುವಿನ ಸ್ಥಿತಿಯನ್ನು ಕಂಡು ಕರಗಿದ ಅಧ್ಯಕ್ಷರು ತನ್ನ ಸರಕಾರಿ ವಾಹನದಲ್ಲಿ ಮಗುವನ್ನು ಕರೆದುಕೊಂಡು ತಮ್ಮಿಬ್ಬರ ಹಿತೈಷಿಗಳು ಹಾಗೂ ಡ್ರೈವರ್ ಜತೆಗೂಡಿ ಗಡಿ ತನಕ ಬಿಡಲು ಹೊರಟಿದ್ದರು.ಆ ಕಡೆಯಿಂದ ಬೇರೆ ವಾಹನ ಬಂದು ಮಗುವನ್ನು ಕರೆದುಕೊಂಡು ಹೋಗುವ ಬಗ್ಗೆ ಮಾತುಕತೆ ನಡೆದಿತ್ತು,ನಂತರ ಕಾರಣಾಂತರಗಳಿಂದ ಆ ಕಡೆಯಿಂದ ವಾಹನ ಬಾರದ ಹಿನ್ನೆಲೆಯಲ್ಲಿ ಬಣಕಲ್ ತನಕ ಹೋಗಿದ್ದಾರೆ.

ಕೊಟ್ಟಿಗೆಹಾರ ಬಣಕಲ್ ಸಮೀಪದಲ್ಲಿ ವಾಹನವನ್ನು ತಡೆದ ಪೋಲೀಸರು ಚಿಕ್ಕಮಗಳೂರು ಪ್ರವೇಶಿಸದಂತೆ ತಡೆದು ಹಿಂದೆ ಕಳುಹಿಸಿದ್ದರು.ಈ ಮದ್ಯೆ ಬಣಕಲ್ ನಲ್ಲಿ ತಮ್ಮ ವಾಹನದಲ್ಲಿದ್ದ ಹಿತೈಷಿಯೊಬ್ಬರ ಮನೆಗೆ ತೆರಳಿ ರೇಷನ್ ಕಿಟ್ ಹಾಗೂ ಸ್ವಲ್ಪ ಹಣವನ್ನು ನೀಡಿ ಬಂದಿದ್ದರು.ಈ ಸಂದರ್ಭದಲ್ಲಿ ಯಾರೋ ಫೋಟೋ ತೆಗೆದು ಪೋಲೀಸರಿಗೆ ತಪ್ಪು ಮಾಹಿತಿ ನೀಡಿ ವಾಹನದಲ್ಲಿ 15 ಜನ ತುಂಬಿಕೊಂಡು ಹೋಗಿದ್ದಾರೆಂದು ನಂಬಿಸಿ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಬಣಕಲ್ ಮನೆಗೆ ಜನರನ್ನು ಬಿಟ್ಟಿದ್ದಾರೆನ್ನಲಾದ ಮನೆಗೆ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು,ತಾಲೂಕು ಪಂಚಾಯತ್ ಕಾರ್ಯನಿರ್ವಾಣಾಧಿಕಾರಿ,ಬಣಕಲ್ ಠಾಣಾಧಿಕಾರಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿ ಪರಿಶೀಲನೆ ನಡೆಸಿದಾಗ ಯಾವುದೇ ಕೂಡಾ ಯಾವುದೇ ಹೊರಗಿನಿಂದ ಬಂದ ಜನ ಅಲ್ಲಿ ಕಂಡು ಬಂದಿಲ್ಲ.

ಇದೀಗ ಅಧ್ಯಕ್ಷರ ವಾಹನ ಸೀಝಾಗಿ ಅಧ್ಯಕ್ಷರು ಹಾಗೂ ಚಾಲಕನ ಮೇಲೆ ಕೇಸು ದಾಖಲಾಗಿದ್ದು ಮಾನವೀಯತೆಗೆ ಕರಗಿದ ಮನಸ್ಸಿಗೆ ಕಷ್ಟದ ಸಮಯ ಎದುರಾಗಿದೆ.

Spread the love