ಮಾಯಾವತಿಯನ್ನು ವೇಶ್ಯೆಗೆ ಹೋಲಿಸಿ ಅವಹೇಳನ ಮಾಡಿದ ಬಿಜೆಪಿ ನಾಯಕ ಹುದ್ದೆಯಿಂದ ವಜಾ
ನವದೆಹಲಿ : ಸದಾ ಮಹಿಳೆಯರ ಬಗ್ಗೆ ಮಾತೆಯರ ಬಗ್ಗೆ ಗೌರವ ನೀಡುವುದಾಗಿ ಹೇಳುವ ರಾಷ್ಟ್ರೀಯ ಪಕ್ಷ ಬಿಜೆಪಿಯ ನಾಯಕನೋರ್ವ ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಿಎಸ್ಪಿ ನಾಯಕಿ ಮಾಯಾವತಿಯವರನ್ನು ವೇಶ್ಯೆಗಿಂತ ಕಡೆ ಎಂದು ಅವಹೇಳನಕಾರಿಯಾಗಿ ಮಾತನಾಡಿ ಪಕ್ಷದ ಮಹಿಳಾ ಗೌರವಕ್ಕೆ ಮುಜುಗುರು ಉಂಟು ಮಾಡಿದ್ದಾರೆ.
ಉತ್ತರ ಪ್ರದೇಶ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರೇ ಮಾಯಾವತಿಯವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಪಕ್ಷದ ನಾಯಕರ ಕೆಂಗಣ್ಣಿಗೆ ಬಲಿಯಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಬಿಎಸ್ಪಿ ಹೆಚ್ಚು ಹಣ ನೀಡಿದ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡುವ ಮೂಲಕ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದಯಾಶಂಕರ್ ಸಿಂಗ್ ಆರೋಪಿಸಿದ್ದಾರೆ.
ಮಾಯಾವತಿ ಅಭ್ಯರ್ಥಿಯೊಬ್ಬರಿಗೆ ರೂ 1 ಕೋಟಿ ಪಡೆದು ಟಿಕೆಟ್ ನೀಡಿದ್ದರು. ಬಳಿಕ ರೂ 2 ಕೋಟಿ ಕೊಟ್ಟವರಿಗೆ ನಂತರ ರೂ 3 ಕೋಟಿ ಕೊಟ್ಟವರಿಗೆ ಟಿಕೆಟ್ ನೀಡಿದ್ದಾರೆ. ಅವರ ಈ ವರ್ತನೆ ವೇಶ್ಯೆಗಿಂತ ಕಡೆ ಎಂದು ದಯಾಶಂಕರ್ ಟೀಕಿಸಿದ್ದರು.
ದಯಾಶಂಕರ್ ಅವರ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪಕ್ಷದ ಹುದ್ದೆಗಳಿಂದ ಅವರನ್ನು ವಜಾ ಮಾಡಲಾಗಿದೆ.
ದಯಾಶಂಕರ್ ಸಿಂಗ್ ಅವರ ಹೇಳಿಕೆಯನ್ನು ಖಂಡಿಸಿರುವ ಮಾಯವತಿ ಮಾಯವತಿ, ‘ಈ ರೀತಿ ಹೇಳಿಕೆ ನೀಡಿರುವುದು ಬಿಜೆಪಿಗೆ ಶೋಭೆ ತರುವುದಿಲ್ಲ’ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ರಾಜ್ಯ ಘಟಕದ ಮುಖಂಡ ಕೇಶವ್ ಮೌರ್ಯ, ‘ದಯಾಶಂಕರ್ ಸಿಂಗ್ ನೀಡಿರುವ ಹೇಳಿಕೆಗೆ ವೈಯಕ್ತಿಕವಾಗಿ ಕ್ಷಮೆ ಕೇಳುತ್ತೇನೆ. ಅವಹೇಳನಕಾರಿ ಹೇಳಿಕೆ ನೀಡಿರುವ ಸಿಂಗ್ ಕೂಡಲೇ ಮಾಯಾವತಿ ಅವರನ್ನು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ದಯಾಶಂಕರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.