ಮಾಸಾಂ – ಕೊಂಕಣಿ ಕಥಾ ಸಂಕಲನ ಬಿಡುಗಡೆ

Spread the love

ಮಾಸಾಂ – ಕೊಂಕಣಿ ಕಥಾ ಸಂಕಲನ ಬಿಡುಗಡೆ

ಆ್ಯಂಟನಿ ಬಾರ್ಕುರ್ ಬರೆದ 13 ಕಥೆಗಳ ಸಂಕಲನ `ಮಾಸಾಂ’ ಪುಸ್ತಕ ಬಿಡುಗಡೆ ಸಮಾರಂಭವು ನಗರದ ಬೆಂದೂರಿನ ಸಂತ ಸೆಬಾಸ್ಟಿಯನ್ ಸಭಾಂಗಣದಲ್ಲಿ ನಡೆಯಿತು. ಕನ್ನಡ ಸಾಹಿತಿ ಜೋಗಿ ಪುಸ್ತಕ ಬಿಡುಗಡೆಗೊಳಿಸಿ ಲೇಖಕರಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ವಂ ಆಲ್ವಿನ್ ಸೆರಾವೊ, ರಿಚಾರ್ಡ್ ಮೊರಾಸ್, ಹೆನ್ರಿ ಆಲ್ಮೇಡಾ, ಜೆ.ಎಫ್ ಡಿಸೋಜ ಹಾಗೂ ಪ್ರಕಾಶಕ ವಿತೊರಿ ಕಾರ್ಕಳ ಉಪಸ್ಥಿತರಿದ್ದರು.

ದ್ವೀಪದ ಜನರ ಭಾಷೆ-ಭಾವನೆಗಳನ್ನು ಪರಿಣಾಮಕಾರಿಯಾದ ಸಂಕಥನವಾಗಿ ಮೂಡಿಸುವಲ್ಲಿ ಆ್ಯಂಟನಿಯವರದ್ದು ಎತ್ತಿದ ಕೈ. ಅಷ್ಟೇ ಪರಿಣಾಮಕಾರಿಯಾಗಿ ಐಟಿ ಪ್ರಪಂಚದ ತಲ್ಲಣಗಳನ್ನು ಕೂಡಾ ಅವರ ಕತೆಗಳಲ್ಲಿ ಕಾಣಬಹುದು. ಈ ಸಂಕಲನವು ಕೊಂಕಣಿ ಕಥಾ ಸಾಹಿತ್ಯವನ್ನು ಇನ್ನೊಂದು ಮಜಲಿಗೇರಿಸಲಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕವಿ ಮೆಲ್ವಿನ್ ರೊಡ್ರಿಗಸ್ ಬೆನ್ನುಡಿಯಲ್ಲಿ ಹೇಳಿದ್ದಾರೆ.

ಕವಿ ಸಾಹಿತಿ ಕಿಶೂ, ಬಾರ್ಕುರ್ ಪ್ರಸ್ತಾವನೆ ಬರೆದು, ಮುಖಪುಟ ರಚಿಸಿದ್ದಾರೆ. ಇದು ಸೃಜನಾ ಪ್ರಕಾಶನದ 11ನೇ ಪುಸ್ತಕವಾಗಿದ್ದು, ಈ ಪುಸ್ತಕವು ಜನವರಿಯಲ್ಲಿ ಗೋವಾದಲ್ಲಿ ನಡೆಯುವ ಕವಿತಾ ಫೆಸ್ತ್ ಸಂದರ್ಭದಲ್ಲಿ ಕವಿತಾ ಪಬ್ಲಿಕೇಶನ್ಸ್ ನಿಂದ ದೇವನಾಗರಿ ಲಿಪಿಯಲ್ಲಿ ಪ್ರಕಟವಾಗಲಿದೆ.


Spread the love