ಮೀನುಗಾರಿಕಾ ವಿವಿ: ಅಜ್ಮಲ್ ಹುಸೈನ್ ಅವರಿಗೆ ಡಾಕ್ಟರೇಟ್ ಪದವಿ

Spread the love

ಮೀನುಗಾರಿಕಾ ವಿವಿ: ಅಜ್ಮಲ್ ಹುಸೈನ್ ಅವರಿಗೆ ಡಾಕ್ಟರೇಟ್ ಪದವಿ

ಮಂಗಳೂರು: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಜಲಪರಿಸರ ವಿಭಾಗದಲ್ಲಿ ಸೇವೆಸಲ್ಲಿಸುತ್ತಿರುವ ಪೆÇ್ರಫೆಸರ್ ಡಾ. ಎ.ಟಿ. ರಾಮಚಂದ್ರ ನಾಯ್ಕ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಅಜ್ಮಲ್ ಹುಸೈನ್ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.

‘ಜಲಕೃಷಿಯಲ್ಲಿ ಪೆÇೀಷಕಾಂಶದ ಕ್ರಿಯಾತ್ಮಕ ಸಂಬಂಧ ಏಲಿಯನ್ ಸೈಲ್ಫಿನ್ ಶಸ್ತ್ರಸಜ್ಜಿತ ಚೇಳುಮೀನು (ಟೆರಿಗೋಪ್ಲಿಕ್ತಿಸ್ ತಳಿ) ಪರಿಸರ ಮತ್ತು ಜೈವಿಕ ಮೌಲ್ಯಮಾಪನ’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಮಹಾಪ್ರಬಂದಕ್ಕೆ ಅಜ್ಮಲ್ ಹುಸೈನ್ ಅವರಿಗೆ ಪಿಎಚ್.ಡಿ. ಪದವಿ ದೊರೆತಿದೆ.

ಅಜ್ಮಲ್ ಹುಸೈನ್ ಅವರ ಪ್ರಸ್ತುತ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಂಗ ಸಂಸ್ಥೆಯಾದ ಕಲ್ಯಾಣಿ ಪಟ್ಟಣ ಕೇಂದ್ರಿಯ ಒಳನಾಡು ಜಲಕೃಷಿ ಸಂಸ್ಥೆ, ಕೊಲ್ಕತ್ತಾ ಇಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೀನುಗಾರಿಕಾ ಕಾಲೇಜು ಪ್ರಕಟಣೆ ತಿಳಿಸಿದೆ.


Spread the love