ಮುಂಗಾರು ರಂಗ ಸಿರಿ ಸರಣಿ ಕಾರ್ಯಕ್ರಮ
ಮಂಗಳೂರು: ರಂಗ ಸ್ಪಂದನ ಮಂಗಳೂರು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮುಂಗಾರು ರಂಗಸಿರಿ ಸರಣಿ ಕಾರ್ಯಕ್ರಮದ ಉದ್ಘಾಟನೆಯು ನಗರದ ಸನಾತನ ನಾಟ್ಯಾಲಯದಲ್ಲಿ ಇತ್ತೀಚೆಗೆ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸನಾತನ ನಾಟ್ಯಾಲಯದ ನೃತ್ಯ ಗುರು ಶಾರದಾಮಣಿ ಶೇಖರ್ ಮಾತನಾಡಿ, ಪ್ರಕೃತಿ ಮತ್ತು ಕಲೆಗೆ ಅವಿನಾಭಾವ ಸಂಬಂಧವಿದೆ. ಆದ್ದ ರಿಂದ ಮಳೆಗಾಲದಲ್ಲಿ ಹಮ್ಮಿಕೊಂಡಿ ರುವ ಈ ಸಾಂಸ್ಕøತಿಕ ಕಾರ್ಯಕ್ರಮ ಸರಣಿಯಿಂದ ಕಲಾಸಕ್ತರಿಗೆ ಮನರಂ ಜನೆ ದೊರೆ ಯುಂತಾಗಲಿ ಎಂದು ಹಾರೈಸಿದರು.
ಮಾನವ ಹಕ್ಕು ಹೋರಾಟಗಾರ ಕೊಲ್ಲಾಡಿ ಬಾಲಕೃಷ್ಣ ರೈ ಮಾತನಾಡಿ, ಯಾರೂ ಹುಟ್ಟುವಾಗಲೇ ತಮ್ಮ ಬದುಕಿನ ಗತಿಯನ್ನು ನಿರ್ಧರಿಸಿರುವು ದಿಲ್ಲ. ಹುಟ್ಟಿದ ಬಳಿಕ ನಡೆಯುವ ಸಂಸ್ಕಾರದಿಂದ ಜೀವನದರ್ಶನ ಆಗುತ್ತಾ ಹೋಗುತ್ತದೆ ಎಂದರು.
ಪ್ರಸ್ತುತ ಸಮಾಜದಲ್ಲಿ ಕಲಾವಿದರ ಜೀವನ ಒಂದು ಕರ್ಮವೇ ಆಗಿದೆ. ಅವರ ಕಷ್ಟನಷ್ಟಗಳ ಬಗ್ಗೆ ಕೇಳುವವರು ಇಲ್ಲವಾಗಿದೆ. ಆದರೆ ಉತ್ತಮ ಕಲಾವಿ ದರು ಮತ್ತು ಕಲಾ ಸಂಘಟಕರಿಗೆ ಜನರ ಪ್ರೀತಿ ಅಭಿಮಾನ ಲಭ್ಯವಾ ಗುತ್ತದೆ ಎಂದರು.
ಕನ್ನಡ ಚಿತ್ರ ನಿರ್ಮಾಪಕ ತಾರ ನಾಥ ಶೆಟ್ಟಿ ಬೋಳಾರ್ ಕಾರ್ಯ ಕ್ರಮಕ್ಕೆ ಶುಭ ಹಾರೈಸಿದರು. ರಂಗಸ್ಪಂದನದ ಸಂಚಾಲಕ ಹಿರಿಯ ರಂಗ ಕಲಾವಿದ ವಿ.ಜಿ.ಪಾಲ್ ಸ್ವಾಗತಿಸಿದರು. ವಿದುಷಿ ಶ್ರೀಲತಾ ನಾಗರಾಜ್ ಕಾರ್ಯಕ್ರಮ ನಿರೂಪಿ ಸಿದರು. ಸನಾತನ ನಾಟ್ಯಾಲಯದ ನಿರ್ದೇಶಕ ಚಂದರಶೇಖರ ಶೆಟ್ಟಿ ವಂದಿಸಿದರು.