ಮುದರಂಗಡಿಯಲ್ಲಿ ಐವನ್ ಡಿಸೋಜಾರಿಂದ ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆ
ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುದರಂಗಡಿ-ವಿದ್ಯಾನಗರ-ಸ್ಮಶಾನ ರಸ್ತೆ ಕಾಂಕ್ರಿಟೀಕರಣ-15 ಲಕ್ಷ, ಹಲಸಿನಕಟ್ಟೆಯಿಂದ ರಾಮ ಪೂಜಾರಿಯವರ ಮನೆ ಬದಿಯಿಂದ ಕುಂಜಿಗುಡ್ಡೆಗೆ ಸಂಪರ್ಕ ರಸ್ತ್ತೆ ಕಾಂಕ್ರಿಟೀಕರಣ-15 ಲಕ್ಷ, ಪಿಲಾರು – ಪರಾಡಿ ರಸ್ತೆ ಕಾಂಕ್ರಿಟೀಕರಣ-ರೂ. 10 ಲಕ್ಷ, ಜಾಲಮೇಲು-ಸೊರ್ಕಳ ರಸ್ತೆ ಕಾಂಕ್ರಿಟೀಕರಣ- ರೂ. 15ಲಕ್ಷ, ಪೆರ್ನಾಲ್- ಚರ್ಚ್ ರಸ್ತೆ ಕಾಂಕ್ರಿಟೀಕರಣ-ರೂ.5 ಲಕ್ಷ ಒಟ್ಟು ರೂ. 60 ಲಕ್ಷ ಮೊತ್ತದ ಕಾಮಗಾರಿಯ ಉದ್ಘಾಟನೆಯನ್ನು ವಿಧಾನಪರಿಷತ್ತಿನ ಸದಸ್ಯರಾದ ಐವನ್ ಡಿಸೋಜ ರವರು ನೆರವೇರಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿ ಸರಕಾರದ ಅಭಿವೃದ್ದಿ ಕೆಲಸಗಳು ಜನರಿಗೆ ತಲುಪಲು ಶ್ರಮಿಸುವ ಸಂದರ್ಭದಲ್ಲಿ ಸಾರ್ವಜನಿಕರು ಸರಕಾರಕ್ಕೆ ಸಹಕಾರ ನೀಡುವುದು ಅಗತ್ಯ ಎಂದರು. ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತೂರಿಗೆ ಈಗಾಗಲೇ 1 ಕೋಟಿ ರೂಪಾಯಿಯ ಗ್ರಾಮ ವಿಕಾಸ ಯೋಜನೆ ಮಂಜೂರಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ಪಿಲಾರು –ಹಲಸಿನಕಟ್ಟೆ-ರಸ್ತೆ ಅಗಲೀಕರಣ ಮತ್ತು ಕಾಂಕ್ರಿಟೀಕರಣಕ್ಕೆ 2 ಕೋಟಿ ರೂಪಾಯಿ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಮುದರಂಗಡಿ ಪೇಟೆಯ ಚತುಷ್ಪಥ ರಸ್ತೆಗೆ ಈಗಾಗಲೇ 2 ಕೋಟಿ ರೂಪಾಯಿ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ ಹಲವಾರು ಯೋಜನೆಗಳು ಕಾರ್ಯಗತವಾಗುವ ಹಂತದಲ್ಲಿವೆ. ಎಂದು ಐವನ್ ಡಿಸೋಜ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಮುದರಂಗಡಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಮೈಕಲ್ ರಮೇಶ್ ಡಿಸೋಜ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜ, ರಾಜ್ಯ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಸಂಯೋಜಕರಾದ ಪಾರೂಕ್ ಚಂದ್ರನಗರ, ಕುತ್ಯಾರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ದಿವಾಕರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಸುನಿಲ್ ಕಾಬ್ರಾಲ್, ರಾಜೇಶ್ ಮೂಲ್ಯ, ಮೆಲ್ವಿನ್ ಆರಾನ್ನ, ವಿಲ್ಸನ್ ಡಿಸೋಜ, ಅಲ್ಸಟನ್ ಡಿಕುನ್ನ, ಲ್ಯಾನ್ಸಿ ಡಿಸೋಜ, ಬ್ಯಾಸಿಲ್ ರೊಡ್ರಿಗಸ್, ಗುತ್ತಿಗೆದಾರರಾದ ಡೇನಿಸ್, ಗ್ರಾಮಸ್ಥರು ಉಪಸ್ಥಿತರಿದ್ದರು.