ಮುಲ್ಲರ್ ವೈದ್ಯಕೀಯ ಕಾಲೇಜು, ಜನರಲ್ ಸರ್ಜರಿ ವಿಭಾಗದ ವತಿಯಿಂದ ಅಂಡರ್ ಗ್ರಾಜುವೇಟ್ ಕ್ವಿಜ್ 2019
ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಜನರಲ್ ಸರ್ಜರಿ ವಿಭಾಗದ ವತಿಯಿಂದ ಅಂಡರ್ ಗ್ರಾಜುವೇಟ್ ಕ್ವಿಜ್ 2019ನ್ನು ಆಸ್ಪತ್ರೆಯ ಸಭಾಂಗಣದಲ್ಲಿ ಅಕ್ಟೋಬರ್ 26ರಂದು ಶನಿವಾರ ನೆರವೇರಿಸಲಾಯಿತು.
ಈ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಕರ್ನಾಟಕದ ಹತ್ತು ವೈದ್ಯಕೀಯ ಕಾಲೇಜುಗಳಿಂದ 49 ತಂಡಗಳು, ಸರಿಸುಮಾರು 98 ವಿದ್ಯಾರ್ಥಿಗಳು ಸ್ಪರ್ಧಿಸಿದರು.
ಉದ್ಘಾಟನ ಕಾರ್ಯಕ್ರಮವು ಪ್ರಾರ್ಥನಾ ಗೀತೆ ಮತ್ತು ದೀಪ ಬೆಳಗಿಸುವುದರೊಂದಿಗೆ ಆರಂಭಗೊಂಡಿತು. ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಎಲೋಶಿಯಸ್ ಕುವೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ| ಶ್ರೀರಾಮ್ ಭಟ್, ವಿಭಾಗ ಮುಖ್ಯಸ್ಥರು, ಶಸ್ತ್ರ ಚಿಕಿತ್ಸಾ ವಿಭಾಗ, ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಂಗಳೂರು, ಇವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ| ಲಿಯೋ ಫ್ರಾನ್ಸಿಸ್ ತಾವ್ರೋರವರು ಸ್ವಾಗತ ಭಾಷಣ ಮಾಡಿದರು. ಡಾ| ಎರಲ್ ಡಾಯಸ್, ಪ್ರಾಧ್ಯಾಪಕರು ಮುಖ್ಯ ಅಥಿತಿಯವರನ್ನು ಸಭೆಗೆ ಪರಿಚಯಿಸಿದರು. ಡಾ| ಚಿರಾಗ್ ಪಿರೇರಾರವರು ಕ್ವಿಜ್ ಮಾಸ್ಟರ್ ಆಗಿದ್ದರು.
ಪ್ರಾರಂಭಿಕ ಹಂತದಲ್ಲಿ ಲಿಖಿತ ಪರೀಕ್ಷೆಯಲ್ಲಿ ಐದು ತಂಡಗಳು ಅಂತಿಮ ಹಂತಕ್ಕೆ ತಲುಪದವು. ಪ್ರಥಮ ಬಹುಮಾನ ಸುಹಾಸ್ ಮತ್ತು ಮಾಲಿ ಅಭಿಷೇಕ್, ಎನೊಪಯ ವೈದ್ಯಕೀಯ ಕಾಲೇಜು; ದ್ವಿತೀಯ ಬಹುಮಾನ ಪ್ರಿಯಾ ಮತ್ತು ಹುಸೈನ್, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು ಮತ್ತು ತೃತೀಯ ಬಹುಮಾನವನ್ನು ಸ್ಪೂರ್ತಿ ಮತ್ತು ಲಿಖಿತ್, ಕೆಂಪೇಗೌಡ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಾಯಂಸ್ (ಏIಒS) ಬೆಂಗಳೂರು ಇವರು ಗೆದ್ದರು.
ಡಾ| ಜೋನ್ ಮಾರ್ಟಿಸ್ ಪ್ರಾಧ್ಯಪಕರು ವಂದಿಸಿದರು. ಡಾ| ಸುಪ್ರಿಯಾ ಡಿಸೋಜರವರು ಕಾರ್ಯಕ್ರಮ ನಿರೂಪಿಸಿದರು.