ಮುಷ್ಕರ ವೇಳೆ ಅಂಗಡಿ ಬಂದ್ ಮಾಡಲು ಹೋಗಿ ಮ್ಹಾಲಿಕನಿಂದ ಉಗಿಸಿಕೊಂಡ ಸಂಘಟನೆಗಳ ವೀಡಿಯೋ ವೈರಲ್!

Spread the love

ಮುಷ್ಕರ ವೇಳೆ ಅಂಗಡಿ ಬಂದ್ ಮಾಡಲು ಹೋಗಿ ಮ್ಹಾಲಿಕನಿಂದ ಉಗಿಸಿಕೊಂಡ ಸಂಘಟನೆಗಳ ವೀಡಿಯೋ ವೈರಲ್!

ಕುಂದಾಪುರ: ವಿವಿಧ ಸಂಘಟನೆಗಳು ಕರೆ ಕೊಟ್ಟ ಬಂದ್ ಗೆ ಉಡುಪಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೊಂದು ಕಡೆ ಬಲವಂತವಾಗಿ ಬಂದ್ ಮಾಡಲು ಯತ್ನಿಸಿದ ಘಟನೆಗಳು ನಡೆದವು, ಇದಕ್ಕೆ ಸಾಕ್ಷಿಯಾಗಿ ಬಂದ್ ನಿರತರು ಅಂಗಡಿ ಬಂದ್ ಮಾಡಲು ಹೋಗಿ ಅಂಗಡಿ ಮಾಲಿಕನಿಂದ ಹಿಗ್ಗಾಮುಗ್ಗ ಉಗಿಸಿಕೊಂಡು ಉಗಿಸಿಕೊಂಡು ಕಾಲ್ಕಿತ್ತ ವಿಡಿಯೋ ಸದ್ಯ ಕರಾವಳಿಯಲ್ಲಿ ವೈರಲ್ ಆಗಿದೆ.

ಬೈಂದೂರು ತಾಲೂಕು ಗುಜ್ಜಾಡಿಯಲ್ಲಿನ ಮೋಹನ್ ಗುಜ್ಜಾಡಿ ಅವರ ಅಂಗಡಿಗೆ ಬಂದ್ ನಿರತರು ಬಂದು ಅಂಗಡಿ ಮುಚ್ಚುವಂತೆ ತಿಳಿಸಿದ್ದು ಅಂಗಡಿ ಮಾಲಿಕನ ಕೋಪಕ್ಕೆ ಕಾರಣವಾಗಿದೆ. ಮೋದಿ ಪ್ರಧಾನಿಯಾಗಿ ಬಂದ್ರು, ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ನಿಮ್ಮ ಬಂದ್ ಗೆ ನನ್ನ ಸಪೋರ್ಟ್ ಇಲ್ಲ ನೀವು ಒಳ್ಳೆಯ ವಿಚಾರ ಹಿಡಿದು ಬನ್ನಿ ಅದಕ್ಕೆ ಸಪೋರ್ಟ್ ಮಾಡ್ತೇನೆ. ಮಾಡುವುದಿದ್ದರೆ ಶಬರಿಮಲೆ ವಿಚಾರವಾಗಿ ಹೋರಾಟ ಮಾಡಿ, ಅಲ್ಲಿ ಸಾವಿರ ವರ್ಷ ನೀತಿ ನಿಯಮ ಹಾಳಾಗಿದೆ. ಇದಕ್ಕೆ ನಿಮ್ಮ ಬಳಿ ಉತ್ತರ ಇಲ್ಲ, ಸಾವಿರಾರು ವರ್ಷದಿಂದ ಶಬರಿಮಲೆಯಲ್ಲಿ ಪುಣ್ಯದ ಕೆಲಸ ನಡಿತಾ ಇತ್ತು. ಮುಖ್ಯಮಂತ್ರಿ ಮಾಂಸ ತಿಂದು ಹೋಗ್ತೇನೆ ದೇವಸ್ಥಾನಕ್ಕೆ ಅಂದರೆ ಕಮ್ಯುನಿಸ್ಟ್ ನವರದ್ದು ಬಂದ್ ಇಲ್ಲಾ.

ಒಳ್ಳೆಯ ಪ್ರಧಾನಮಂತ್ರಿ ಬಂದಾಗ ನಿಮ್ಮದು ಬಂದ್ ಸ್ಟೈಕ್ ಇರುತ್ತೆ. ಯಾವುದು ಮಾನವೀಯತೆ ದೇಶದ ಬಗ್ಗೆ ಚಿಂತೆ ಮಾಡಿ ಮೊದಲು, ಅದು ಮಾನವೀಯತೆ. ದೇಶ ನಿಮಗೆ ಇಷ್ಟು ಸೌಲಭ್ಯ ನೀಡಿದೆ, ನರೇಂದ್ರ ಮೋದಿ ಸರಕಾರ ಸೌಲಭ್ಯ ನೀಡಿದೆ. ಬೆಲೆ ಏರಿಕೆ ವಿಚಾರ 2014 ರ ಲಿಸ್ಟ್ ನೋಡಿ, 2019ರ ಲೀಸ್ಟ್ ನೋಡಿ.ತಾಕತ್ತಿದ್ದರೆ ಎರಡು ಲೀಸ್ಟ್ ಟ್ಯಾಲಿ ಮಾಡಿ ನೋಡಿ. ನಮ್ಮ ದೇಶಕ್ಕೆ ಇಂತಹ ಪ್ರಧಾನಿ ಸಿಗುವುದೆ ಪುಣ್ಯ, ಕೇರಳಕ್ಕೆ ಹೋಗಿ ಸ್ಟೈಕ್ ಮಾಡಿ ಎಂದು ಕೆಂಡಕಾರಿದ್ದಾರೆ.

ಅಂಗಡಿಯಾತನ ಕೋಪ ನೋಡಿ ಪ್ರತಿಭಟನಾಕಾರರು ಕಾಲ್ಕಿತ್ತಿದ್ದಾರೆ. ಸದ್ಯ ಬಂದ್ ಮಾಡಲು ಬಂದವರ ಮತ್ತು ಮಾಲಕರ ನಡುವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Spread the love