ಮುಸ್ಲಿಂರ ವಿರುದ್ದ ಹೇಳಿಕೆ ನೀಡಿದವರ ವಿರುದ್ದ ಕೇಸು ದಾಖಲಿಸುವ ಬಿಎಸ್ ವೈ ಹೇಳಿಕೆ ಖಂಡನೀಯ -ಶರಣ್ ಪಂಪ್ವೆಲ್
ಮಂಗಳೂರು: ಮುಸ್ಲಿಂರ ವಿರುದ್ದ ಹೇಳಿಕೆ ನೀಡಿದವರ ವಿರುದ್ದ ಕೇಸು ದಾಖಲಿಸುವ ಬಿಎಸ್ ವೈ ಹೇಳಿಕೆ ಖಂಡನೀಯ ಎಂದು ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಅವರು ವೀಡಿಯೋ ಹೇಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದ್ದು, ರಾಜ್ಯದ ಮುಖ್ಯಮಂತ್ರಿಗಳು ಖಾಸಗಿ ವಾಹಿನಿಗೆ ಸಂದರ್ಶನ ನೀಡುವಾಗ ಯಾರು ಮುಸಲ್ಮಾನವರ ವಿರುದ್ದ ಮಾತನಾಡುತ್ತಾರೋ ಅಂತಹವರ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳೀದ್ದಾರೆ. ಈ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷದ್ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಈ ಹೇಳಿಕೆಯಿಂದಾಗಿ ಕರ್ನಾಟಕದ ಸಂಘಟನೆಯ ಎಲ್ಲಾ ಕಾರ್ಯಕರ್ತರಿಗೆ ನೋವಾಗಿದೆ.
ಇವರ ಹೇಳೀಕೆಯಿಂದಾಗಿ ಜಿಲ್ಲಾಡಳಿತ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕಾರ್ಯಕರ್ತರುಗಳು ಏನಾದರೂ ವಿಚಾರ ಹಾಕಿದರೆ ಅಂತಹವರನ್ನು ಕರೆದು ಅವರ ಮೇಲೆ ಕೇಸುಗಳನ್ನು ಹಾಕುವ ಕೆಲಸ ಮಾಡುತ್ತಿದೆ ಇದು ಖಂಡನೀಯ. ನಮ್ಮ ಯಾವುದೇ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಯಾವುದೇ ರೀತಿಯ ಕೇಸುಗಳನ್ನು ಹಾಕಬಾರದು ಎಂದು ಆಗ್ರಹಿಸಿದರು. ಒಂದು ವೇಳೆ ಏನಾದರೂ ಕೇಸು ಹಾಕಿದ್ದಲ್ಲಿ ತಕ್ಷಣವೇ ಆ ಕೇಸುಗಳನ್ನು ವಾಪಾಸು ಪಡೆಯಬೇಕು ಎಂದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕಮೀಷನರ್ ಅವರಲ್ಲಿ ಆಗ್ರಹಿಸಿದ್ದಾರೆ.
For specific maroons , why to blame to whole community.