ಮೂಡ ಆಯುಕ್ತ ಮನ್ಸೂರ್ ಆಲಿ, ಬ್ರೋಕರ್ ಮಹಮ್ಮದ್ ಸಲೀಂ ಗೆ ಎ. 8 ರವರೆಗೆ ನ್ಯಾಯಾಂಗ ಬಂಧನ
ದಿನಾಂಕ 23.03.2024 ರಂದು ಮುಡಾ ಆಯುಕ್ತರಾದ ಮನ್ಸೂರ್ ಅಲಿರವರ ನಿರ್ದೇಶನದಂತೆ ಬ್ರೋಕರ್ ಮಹಮ್ಮದ್ ಸಲಿಂ ರವರು ಪಿರ್ಯಾದುದಾರರಿಂದ ರೂ.25,00,000/- (ಇಪ್ಪತ್ತೈದು ಲಕ್ಷ) ಲಂಚದ ಹಣವನ್ನು ಸ್ವೀಕರಿಸುವಾಗ ಮೂಡಾ ಆಯುಕ್ತರಾದ ಮನ್ಸೂರ್ ಆಲಿರವರನ್ನು ಮತ್ತು ಲಂಚದ ಹಣವನ್ನು ಸ್ವೀಕರಿಸಿದ ಬ್ರೋಕರ್ ಮಹಮ್ಮದ್ ಸಲಿಂ ರವರನ್ನು ದಸ್ತಗಿರಿ ಮಾಡಿದ್ದು, ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2024 ಕಲಂ 7(ಎ) ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರಡಿ ಪ್ರಕರಣ ದಾಖಲಾಗಿರುತ್ತದೆ. ಮುಡಾ ಆಯುಕ್ತರಾದ ಮನ್ಸೂರ್ ಅಲಿರವರನ್ನು ಮತ್ತು ಬ್ರೋಕರ್ ಮಹಮ್ಮದ್ ಸಲಿಂ ರವರನ್ನು ದಸ್ತಗಿರಿ ಮಾಡಿ ಮಾನ್ಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ, ಮಂಗಳೂರು ಇಲ್ಲಿಗೆ ಹಾಜರುಪಡಿಸಿದ್ದು, ಘನ ನ್ಯಾಯಾಲಯವು ದಿನಾಂಕ 08.04.2023 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಇರುತ್ತದೆ.
ಆರೋಪಿತರಾದ ಮುಡಾ ಆಯುಕ್ತರಾದ ಮನ್ಸೂರ್ ಅಲಿರವರು ಮತ್ತು ಬ್ರೋಕರ್ ಮಹಮ್ಮದ್ ಸಲಿಂ ರವರು ಘನ ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಈ ದಿನ ದಿನಾಂಕ 05.04.2024 ರಂದು ಮಾನ್ಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ, ಮಂಗಳೂರು ಇಲ್ಲಿನ ನ್ಯಾಯಾಧೀಶರಾದ ಶ್ರೀಮತಿ ಸಂಧ್ಯಾ ಎಸ್ ರವರು ವಿಚಾರಣೆ ನಡೆಸಿ, ಆರೋಪಿತರಿಗೆ ಜಾಮೀನು ನಿರಾಕರಿಸಿರುತ್ತಾರೆ. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀ ರವೀಂದ್ರ ಮುನ್ನಿಪ್ಪಾಡಿ ರವರು ವಾದಿಸಿರುತ್ತಾರೆ