ಮೂಡಬಿದ್ರೆ: ವೃದ್ಧ ಮಹಿಳೆಯ ಕುತ್ತಿಗೆಯಿಂದ ಸರಗಳ್ಳತನ ಮಾಡಿದ ಆರೋಪಿಯ ಬಂಧನ

Spread the love

ಮೂಡಬಿದ್ರೆ: ವೃದ್ಧ ಮಹಿಳೆಯ ಕುತ್ತಿಗೆಯಿಂದ ಸರಗಳ್ಳತನ ಮಾಡಿದ ಆರೋಪಿಯ ಬಂಧನ

ಮೂಡಬಿದ್ರೆ: ಹಿರಿಯ ನಾಗರಿಕ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಹೋದ ಆರೋಪಿಯನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಕಾರ್ಕಳ ಕಾಂತಾವರ ನಿವಾಸಿ ಪ್ರಶಾಂತ್ ಸಾಲಿಯನ್ @ ಪಚ್ಚು (34) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 31-03-2025 ರಂದು ಮದ್ಯಾಹ್ನ ಬೆಳುವಾಯಿ ಗ್ರಾಮದ ಗುಜ್ಜರ ಗುಂಡಿ ಎಂಬಲ್ಲಿ ಶ್ರೀಮತಿ ಇಂದಿರಾ, ಪ್ರಾಯ: 70 ವರ್ಷ, ಎಂಬದರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಕೆಂಪು ಬಣ್ಣದ ಮೋಟಾರು ಸೈಕಲಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಓರ್ವ ಕಸಿದುಕೊಂಡು ಹೋದ ಬಗ್ಗೆ, ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಪ್ರಕರಣದ ಆರೋಪಿಗಳ ಮತ್ತು ಸೊತ್ತು ಪತ್ತೆಯ ಬಗ್ಗೆ ಮೂಡಬಿದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ ವೃದ್ಧ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಸುಲಿಗೆ ಮಾಡಿದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಯು ಈ ಮೇಲೆ ನಮೂದಿಸಿದ ಕೃತ್ಯವನ್ನು ವ್ಯಸಗಿರುವುದಾಗಿ ಒಪ್ಪಿಕೊಂಡಿದ್ದು ಹಾಗೂ ದಿನಾಂಕ: 02-12-2024 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕಾಂತಾವರ ಅಂಬರೀಶ್ ಗುಹೆ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯ ಕುತ್ತಿಗೆಯಿಂದ ಸುಲಿಗೆ ನಡೆಸಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈ ಬಗ್ಗೆ ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲಿ ರುತ್ತದೆ.

ಪ್ರಕರಣದಲ್ಲಿ ದಸ್ತಗಿರಿ ಮಾಡಿದ ಆರೋಪಿಯಿಂದ ಮೇಲೆ ನಮೂದಿಸಿದ ಪ್ರಕರಣದಲ್ಲಿ ಸುಲಿಗೆ ಮಾಡಿದ ಚಿನ್ನದ ಮಾಂಗಲ್ಯ ಕರಿಮಣಿ ಸರ ಹಾಗೂ ಚಿನ್ನದ ಸರದ ಒಂದು ತುಂಡು ಸ್ವಾಧೀನಪಡಿಸಿಕೊಂಡಿದ್ದು ಹಾಗೂ ಆರೋಪಿಯು ಕೃತ್ಯಕ್ಕೆ ಬಳಸಿದ ಕೆಂಪು ಬಣ್ಣದ KA 20 X 3393 ನೇ TVS Apache ಮೊಟಾರು ಸೈಕಲ್ ನ್ನು ಕೂಡ ಸ್ವಾಧೀನ ಪಡೆಸಿಕೊಂಡಿರುವುದಾಗಿದೆ. ಸ್ವಾಧೀನ ಪಡಿಸಿಕೊಂಡಿರುವ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 3,30,000/- ರೂ ಆಗಬಹುದು.

ಈ ಪ್ರಕರಣದಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್, IPS ರವರ ಮಾರ್ಗದರ್ಶನದಂತೆ, ಮಾನ್ಯ DCP ರವರುಗಳಾದ ಶ್ರೀ ಸಿದ್ಧಾರ್ಥ ಗೊಯಲ್ IPS (ಕಾ&ಸು), ಶ್ರೀ ರವಿಶಂಕರ್ DCP (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಮಾನ್ಯ ACP ಶ್ರೀ ಶ್ರೀಕಾಂತ್. ಕೆ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡ ಪಿ.ಎಸ್.ಐ ಗಳಾದ ಶ್ರೀ ಕೃಷ್ಣಪ್ಪ ಮತ್ತು ಶ್ರೀಮತಿ ಪ್ರತಿಭ ಕೆ.ಸಿ, ಹಾಗೂ ಎ.ಎಸ್.ಐ ರಾಜೇಶ್ ಮತ್ತು ಹೆಚ್.ಸಿ ಗಳಾದ ರಾಜೇಶ್, ಮೊಹಮ್ಮದ್ ಇಕ್ಬಾಲ್ , ಪ್ರದೀಪ್ ಕುಮಾರ್ ಬಣಗರ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್ ಲಮಾಣಿ ಮತ್ತು ಪಿ.ಸಿ ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.


Spread the love
Subscribe
Notify of

0 Comments
Inline Feedbacks
View all comments