ಮೂಡಿಗೆರೆ : ನಗರಕ್ಕಿಂತ ಹಳ್ಳಿಗಳಲ್ಲೇ ಲಾಕ್ಡೌನ್ ಯಶಸ್ವಿ -ಹತ್ತು ಮಂದಿ ಸಮ್ಮುಖದಲ್ಲಿ ವಿವಾಹ

Spread the love

ಮೂಡಿಗೆರೆ : ನಗರಕ್ಕಿಂತ ಹಳ್ಳಿಗಳಲ್ಲೇ ಲಾಕ್ಡೌನ್ ಯಶಸ್ವಿ -ಹತ್ತು ಮಂದಿ ಸಮ್ಮುಖದಲ್ಲಿ ವಿವಾಹ

ಮೂಡಿಗೆರೆ: ಕೊರೋನ ಆತಂಕದಿಂದ ಇಡೀ ದೇಶವೇ ಲಾಕ್ ಡೌನ್ ಆಗಿ ಇಂದಿಗೆ 33 ದಿನ. ದಿನಕಳೆದಂತೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲಾ ಲಾಕ್ ಡೌನ್ ಕೂಡ ವಿಸ್ತರಣೆ ಆಯ್ತು. ಹಳ್ಳಿಯ ಜನ ಸರ್ಕಾರದ ಆದೇಶಕ್ಕೆ ಬೆಲೆ ಕೊಟ್ಟು ಮನೆಯಲ್ಲೇ ಇದ್ದು ಲಾಕ್ ಡೌನ್ ಯಶಸ್ವಿ ಮಾಡಿದರು. ಆದರೆ, ನಗರ ಪ್ರದೇಶದ ಜನರೇ ಬೇಕಾಬಿಟ್ಟಿ ಓಡಾಡಿ ಪೊಲೀಸರಿಗೂ ತಲೆನೋವು ತರಿಸಿ, ಓದೆ ತಿಂದು ಕೋರೋನ ಭಯ, ಸರ್ಕಾರದ ಭಯ ಹಾಗೂ ಪೊಲೀಸರ ಯಾರ ಭಯವೂ ಇಲ್ಲದಂತೆ ವರ್ತಿಸಿದ್ದರು. ಆದರೆ, ಯಶಸ್ವಿಯಾಗಿ ಲಾಕ್ ಡೌನ್ ಯಶಸ್ವಿಗೊಳಿಸಿದ ಕೀರ್ತಿಯಲ್ಲಿ ಹಳ್ಳಿಗರದ್ದೇ ಸಿಂಹಪಾಲು. ಯಾಕಂದ್ರೆ, ಹಳ್ಳಿಗರು ಮದುವೆ ಕೂಡ ಸರ್ಕಾರ ಹೇಳಿದಂತೆ ಹತ್ತೇ ಹತ್ತು ಜನರಲ್ಲಿ ಮಾಡಿ ಮುಗಿಸಿ ಕೊರೋನ ಭಯದಲ್ಲಿದ್ದಾರೆ. ಹಳ್ಳಿಗರ ನಡೆ ಕಂಡು ಅಧಿಕಾರಿ ವರ್ಗ ಹಾಗೂ ಪೊಲಿಸರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಯಾಕಂದ್ರೆ, ಕೊರೋನ ಆತಂಕ ಹಾಗೂ ಸರ್ಕಾರದ ಆದೇಶ ಹಿನ್ನೆಲೆ ಇಂದು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲೂ ಕೇವಲ ಹತ್ತೇ ಹತ್ತು ಜನರ ಮಧ್ಯೆ ಅತಿ ಸರಳವಾದ ಮದುವೆಯೊಂದು ನಡೆದಿದೆ. ಮೂಡಿಗೆರೆ ನಗರದ ರೈತ ಭವನದಲ್ಲಿ ಇಂದು ಬೈದುವಳ್ಳಿ ಗ್ರಾಮದ ರಂಜಿತ್ ಹಾಗೂ ಮೇಘ ಮದುವೆ ನಿಶ್ಚಯವಾಗಿತ್ತು. ಕೊರೋನ ಆತಂಕದಿಂದ ದೇಶವೇ ಲಾಕ್ಡೌನ್ ಆಗಿ, ದಿನದಿಂದ ದಿನಕ್ಕೆ ಆತಂಕದಿಂದ ಬದುಕುತ್ತಿದ್ದೆ. ಹಾಗಾಗಿ, ಮದುವೆ ಹಾಗೂ ಯಾವುದೇ ಶುಭಸಮಾರಂಭಗಳಿಗೆ ಸರ್ಕಾರ ಅವಕಾಶ ನೀಡುತ್ತಿಲ್ಲ. ಈ ಹಿನ್ನೆಲೆ ಬೈದುವಳ್ಳಿ ಗ್ರಾಮದ ಈಶ್ವರನ ದೇವಾಲಯದಲ್ಲಿ ಸರಳವಾಗಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ವೇಳೆ, ವಧು-ವರರ ಹೆತ್ತವರು, ಅರ್ಚಕರು, ಆಪ್ತರಷ್ಟೆ ಭಾಗವಹಿಸಿದ್ದರು. 10 ಜನಕ್ಕಿಂತ ಹೆಚ್ಚಿನ ಜನ ಸೇರಿರಲಿಲ್ಲ. ಮದುವೆಯಲ್ಲಿ ಭಾಗಿಯಾದ ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ವಧು-ವರರೂ ಕೂಡ ಮಾಸ್ಕ್ ಹಾಕಿಕೊಂಡೇ ನವಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಮಾಡಿಸಿದ ಪುರೋಹಿತರು ಕೂಡ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಮದುವೆ ಮಾಡಿಸಿದ್ದಾರೆ.


Spread the love