ಮೈಸೂರು:  ಯದುವೀರರಿಗೆ ಪಟ್ಟಾಭಿಷೇಕ: ಅರಮನೆಯಲ್ಲಿ ರಾಜವೈಭವ

Spread the love

ಮೈಸೂರು: ವಿಶ್ವವಿಖ್ಯಾತ ಮೈಸುರು ಅರಮನೆಯಲ್ಲಿ ಈಗ ಮತ್ತೆ ರಾಜವೈಭವ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಉತ್ತರಾಧಿಕಾರಿಯಾಗಿ ಯದುವೀರ ಅವರಿಗೆ ಗುರುವಾರ ಬೆಳಗ್ಗೆ 9.25ರಿಂದ 10.35ರಲ್ಲಿ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಪಟ್ಟಾಭಿಷೇಕ ನೆರವೇರಿತು. ಯದುವೀರ ಅವರು ಯದುವಂಶದ 27ನೇ ಅರಸರಾಗಿದ್ದಾರೆ.

mysur

ಮುಂಜಾನೆಯಿಂದಲೇ ಧಾರ್ವಿುಕ ಕಾರ್ಯಗಳು ನಡೆದವು. ಯದುವೀರಗೆ ಮಂಗಳ ಸ್ನಾನ ಮಾಡಿಸಿದ ಬಳಿಕ ಪುರೋಹಿತರು ಸಂಕಲ್ಪ ಮಾಡಿಸಿ, ಬೆಳ್ಳಿಯ ಭದ್ರಾಸನದಲ್ಲಿ ಯದುವೀರ್ ಹೆಸರನ್ನು ಬರೆದಿರುವ ಚಿನ್ನದ ತಗಡನ್ನು ರಾಜಗುರುಗಳು ಇರಿಸಿದರು. ಬಳಿಕ ಯದುವೀರ, ಕುಲದೇವತೆಯನ್ನು ನೆನೆದು ಭದ್ರಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಆಸೀನರಾದರು. 22 ವರ್ಷ ವಯಸ್ಸಿನ ಯದುವೀರರ ಪಟ್ಟಾಭಿಷೇಕ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಭಾವಿ ಪತ್ನಿ ತ್ರಿಷಿಕಾಕುಮಾರಿ ಸಿಂಗ್ ಕೂಡ ಸಾಕ್ಷಿಯಾದರು. ರಾಜ್ಯದ ಅನೇಕ ಗಣ್ಯರು ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಸಂಜೆ ಅರಮನೆ ಆವರಣದಲ್ಲಿ ಆರತಕ್ಷತೆ ನೆರವೇರಲಿದೆ.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಚಿವರಾದ ರೋಷನ್ ಬೇಗ್, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಶ್ರೀನಿವಾಸ್ ಪ್ರಸಾದ್, ಕೆಎಸ್​ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್, ಮೈಸೂರು ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಶಿಖಾ, ಎಸ್​ಪಿ ದಯಾನಂದ ಮುಂತಾದವರು ಪಾಲ್ಗೊಂಡಿದ್ದರು.


Spread the love