ಮೇ 4 ರಿಂದ ಉಡುಪಿ ಜಿಲ್ಲೆಯಲ್ಲಿ ಒಂದು ಗಂಟೆಯವರೆಗೆ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶ – ರಘುಪತಿ ಭಟ್
ಉಡುಪಿ: ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ವಿಧಿಸಿದ್ದ ನಿರ್ಬಂಧ ಕೊನೆಗೂ ತೆರವುಗೊಳಿಸಿದ್ದು, ಮೇ 4 ರಿಂದ ಉಡುಪಿಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಭಟ್ ನಮ್ಮ ಜಿಲ್ಲೆಯಲ್ಲಿ ಮದ್ಯವನ್ನು ಸಂಜೆಯ ತನಕ ಮಾರಾಟ ಮಾಡುವುದಿಲ್ಲ ಬದಲಾಗಿದ ವೈನ್ ಶಾಪ್ ಎಂಎಸ್ಐಎಲ್ ಗಳನ್ನು ಮಧ್ಯಾಹ್ನದವರೆಗೆ ಮಾತ್ರ ತೆರೆಯುತ್ತೇವೆ. ನಮ್ಮ ಜಿಲ್ಲೆಗೆ ವೈನ್ ಶಾಪ್ ಮದ್ಯದಂಗಡಿ ಮುಖ್ಯ ಅಲ್ಲ ಜಿಲ್ಲೆಯ ಜನರ ಆರೋಗ್ಯ ನಮಗೆ ಮುಖ್ಯ. ರಾಜ್ಯ ಸರ್ಕಾರ ಹೇಳಿದ್ರು ನಮ್ಮ ಜಿಲ್ಲೆಯಲ್ಲಿ ಒಂದು ಗಂಟೆಗೆ ಮದ್ಯದಂಗಡಿ ಬಂದ್ ಆಗುತ್ತದೆ ಎಂದರು.
ಬ್ಯೂಟಿ ಪಾರ್ಲರ್ ಮತ್ತು ಸೆಲೂನ್ ಗಳನ್ನು ಒಂದು ವಾರ ಓಪನ್ ಮಾಡುವುದಿಲ್ಲ.ಸೆಲೂನ್ ತೆರೆಯಲು ಕೇಂದ್ರ ಸರ್ಕಾರದ ಗೈಡ್ಲೈನ್ಸ್ ಇದೆ. ಕೇಂದ್ರ ರಾಜ್ಯ ನಿರ್ದೇಶನ ಇದ್ದರೂ ಜನರ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ ಲಾಕ್ ಡೌನ್ ಮುಗಿಯುವ ತನಕ ಜಿಲ್ಲೆಯಲ್ಲಿ ಯಾವುದೇ ಡೆಂಟಲ್ ಕ್ಲಿನಿಕ್ ತೆರೆಯಲ್ಲ ಎಂದರು.