ಮೇಯಲು ಬಿಟ್ಟ ದನಗಳ್ಳತನ : ಇಬ್ಬರ ಬಂಧನ

Spread the love

ಮೇಯಲು ಬಿಟ್ಟ ದನಗಳ್ಳತನ : ಇಬ್ಬರ ಬಂಧನ

ಮಂಗಳೂರು: ಮೇಯಲು ಬಿಟ್ಟ ದನಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 19-10-2024 ರಂದು ತಂಕ ಎಡಪದವು ಗ್ರಾಮ, ಪಂಚಾಯತ ಕಛೇರಿಯ ಬಳಿ ಮೇಯಲು ಬಿಟ್ಟ ದನಗಳನ್ನು ಮತ್ತು ದಿನಾಂಕ 21-10-2024 ರಂದು ತೆಂಕ ಎಡಪದವು ಗ್ರಾಮದ ಪದರಂಗಿ ಕೊರ್ಡೇಲ್ ಎಂಬಲ್ಲಿ ಮೇಯಲು ಬಿಟ್ಟ ದನಗಳನ್ನು ಯಾರೋ ಕಳ್ಳರು ಕಾರಿನಲ್ಲಿ ತುಂಬಿಸಿ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ದನ ಕಳವಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುತ್ತವೆ.

ಈ ಪ್ರಕರಣದಲ್ಲಿ ದನಗಳನ್ನು ಕಳವು ಮಾಡಿರುವ ಆರೋಪಿತರ ಪತ್ತೆಯ ಬಗ್ಗೆ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ರವರು ವಿಶೇಷ ದಂಡತವನ್ನು ರಚನೆ ಮಾಡಿದಂತೆ ಪಿ.ಎಸ್.ಐ ರೇವಣಸಿದ್ದಪ್ಪ ಮತ್ತು ಕುಮಾರೇಶನ್ ರವರು ಸಿಬ್ಬಂದಿಗಳೊಂದಿಗೆ ದನಗಳನ್ನು ಕಳವು ಮಾಡಿ ಕಡಿದು ಮಾಂಸ ಮಾಡಿರುವ ಆರೋಪಿತರ ಪೈಕಿ ಮೂಡಬಿದ್ರೆ ಕರಿಂಜೆ ನಿವಾಸಿ ಮೊಹಮ್ಮದ್ ರಫೀಕ್ @ ರಫೀಕ್ (31) ಮತ್ತು ಶೌಕತ್ ಆಲಿ @ ಶೌಕತ್ (34) ಎಂಬವರನ್ನು ಮತ್ತು ದನಕಳವು ಮಾಡಲು ಬಳಸಿರುವ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ KA 19 MD 3957 ನೇ ನಂಬ್ರದ ಬಿಳಿ ಬಣ್ಣದ ರಿಡ್ಜ್ ಕಾರ್ ನ್ನು ಹಾಗು ಇತರೆ ಸೊತ್ತುಗಳನ್ನು ದಿನಾಂಕ 22-12-2024 ರಂದು ಸ್ವಾಧೀನಪಡಿಸಿಕೊಂಡಿರುತ್ತಾರೆ. ಆರೋಪಿತರು ಹಾಲಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಆರೋಪಿತರ ವಿರುದ್ಧ ಮೂಡುಬಿದ್ರೆ ಪೊಲೀಸ್ ಠಾಣೆ, ಉಡುಪಿಯ ಅಜೇಕಾರು ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದನ ಕಳವಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುತ್ತವೆ. ತಲೆಮರೆಸಿಕೊಂಡಿರುವ ಆರೋಪಿತರ ಪತ್ತೆ ಕಾರ್ಯ ಮುಂದುವರೆದಿರುತ್ತದೆ.

ಈ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್ IPS ರವರ ಮಾರ್ಗದರ್ಶನದಂತೆ, ಮಾನ್ಯ DCP ಯವರಾದ ಶ್ರೀ ಸಿದ್ದಾರ್ಥ ಗೋಯೆಲ್ (ಕಾ&ಸು) ಮತ್ತು ಶ್ರೀ ಕೆ ರವಿ ಶಂಕರ್ (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀ ಶ್ರೀಕಾಂತ K ಮತ್ತು ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ PSI ರೇವಣಸಿದ್ದಪ್ಪ, PSI ಕುಮಾರೇಶನ್, PSI ಲತಾ, ಸಿಬ್ಬಂದಿಯವರಾದ ಸುಜನ್, ಮಂಜುನಾಥ, ರಶೀದ ಶೇಖ್, ದಯಾನಂದ, ಬಸವರಾಜ್ ಪಾಟೀಲ್, ಚಿದಾನಂದ, ಭರಮಾ ಬಡಿಗೇರ್, ಪ್ರಕಾಶ್ ಗೌಡ, ಮದು, ಕು|| ವಿದ್ಯಾ, ದುರ್ಗಾ ಪ್ರಸಾದ, ಸುರೇಶ್, ವಿರುಪಾಕ್ಷ, ಪರಸಪ್ಪ, ಪ್ರಜ್ವಲ್, ವಿರೇಶ್ ಹಿರೇಮಠ ಮತ್ತು ಇತರ ಸಿಬ್ಬಂದಿಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.


Spread the love
Subscribe
Notify of

0 Comments
Inline Feedbacks
View all comments