Spread the love
ಮೊಬೈಲ್ ಚಾರ್ಜ್ ಹಾಕಿದ್ದ ವೇಳೆ ವಯರ್ ಕಡಿದು 4 ವರ್ಷದ ಮಗು ಸಾವು
ಚಿಕ್ಕಮಗಳೂರು: ಮೊಬೈಲ್ ಚಾರ್ಜ್ ಹಾಕಿದ್ದ ವೇಳೆ ಚಾರ್ಜರ್ ವೈರ್ನ್ನು ಬಾಯಲ್ಲಿ ಕಡಿದ ಪರಿಣಾಮ ವಿದ್ಯುತ್ ಶಾಕ್ನಿಂದ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೂಡಿಗೆರೆ ತಾಲೂಕಿನ ಆಲ್ದೂರಿನಲ್ಲಿ ಈ ಘಟನೆ ನಡೆದಿದ್ದು, ವಗರ್ ರಸ್ತೆಯ ನಿವಾಸಿಗಳಾದ ಲೀಲಾ ಇಂದ್ರೇಶ್ ದಂಪತಿಯ ಮಗ ಅಭಿಜ್ಞಾನ್ (4) ಮೃತ ಪಟ್ಟ ಬಾಲಕ. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಗು ಚಾರ್ಜರ್ ವೈರ್ ಕಡಿದು ವಿದ್ಯುತ್ ಶಾಕ್ನಿಂದ ಬಿದ್ದು ಹೊರಳಾಡಿದೆ. ಮನೆಯವ್ರು ಕೂಡಲೇ ಮಗುವನ್ನ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಬೆಳಗ್ಗೆಯಿಂದಲೂ ಮಗುವಿಗೆ ಚಿಕಿತ್ಸೆ ನೀಡಿದ್ರು ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.
ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
Spread the love