Spread the love
ಮೋದಿ ಭಾವಚಿತ್ರದ ಸೀರೆ ಮಾರಾಟ; ಉದ್ಯಾವರ ಜಯಲಕ್ಷ್ಮೀ ಸ್ಟೋರ್ಸ್ ಗೆ ಚುನಾವಣಾ ಆಯೋಗ ದಾಳಿ
ಉಡುಪಿ : ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹೊಂದಿದ ಸೀರೆಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ವ ಉದ್ಯಾವರದ ಪ್ರಖ್ಯಾತ ಬಟ್ಟೆ ಮಳಿಗೆಗೆ ಚುನಾವಣಾ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ ಘಟನೆ ನಡೆದಿದೆ.
ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ಮತ್ತು ಕ್ಲೋತ್ ಸ್ಟೋರ್ಸ್ ಮಳಿಗೆಗೆ ಮೋದಿ ಬ್ರಾಂಡ್ ಸೀರೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಚುನಾವಣಾ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಕೆಲವು ದಿನಗಳ ಹಿಂದೆ ಸೀರೆ ಮಾರಾಟವಾದ ಕುರಿತು ಬಿಲ್ಲೊಂದು ಸಿಕ್ಕಿಂದ ಪರಿಣಾಮ ಚುನಾವಣಾಧಿಕಾರಿಗಳ ನೇತೃತ್ವದ ತಂಡ ಪರಿಶೀಲನೆ ನಡೆಸಿದ್ದು ಈ ವೇಳೆ ಸಂಸ್ಥೆಯ ಮಾಲಕರು ಅಧಿಕಾರಿಗಳೊಂದಿಗೆ ತನಿಖೆಗೆ ಸಹಕರಿಸಿಲ್ಲ ಎನ್ನಲಾಗಿದೆ.
ಅದರಂತೆ ಮಂಗಳವಾರ ಪೊಲೀಸ್ ಅಧಿಕಾರಿಗಳ ಭದ್ರತೆಯೊಂದಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Spread the love