ಯಕ್ಷೋತ್ಸವ-2020, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Spread the love

ಯಕ್ಷೋತ್ಸವ-2020, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರಥಮ ಸ್ಥಾನ

ಮೂಡುಬಿದಿರೆ: ಮಂಗಳೂರಿನ ಎಸ್.ಡಿ.ಎಮ್ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ನಡೆದ 29ನೇ ವರುಷದ ಯಕ್ಷೋತ್ಸವ-2020, ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಫರ್ಧೆಯಲ್ಲ್ಲಿ ಮೂಡುಬಿದರೆಯ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಆರನೇ ಭಾರಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡರು.

ತರಣಿಸೇನ ಕಾಳಗ ಪ್ರಸಂಗದಲ್ಲಿ ತರಣಿಸೇನ ಪಾತ್ರದಾರಿ ಶಬರೀಶ್ ಆಚಾರ್ಯಗೆ ಸಮಗ್ರ ವೈಯಕ್ತಿಕ ಪ್ರಥಮ ಬಹುಮಾನ ಮತ್ತು ರಾವಣ ಪಾತ್ರದಾರಿ ಸಾತ್ವಿಕ್ ಎನ್.ಬಿ. ರವರಿಗೆ ವೈಯಕ್ತಿಕ ಬಣ್ಣದ ವೇಷಕ್ಕೆÉ ಬಹುಮಾನ ದೊರಕಿದೆ.

ಬಲಿಪ ಶಿವಶಂಕರ್ ಭಟ್, ಮಯೂರ ನಾಯ್ಗ, ಸವಿನಯ ನೆಲ್ಲಿತೀರ್ಥ, ಯಜ್ನೇಶ್ ರೈ ಕಟೀಲ್, ಮಿನ್ವಿತ್ ಶೆಟ್ಟಿ ಇರಾ, ಸಾತ್ವಿಕ್ ನೆಲ್ಲಿತೀರ್ಥ, ರಜತ್ ಈಶ್ವರಮಂಗಲ, ಶ್ರೀವತ್ಸ ಹೆಗಡೆ ಶಿರಸಿ, ಕೌಶಲ್ಯ ರಾವ್ ಪುತ್ತಿಗೆ, ಪ್ರಥ್ವೀಶ್ ಶೆಟ್ಟಿಗಾರ್ ಪರ್ಕಳ, ಈಶ್ವರ ಶೆಟ್ಟಿ ಕಟೀಲು ಮತ್ತು ಜ್ಯೋತಿ ಆಚಾರ್ಯ ಮುನಿಯಾಲು ತಂಡದ ಕಲಾವಿದರಾಗಿದ್ದಾರೆ. ಶೇಕರ್ ಡಿ ಶೆಟ್ಟಗಾರ್, ಪ್ರಸಾದ್ ಚೇರ್ಕಾಡಿ ಮತ್ತು ಆದಿತ್ಯ ಅಂಬಲಪಾಡಿ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುಪ್ರಸಾದ್ ಭಟ್ ಹಾಗೂ ಶ್ರೀಕಾಂತ್ ಪೆಲತ್ತೂರು ತಂಡದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.


Spread the love