ಯು.ಎ.ಇ. ಬಂಟ್ಸ್ ಅಧ್ಯಕ್ಷರಾಗಿ ವಕ್ವಾಡಿ ಪ್ರವೀಣ್‌ಕುಮಾರ್ ಶೆಟ್ಟಿ ಅಧಿಕಾರ ಸ್ವೀಕಾರ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಕರ್ನಾಟಕ ಪರ ಸಂಘಟನೆಗಳು ಕಾರ್ಯೊನ್ಮುಕವಾಗಿದೆ. ಇವುಗಳಲ್ಲಿ ಅತ್ಯಂತ ಹಿರಿಯ ಸಂಘಟನೆಗಳಲ್ಲಿ 47 ವರ್ಷಗಳಿಂದ ಯಶಸ್ವಿ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಯು.ಎ.ಇ. ಬಂಟ್ಸ್ ಎಕ್ಸಿಕ್ಯೂಟ್ ಬೋರ್ಡ್ ನ ವಾರ್ಷಿಕ ಮಹಾಸಭೆ ದುಬಾಯಿ ಕರಾಮದಲ್ಲಿರುವ ಫಾರ್ಚೂನ್ ಆಟ್ರಿಯಂ ಹೋಟೆಲ್ ಸಭಾಂಗಣದಲ್ಲಿ 2024 ಡಿಸೆಂಬರ್ 14ನೇ ತಾರೀಕಿನಂದು ಮಧ್ಯಾಹ್ನ 3.00ಗಂಟೆಯಿAದ ನಡೆಯಿತು.
ಶ್ರೀ ವಕ್ವಾಡಿಪ್ರವೀಣ್‌ಕುಮಾರ್‌ಶೆಟ್ಟಿಯವರು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದಆಯ್ಕೆ.
ಯು.ಎ.ಇ. ಬಂಟ್ಸ್ಉಪಾಧ್ಯಕ್ಷರಾಗಿ ಹಲವು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಶ್ರೀ ವಕ್ವಾಡಿ ಪ್ರವೀಣ್‌ಕುಮಾರ್ ಶೆಟ್ಟಿಯವರುನೂತನಅಧ್ಯಕ್ಷರಾಗಿ ಸರ್ವಾನುಮತದಿಂದಆಯ್ಕೆ ಮಾಡಲಾಯಿತು. ನಿಕಟ ಪೂರ್ವಅಧ್ಯಕ್ಷರಾಗಿರುವ ಶ್ರೀ ಸರ್ವೋತ್ತಮ ಶೆಟ್ಟಿಯವರಿಂದಅಧಿಕಾರ ಹಸ್ತಾಂತರ ಸ್ವೀಕರಿಸಿದ ನಂತರ ನೂತನ ಆಡಳಿತ ಮಂಡಳಿಯ ಸರ್ವ ಸದಸ್ಯರಿಂದ ಪ್ರಮಾಣ ವಚನ ಸ್ವೀಕರಿಸಿದರು. 2025-26 ನೆ ಸಾಲಿನ ಯು.ಎ.ಇ. ಬಂಟ್ಸ್ ನ ಕಾರ್ಯಕಾರಿ ಸಮಿತಿಯವರು ಸಹ ಉಪಸ್ಥಿತರಿದ್ದರು.
ನೂತನಅಧ್ಯಕ್ಷರಾಗಿಅಧಿಕಾರವನ್ನು ಸ್ವೀಕರಿಸಿದ ಶ್ರೀ ವಕ್ವಾಡಿಪ್ರವೀಣ್‌ಕುಮಾರ್ ಶೆಟ್ಟಿಯವರು ತಮ್ಮನ್ನುಆಯ್ಕೆಮಾಡಿರುವಯು.ಎ.ಇ. ಬಂಟ್ಸ್ ಆಡಳಿತ ಮಂಡಳಿಗೆ ತನ್ನ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಸಂಘಟನೆಯನ್ನು ಯಶಸ್ವಿ ಪಥದತ್ತಕೊಂಡೊಯ್ಯುವ ಭರವಸೆಯನ್ನು ನೀಡಿ ಸರ್ವರ ಸಲಹೆ ಸಹಕಾರ ಬೆಂಬಲ ನೀಡುವಂತೆ ಮನವಿಯನ್ನು ಮಾಡಿದರು.
ಕಳೆದ ನಾಲ್ಕುವರೆ ದಶಕಗಳಿಂದ ಯು.ಎ.ಇ. ಬಂಟ್ಸ್ ವಾರ್ಷಿಕ ಸ್ನೇಹ ಮಿಲನ, ಯು.ಎ.ಇ. ಬಂಟ್ಸ್ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವಿಹಾರಕೂಟ, ಕ್ರೀಡಾಕೂಟ, ಕ್ರಿಕೆಟ್ ಪಂದ್ಯಾಟ, ರಕ್ತದಾನ ಶಿಬಿರ, ಊರಿನಲ್ಲಿಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು ನೀಡುತ್ತಾ ಬರುತ್ತಿದೆ.
ಯು.ಎ.ಇ. ಬಂಟ್ಸ್2024 ನೇ ಸಾಲಿನ 47ನೇ ವಾರ್ಷಿಕೋತ್ಸವದಜೊತೆಯಲ್ಲಿಗಲ್ಫ್ ಬಂಟೋತ್ಸವದುಬಾಯಿಅತ್ಯAತ ವಿಜೃಂಬಣೆಯಿAದಆಚರಿಸಲಾಯಿಗಿರುವುದನ್ನುಇಲ್ಲಿ ಸ್ಮರಿಸಬಹುದು.
ಯು.ಎ.ಇ. ಬಂಟ್ಸ್ ನ ಪೋಷಕರಾಗಿರುವ ಶ್ರೀ ಸರ್ವೋತ್ತಮ ಶೆಟ್ಟಿಯವರು ನೂತನ ಆಡಳಿತ ಮಂಡಳಿಗೆ ಶುಭವನ್ನು ಹಾರೈಸಿದರು.
ಯು.ಎ.ಇ. ಬಂಟ್ಸ್2025-26(ಎರಡು ವರ್ಷದಅವಧಿ)ನೂತನ ಆಡಳಿತ ಮಂಡಳಿ
ಪೋಷಕರು: ಶ್ರೀ ಸರ್ವೋತ್ತಮ್ ಶೆಟ್ಟಿ
ಅಧ್ಯಕ್ಷರು : ಶ್ರೀ ವಕ್ವಾಡಿ ಪ್ರವೀಣ್‌ಕುಮಾರ್ ಶೆಟ್ಟಿ
ಉಪಾಧ್ಯಕ್ಷರು: ಶ್ರೀ ಪ್ರೇಂನಾಥ್ ಶೆಟ್ಟಿ
ಪ್ರಧಾನ ಕಾರ್ಯದರ್ಶಿ: ಶ್ರೀ ರವಿರಾಜ್ ಶೆಟ್ಟಿ
ಆಡಳಿತ ಮಂಡಳಿಯ ಸದಸ್ಯರುಗಳು; ಶ್ರೀಯುತರುಗಳಾದ ರತ್ನಾಕರ್ ಶೆಟ್ಟಿ, ಗುಣಶೀಲ್ ಶೆಟ್ಟಿ, ಸುಜಾತ್ ಶೆಟ್ಟಿ. ಬಿ. ಕೆ. ಗಣೇಶ್‌ರೈ, ಸುಂದರ್ ಶೆಟ್ಟಿ, ಸಜನ ಶೆಟ್ಟಿ ಹಾಗೂ ದಿನೆಷ್ ಶೆಟ್ಟಿಕೊಟ್ಟಿಂಜ.
ಯು.ಎ.ಇ. ಬಂಟ್ಸ್2025-26ರ ನೂತನಕಾರ್ಯಕಾರಿ ಸಮಿತಿ
ಅಬುಧಾಬಿ: ನಿತ್ಯಾಪ್ರಕಾಶ್ ಶೆಟ್ಟಿ / ಕೀರ್ತಿ ಶೆಟ್ಟಿ, ಪ್ರಸನ್ನ ಶೆಟ್ಟಿ / ಮೆಘಾ ಶೆಟ್ಟಿ, ಶ್ತೀಶ್ ಹೆಗ್ಡೆ / ವಿದ್ಯಾಶ್ರೀ ಹೆಗ್ಡೆ, ಕಿರಣ್ ಶೆಟ್ಟಿ / ದೀಪಾ ಶೆಟ್ಟಿ.
ದುಬಾಯಿ: ದಿನ್ ರಾಜ್ ಶೆಟ್ಟಿ / ದೀಪ್ತಿ ಶೆಟ್ಟಿ, ಅನೂಪ್ ಶೆಟ್ಟಿಚೈತ್ರಾ ಶೆಟ್ಟಿ, ವಸಂತ್ ಶೆಟ್ಟಿ / ರಜಿತಾ ಶೆಟ್ಟಿ, ಸುಪ್ರಜ್ ಶೆಟ್ಟಿ / ಪ್ರಥ್ವಿ ಶೆಟ್ಟಿ, ಸೀತರಾಮ್ ಶೆಟ್ಟಿ / ಅಶ್ವಿನಿ ಶೆಟ್ಟಿ, ಗೋಕುಲ್‌ದಸ್ಸ್ರೈ / ನಿಶ್ಮಿತಾ ರೈ,
ರಾಸ್‌ಅಲ್‌ಖೈಮಾ: ಸಂಪತ್ ಶೆಟ್ಟಿ / ಲಾಸ್ಯ ಶೆಟ್ಟಿ.
ವಂದನಾರ್ಪಣೆ ಮತ್ತುಉಪಹಾರದೊಂದಿಗೆ ಸಭೆ ಮುಕ್ತಾಯವಾಯಿತು.