ಯುಪಿ ಪೊಲೀಸರಿಂದ ಜನರ ಆಸ್ತಿ ಜಪ್ತಿ ನಡೆದಿರುವುದು ಅಸಾಂವಿಧಾನಿಕ, ಅಸಹಮತಿಯ ವಿರುದ್ಧ ರಾಜಕೀಯ ಹಗೆತನ: ಪಾಪ್ಯುಲರ್ ಫ್ರಂಟ್

Spread the love

ಯುಪಿ ಪೊಲೀಸರಿಂದ ಜನರ ಆಸ್ತಿ ಜಪ್ತಿ ನಡೆದಿರುವುದು ಅಸಾಂವಿಧಾನಿಕ, ಅಸಹಮತಿಯ ವಿರುದ್ಧ ರಾಜಕೀಯ ಹಗೆತನ: ಪಾಪ್ಯುಲರ್ ಫ್ರಂಟ್

ಬೆಂಗಳೂರು: ಯುಪಿ ಪೊಲೀಸರಿಂದ ಜನರ ಆಸ್ತಿ ಜಪ್ತಿ ನಡೆದಿರುವುದು ಅಸಾಂವಿಧಾನಿಕ, ಅಸಹಮತಿಯ ವಿರುದ್ಧ ರಾಜಕೀಯ ಹಗೆತನ: ಪಾಪ್ಯುಲರ್ ಫ್ರಂಟ್

ಜನರ ಆಸ್ತಿ ಜಪ್ತಿ ಮಾಡುವ ಯುಪಿ ಪೊಲೀಸರ ನಡೆಯು ರಾಜ್ಯದಲ್ಲಿ ಸಿಎಎ ಮತ್ತು ಎನ್.ಆರ್.ಸಿ ವಿರೋಧಿ ಪ್ರತಿಭಟನೆ ನಡೆಸಿದವರ‌ ವಿರುದ್ಧ ರಾಜ್ಯ ಸರಕಾರದಿಂದ ಕೈಗೊಳ್ಳಲಾಗಿರುವ ಕ್ರೂರ ಹಗೆತನದ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‌ಮೆನ್ ಒಎಂಎ‌ ಸಲಾಂ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಯುಪಿ ಪೊಲೀಸರು ಹೈಕೋರ್ಟಿನ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ನಡೆದ ನಾಶದ ಹೆಸರಿನಲ್ಲಿ ಜನರ ಆಸ್ತಿ ಜಪ್ತಿ ಮಾಡಲು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಇದು ರಾಜ್ಯದಲ್ಲಿ ರಾಜಕೀಯ ಅಸಹಮತಿ ನಡೆಯುತ್ತಿರುವ ಹಗೆತನದ ಭಾಗವಾಗಿದೆ. ಈ ರೀತಿಯ ಅಪ್ರಜಾಸತ್ತಾತ್ಮಕ ಮತ್ತು ಹಿಂಸಾತ್ಮಕ ಕಾರ್ಯಾಚರಣೆಯ ಮೂಲಕ ಯೋಗಿಯ ಪೊಲೀಸರು ರಾಜ್ಯದಲ್ಲಿ ವಿರೋಧದ ಅಂತಿಮ ನಳಿಕೆಯನ್ನೂ ತೊಡೆದುಹಾಕಲು ಪ್ರಯತ್ನಿಸುತ್ತಿದ್ದಾರೆ. ಯೋಗಿ ಮತ್ತು ಪೊಲೀಸರು ಪ್ರಾರಂಭದಿಂದಲೇ ಸಿಎಎ-ಎನ್ಆರ್ ಸಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಪ್ರತೀಕಾರದ ಧೋರಣೆಯನ್ನು ತಳೆದಿದ್ದು, ಇದು ಸರ್ವಾಧಿಕಾರಿ ಆಡಳಿತದ ವಿಧಾನವಾಗಿದೆ. ಯುಪಿ ಪೊಲೀಸರು ಬಲಪಂಥೀಯ ಹಿಂದುತ್ವ ಗುಂಪುಗಳೊಂದಿಗೆ ಕೈಜೋಡಿಸಿದರು ಮತ್ತು ಬಹುತೇಕ ಮುಸ್ಲಿಮ್‌ ಬಾಹುಳ್ಯ ಮತ್ತು ನೆರೆಯ ಪ್ರದೇಶಗಳಲ್ಲಿ ಅಮಾಯಕ ಜನರ ಕಾನೂನುಬಾಹಿರ ಹತ್ಯೆಗಳು, ಚಿತ್ರಹಿಂಸೆ ಮತ್ತು ದೊಡ್ಡಮಟ್ಟದಲ್ಲಿ ವಿನಾಶವನ್ನು ನಡೆಸಿದರು ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷ್ಯಾಧಾರವಾಗಿದೆ. ಯಾವ ಪೊಲೀಸರು ಜನರು ಜೀವ ಮತ್ತು ಸಂಪತ್ತನ್ನು ರಕ್ಷಿಸಬೇಕಾಗಿತ್ತೋ, ಅವರೇ ಗೂಂಡಾಗಳಂತೆ‌ ವರ್ತಿಸಿದರು. ಯಾವುದೇ ಅಧಿಕಾರಿಗಳು ಅಥವಾ ಬಲಪಂಥೀಯ ಗೂಂಡಾಗಳ ವಿರುದ್ಧ ಈ ವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಯೋಗಿ ಅಡಿಯಲ್ಲಿ ಅಪರಾಧಿಕ ನ್ಯಾಯ ವ್ಯವಸ್ಥೆಯು ಕುಸಿಯುತ್ತಿರುವುದರ ವಿರುದ್ಧ ದೇಶದ ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳು ಧ್ವನಿ ಎತ್ತಬೇಕೆಂದು ನಾವು ಕರೆ ನೀಡುತ್ತಿದ್ದೇವೆ.


Spread the love