ಯುವತಿಯ ಅಶ್ಲೀಲ ವೀಡಿಯೋ ವೈರಲ್ – ದೂರು ದಾಖಲು

Spread the love

ಯುವತಿಯ ಅಶ್ಲೀಲ ವೀಡಿಯೋ ವೈರಲ್ – ದೂರು ದಾಖಲು

ಮಂಗಳೂರು: ಯುವತಿಯೊಂದಿಗೆ ನಗ್ನವಾಗಿ ಅಶ್ಲೀಲ ವರ್ತನೆಯ ತನ್ನದೇ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡ ಆರೋಪದ ಮೇಲೆ ಯುವತಿಯ ದೂರಿನ ಮೇರೆಗೆ ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಬಂಟ್ವಾಳದ ನಿವಾಸಿಯಾಗಿರುವ ಯುವತಿಗೆ ವಾಯ್ಸ್ ಮೆಸೇಜ್ ಮೂಲಕ ಸುಮಾರು 8 ತಿಂಗಳ ಹಿಂದೆ ಒರ್ವ ಹುಡುಗಿಯ ಪರಿಚಯವಾಗಿರುತ್ತದೆ. ಪರಿಚಯವಾದ ಕೆಲವು ದಿನಗಳ ನಂತರ ಆ ಹುಡುಗಿಯನ್ನು ಮಂಗಳೂರಿನ ಲಾಡ್ಜ್ ಒಂದರಲ್ಲಿ ಯುವತಿಯು ಭೇಟಿಯಾಗಿದ್ದು ಆ ಸಮಯ ಅವರಲ್ಲಿ ದೈಹಿಕ ಸಂಪರ್ಕ ನಡೆದಿರುವುದಾಗಿದೆ, ಆ ಅಶ್ಲೀಲ ವಿಡಿಯೋವನ್ನು ಹುಡುಗಿಯು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು. ಈ ಘಟನೆ ನಡೆದ ಕೆಲವು ದಿನಗಳ ನಂತರ ಪಿರ್ಯಾದಿಗೆ ಅಪರಿಚಿತ ವ್ಯಕ್ತಿಯೋರ್ವ ಈ ಅಶ್ಲೀಲ ವಿಡಿಯೋವನ್ನು ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿರುತ್ತಾನೆ. ಈ ಬಗ್ಗೆ ಹುಡುಗಿಯಲ್ಲಿ ವಿಚಾರಿಸಲಾಗಿ ಆಕೆ ತನ್ನ ಮೊಬೈಲ್ ರಿಪೇರಿಗೆ ಕೊಟ್ಟ ಸಮಯ ಬೇರೆಯವರಿಗೆ ದೊರಕಿದೆ ಎಂದು ತಿಳಿಸಿರುತ್ತಾಳೆ. ಹಾಗು ಆ ವಿಡಿಯೋವನ್ನು ಪಡೆದ ವ್ಯಕ್ತಿ ವಿಡಿಯೋವನ್ನು ಬಳಸಿ ಯುವತಿಗೆ ನಿರಂತರವಾಗಿ ಹಣಕ್ಕಾಗಿ ಪೀಡಿಸುತ್ತಿದ್ದು, ಯುವತಿ ಹಣ ಕೊಡಲು ಒಪ್ಪದಿದ್ದಾಗ ಬಂಟ್ವಾಳದಲ್ಲಿ 04 ಜನ ಅಪರಿಚಿತರು ಯುವತಿಯನ್ನು ಅಪಹರಿಸಿ ಪಿರ್ಯಾದಿದಾರರ ಬಳಿಯಿದ್ದ 60,000 ರೂಪಾಯಿಗಳನ್ನು ಮತ್ತು ಪರ್ಸನ್ನು ಬಲವಂತವಾಗಿ ಕಿತ್ತುಕೊಂಡಿದ್ದು ಹಾಗು ಪಿರ್ಯಾದಿದಾರರ ATM ಕಾರ್ಡ್ ನ್ನು ಬಳಸಿ 9,000 ರೂ ಗಳನ್ನು ಪಡೆದಿರುತ್ತಾರೆ. ಅಲ್ಲದೆ ಪಿರ್ಯಾದಿದಾರರನ್ನು ಬೆದರಿಸಿ ಅದೇ ದಿನ 48,000 ರೂ ಗಳನ್ನು ಆರೋಪಿಗಳು ಪಡೆದಿರುವುದಾಗಿದೆ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡಿ ಹಣಕ್ಕಾಗಿ ನಿರಂತರ ಬೆದರಿಕೆ ಒಡ್ಡಿರುವುದಾಗಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ

ಬಂಟ್ವಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. .


Spread the love