ಯೋಗಕ್ಕೆ ವಿಶ್ವವ್ಯಾಪ್ತಿ ಗೌರವ ; ನಳಿನ್ ಕುಮಾರ್‍ಕಟೀಲ್

Spread the love

ಯೋಗಕ್ಕೆ ವಿಶ್ವವ್ಯಾಪ್ತಿ ಗೌರವ ; ನಳಿನ್ ಕುಮಾರ್‍ಕಟೀಲ್

ಮಂಗಳೂರು: ಯೋಗಕ್ಕೆ ಇಂದು ಭಾರತವಲ್ಲದೇ ವಿಶ್ವದ ಬೇರೆ ಬೇರೆ ದೇಶಗಳಲ್ಲೂ ವಿಶೇಷ ಗೌರವ ಲಭಿಸಿದೆ ಎಂದು ಮಂಗಳೂರು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಕೆ.ನಾರಾಯಣ ಶೆಟ್ಟಿ ಸಂಸ್ಮರಣಾ ಸಮಿತಿ ಮತ್ತು ಪತಂಜಲಿ ಯೋಗಶಿಕ್ಷಣ ಪ್ರತಿಷ್ಠಾನ (ರಿ) ಇದರ ಅಶ್ರಯದಲ್ಲಿ ನಡೆದರಾಜ್ಯ ಮಟ್ಟದ ಮುಕ್ತÀ ಯೋಗಾಸನ ಸ್ಫದೆರ್Àಯ ಉದ್ಘಾಟನೆÀಯನ್ನು ಮಾಡಿ ಮಾತನಾಡುತ್ತಿದ್ದರು.

ವಿದೇಶದಲ್ಲೂ ಅತೀ ಹೆಚ್ಚು ಜನರು ತಮ್ಮ ದೈನಂದಿನ ಚಟುವಟಿಕೆಯಾಗಿ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡತ್ತಿರುವುದು ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರುಯೋಗ ಪರಂಪರೆÀಯನ್ನು ವಿಶ್ವಯೋಗ ದಿನಾಚರಣೆ ಆಚರಿಸುವ ಮುಖೇನವಾಗಿ ಜತ್ತಿ£ಲ್ಲಿಯೇ ಯೋಗಕ್ಕೆ ವಿಶ್ವಮಾನ್ಯತೆ ಸಿಗುವಲ್ಲಿ ಕಾರಣೀಭೂತರಾಗಿದ್ದಾರೆ. ಬಾಬಾ ರಾಮ್‍ದೇವ್‍ರವರ ಪತಂಜಲಿ ಯೋಗ ಶಿಕ್ಷಣದ ಮುಖಾಂತರ ಯೋಗ ಜನಜನಿತವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಗೊಪಾಲಕೃಷ್ಣ ದೇಲಂಪಾಡಿ, ಹಿರಿಯಯೋಗ ಸಾಧಕರು, ಸಮಾರಂಭದ ಅಧ್ಯಕ್ಷತೆಯನ್ನು, ಪತಂಜಲಿ ಯೋಗಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಏಕನಾಥ ಬಾಳಿಗ ವಹಿಸಿದರು. ಸಮಾರಂಭದಲ್ಲಿ ಎಂ.ಎಸ್.ಗುರುರಾಜ್, ಮೋನಪ್ಪ ಶೆಟ್ಟಿ, ಧನಂಜಯ ಕೆ, ಚಂದ್ರಶೇಖರ ಶೆಟ್ಟಿ, ಭಾರತಿ ಶೆಟ್ಟಿ, ಶೇಖರ್ ಕಡ್ತಲ ಉಪಸ್ಥಿತಿಯಿದ್ದರು. ಕಾರ್ಯದಶಿರ್ ದಿವಾಕರ ಸಾಮಾನಿ ಸ್ವಾಗತಿಸಿ, ಯೋಗೀಶ್ ಶೆಟ್ಟಿ ಕಾವೂರು ವಂದಿಸಿದರು. ಶ್ರೀಮತಿ ವಿನಯ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 185 ಕ್ಕೂ ಹೆಚ್ಚು ಸ್ಫಧಾsರ್ಳುಗಳು ಭಾಗವಹಹಿಸಿದರು.


Spread the love