Spread the love
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಇಂಕ್ಯುಬೇಶನ್ ಸೆಂಟರ್ ಉದ್ಘಾಟನೆ
ಮಂಗಳೂರು: ನಗರದ ಕದ್ರಿಯ ಮಂಗಳೂರು ಮಹಾನಗರಪಾಲಿಕೆಯ ಉಪಕಚೇರಿಯಲ್ಲಿ ಕೇಂದ್ರದ ರಕ್ಷಾಣ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂಕ್ಯುಬೇಶನ್ ಸೆಂಟರನ್ನು ಶುಕ್ರವಾರ ಉದ್ಘಾಟನೆಗೊಳಿಸಿದರು.
ಬಳಿಕ ಮಾತನಾಡಿದ ಅವರು ತಮ್ಮ ಸಂಸದ ನಿಧಿಯಿಂದ ರೂ1.50 ಕೋಟಿಗಳನ್ನು ಇದಕ್ಕಾಗಿ ಒದಗಿಸಿದ್ದು, ಹೊಸ ಉದ್ಯಮ ಆರಂಭಿಸುವವರಿಗೆ ಅಗತ್ಯ ತರಬೇತಿ, ಮಾರ್ಗದರ್ಶನ ಮೂಲಸೌಕರ್ಯ ಈ ಕೇಂದ್ರದ ಮೂಲಕ ಒದಗಿಸಲಾಗುತ್ತದೆ. ಜಿಲ್ಲಾಡಳಿತ ಬೇಡಿಕೆಗೆ ಅನುಗುಣವಾಗಿ ಹೆಚ್ಚು ಸೀಟುಗಳನ್ನು ಒದಗಿಸಲು ಒಪ್ಪಿದ್ದು, ಪ್ರಸ್ತುತ 60 ಅಭ್ಯರ್ಥಿಗಳಿಗೆ ಅವಕಾಶವಿದೆ ಎಂದರು.
Spread the love