ರಫೇಲ್ ವಿಮಾನ ಖರೀದಿ ಹಗರಣದ ವಿರುದ್ದ ಪ್ರತಿಭಟನೆ ಯಶಸ್ವಿಗೊಳಿಸಿ; ಅಮೃತ್ ಶೆಣೈ

Spread the love

ರಫೇಲ್ ವಿಮಾನ ಖರೀದಿ ಹಗರಣದ ವಿರುದ್ದ ಪ್ರತಿಭಟನೆ ಯಶಸ್ವಿಗೊಳಿಸಿ; ಅಮೃತ್ ಶೆಣೈ

ಉಡುಪಿ: ಕೇಂದ್ರ ಸರಕಾರ ನಡೆಸಿದ ರಫೇಲ್ ವಿಮಾನ ಖರೀದಿ ಹಗರಣದ ವಿರುದ್ದ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಪ್ಟೆಂಬರ್ 18ರಂದ ಆಯೋಜಿಸಿರುವ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಸದಸ್ಯರಾದ ಅಮೃತ್ ಶೆಣೈ ಜಿಲ್ಲೆಯ ನಾಗರಿಕಲ್ಲಿ ವಿನಂತಿಸಿದ್ದಾರೆ.

ಸಪ್ಟೆಂಬರ್ 18ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಟೈಗರ್ ಸರ್ಕಲ್ ಬಳಿಯಿಂದ ಹೊರಟು ಜಿಲ್ಲಾಧಿಕಾರಿ ಕಚೇರಿಯ ವರೆಗೆ ಬೃಹತ್ ಪಾದಯಾತ್ರೆ ನಡೆಯಲಿದ್ದು ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾ ಸಭೆ ನಡೆಯಲಿದೆ. ಕೇಂದ್ರ ಸರಕಾರ ನಡೆಸಿದ ರಫೇಲ್ ಹಗರಣದ ವಿರುದ್ದ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಜನಸಾಮಾನ್ಯರಿಗೆ ನೀಡಿದ ಭರವಸೆಗಳನ್ನೆಲ್ಲಾ ಈಡೇರಿಸದೆ ಕೇವಲ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಕೆಲಸ ಮಾಡುವ ಪ್ರಧಾನಿಯವರ ಧೋರಣೆಗಳ ವಿರುದ್ದ ನಡೆಯುವ ಈ ಪಾದಯಾತ್ರೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಸಾಮಾಜಿಕ ಚಳುವಳಿಗಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ಮನವಿ ಮಾಡಿದ್ದಾರೆ.

ಭಾರತ ದೇಶದಲ್ಲೇ ಇಷ್ಟೊಂದು ದೊಡ್ಡ ಮೊತ್ತದ ಹಗರಣ ಯಾವತ್ತೂ ನಡೆದಿಲ್ಲ ಅದಲ್ಲದೆ ದೇಶ ಬಿಟ್ಟು ಪರಾರಿಯಾದ ಸಾಲಗಾರ ಉದ್ಯಮಿಗಳ ಹಾಗೂ ಕೇಂದ್ರ ಸರಕಾರದ ಸಚಿವರುಗಳ ನಂಟಿನ ಬಗ್ಗೆ, ಪೆಟ್ರೋಲ್, ಗ್ಯಾಸ್ ದರ ಏರಿಕೆ ಬಗ್ಗೆ, ಡಾಲರ್ ಎದುರು ರೂಪಾಯಿ ಬೆಲೆ ದುರ್ಬಲ ಆಗುತ್ತಿರುವ ಬಗ್ಗೆಯೂ ಪ್ರತಿಭಟನಾ ಸಭೆಯಲ್ಲಿ ಜನಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


Spread the love