ರಸ್ತೆ ಅಫಘಾತದಲ್ಲಿ 27 ವರ್ಷ ವಯಸ್ಸಿನ ಯುವಕ ಸಾವು

Spread the love

ರಸ್ತೆ ಅಫಘಾತದಲ್ಲಿ 27 ವರ್ಷ ವಯಸ್ಸಿನ ಯುವಕ ಸಾವು

ಮಂಗಳೂರು: ರಸ್ತೆ ಅಫಘಾತವೊಂದರಲ್ಲಿ 27 ವರ್ಷ ವಯಸ್ಸಿನ ಯುವಕರೋರ್ವರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಮೃತರನ್ನು ಬೆಂದೂರು ನಿವಾಸಿ ಹೇಮಾಚಾರ್ಯ ಅವರ ಪುತ್ರ ಇಯಾನ್ ಮಸ್ಕರೇನ್ಹಸ್ (27) ಎಂದು ಗುರುತಿಸಲಾಗಿದೆ.

ಕುಂಟಿಕಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದು, ಅಫಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಇಯಾನ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


Spread the love