Spread the love
ರಸ್ತೆಯಿಂದ 35 ಅಡಿ ಆಳಕ್ಕೆ ಉರುಳಿದ ಓಮ್ನಿ: ತಾಯಿ-ಮಗ ಮೃತ್ಯು, ಮೂವರಿಗೆ ಗಾಯ
ಕಾಸರಗೋಡು : ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ವ್ಯಾನ್ ಸುಮಾರು 35 ಅಡಿ ಆಳದ ಮನೆಯ ಅಂಗಳಕ್ಕೆ ಉರುಳಿ ಬಿದ್ದ ಪರಿಣಾಮ ತಾಯಿ ಮತ್ತು ಪುತ್ರ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ಪೆರ್ಲ – ಪುತ್ತಿಗೆ ರಸ್ತೆಯ ಬಾಡೂರು ಓಣಿಬಾಗಿಲು ಎಂಬಲ್ಲಿ ನಡೆದಿದೆ .
ಮೃತಪಟ್ಟವರನ್ನು ಪೆರ್ಲದ ಮುಹಮ್ಮದ್ ಷರೀಫ್ (38) ಮತ್ತು ತಾಯಿ ಬೀಫಾತಿಮ್ಮ (58) ಎಂದು ಗುರುತಿಸಲಾಗಿದೆ.
ಮಗುವಿನ ನಾಮಕರಣ ಕಾರ್ಯಕ್ರಮಕ್ಕೆ ಪುತ್ತಿಗೆ ಮುಗುನಲ್ಲಿರುವ ಸಂಬಂಧಿಕರ ಮನೆಗೆ ಕುಟುಂಬ ಸಹಿತ ತೆರಳುತ್ತಿದ್ದಾಗ ಓಣಿಬಾಗಿಲು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ಉರುಳಿ ಬಿದ್ದು ಈ ದಾರುಣ ಅಪಘಾತ ನಡೆದಿದೆ.
ಅಪಘಾತದಲ್ಲಿ ಷರೀಫ್ ರ ಪತ್ನಿ ಖೈರುನ್ನೀಸಾ (28), ಮಕ್ಕಳಾದ ಶ೦ನಾ (10) ಹಾಗೂ ಶಹಾರ್ ಬಾನು ( 6) ಗಂಭೀರ ಗಾಯಗೊಂಡಿದ್ದು , ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ .
ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Spread the love