ರಾಜ್ಯ ಮತ್ತು ಜಿಲ್ಲಾ ಹೆದ್ದಾರಿ ರಸ್ತೆ ಗುಂಡಿ ಮುಚ್ಚಲು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ: ಸಚಿವ ಎಚ್.ಡಿ.ರೇವಣ್ಣ

Spread the love

ರಾಜ್ಯ ಮತ್ತು ಜಿಲ್ಲಾ ಹೆದ್ದಾರಿ ರಸ್ತೆ ಗುಂಡಿ ಮುಚ್ಚಲು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ: ಸಚಿವ ಎಚ್.ಡಿ.ರೇವಣ್ಣ

ಬೆಂಗಳೂರು: ರಾಜ್ಯ ಮತ್ತು ಜಿಲ್ಲ ಹೆದ್ದಾರಿ ಗುಂಡಿ ಮುಚ್ಚಲು ಒಂದು ಕಿ.ಮೀಗೆ 25-30 ಸಾವಿರ ರೂಪಾಯಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ವಿಧಾನಸೌಧದ ಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದ್ಯ ಜಲ್ಲಿ ಹಾಕಿ ಮುಚ್ಚಲಾಗುವುದು ಮಳೆಗಾಲ ಬಳಿಕ ಅದಕ್ಕೆ ಟಾರ್ ಹಾಕಲಾಗುವುದು. ಈ ನಿಟ್ಟಿನಿಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ರಸ್ತೆ ಗುಂಡಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಪ್ರದಾನ ಕಾರ್ಯದರ್ಶಿ, ಚೀಫ್ ಇಂಜಿನಿಯರ್ ಗಳ ಜೊತೆ ಸಭೆ ಮಾಡಿದ್ದೇನೆ. ಹುಬ್ಬಳ್ಳಿ, ಗದಗ, ಬೆಳಗಾಂ, ಬಿಜಾಪುರ, ಬಾಗಲಕೋಟೆ, ಹಾವೇರಿ, ಮಂಗಳೂರು, ಉಡುಪಿ ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಎಲ್ಲಾ ಕಡೆ ಒಳ್ಳೆಯ ಮಳೆ ಆಗುತ್ತಿದೆ. ಎಲ್ಲಾ ಕಡೆ ರಸ್ತೆ ಗುಂಡಿ ಮುಚ್ಚುವುದಕ್ಕೆ ಅನುದಾನ ನೀಡಿದ್ದೇವೆ. ಸೇತುವೆಗಳ ಮರು ನಿರ್ಮಾಣಕ್ಕೂ ಅಧಿಕಾರಿಗಳಿಗೆ ನಿರ್ದೇಶನ ನೀಡುದ್ದೇನೆ. ಹಣ ಎಷ್ಟೇ ಖರ್ಚಾದರೂ ಸರಿಯೇ ರಸ್ತೆ ದುರಸ್ಥಿ ಮಾಡುವಂತೆ ಸೂಚಿಸಲಾಗಿದೆ. ಮಳೆಯಿಂದ ಸಂಪೂರ್ಣ ಹಾಳಾಗಿರುವ ಮಡಿಕೇರಿ-ತಲಚೇರಿ ರಸ್ತೆಯನ್ನು ಎರಡು ದಿನಗಳಲ್ಲಿ ದುರಸ್ತಿ ಮಾಡಿ ಸಂಚಾರ ಯೋಗ್ಯವನ್ನಾಗಿ ಮಾಡುವಂತೆ ಆದೇಶಿಸಲಾಗಿದೆ ಎಂದು ಸ್ಪಷ್ಟ ಪಡಿಸಿದರು.

ಮಡಿಕೇರಿಯಿಂದ ಕೇರಳ ಹೋಗುವ ತಲಚೇರಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದನ್ನು ಕೂಡಲೇ ಸರಿಪಡಿಸುವಂತೆ ತಿಳಿಸಿದ್ದೇನೆ. ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳಿಗೆ ಹಣ ಬಿಡುಗಡೆಯಾಗಿದೆ. ಮಳೆಗಾಲ ಮುಗಿದ ಮೇಲೆ ಟಾರ್ ಹಾಕಲು ಸೂಚನೆ ನೀಟಲಾಗಿದೆ. ಪೆಟ್ರೋಲಿಂಗ್ ಜೀಪ್ಗಳನ್ನ ಕಾಯ್ದಿರಿಸಲಾಗುತ್ತೆ. ಹೆಚ್ಚು ನೀರು ಹರಿಯೋ ರಸ್ತೆಗಳಲ್ಲಿ ಪೆಟ್ರೋಲಿಂಗ್ ಜೀಪ್ ತಪಾಸಣೆ ಮಾಡಲಾಗಿದೆ. ಮಡಿಕೇರಿ ಯಿಂದ ಕೇರಳಗೆ ಹೋಗೋ ರಸ್ತೆ ಕೊಚ್ಚಿ ಹೋಗಿದ್ದು, ಅದನ್ನು ಸರಿಪಡಿಸಲೂ ಸೂಚಿಸಿದ್ದೇನೆ. ಕೇರಳ ಸಿಎಂಗೂ ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ತಿಳಿಸಿದ್ದಾರೆ.

ಚಾರ್ಮಾಡಿ, ಶಿರಾಡಿ ಘಾಟ್ ಮತ್ತು ಸಂಪಾಜೆ, ಬಿಸ್ಲೆ ಪಾಲ್ಸ್ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾಗಿವೆ. ಇದಕ್ಕೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಉತ್ತರಖಾಂಡ್ ರಾಜ್ಯದ ರೀತಿಯಲ್ಲಿ ಸುರಂಗ ಮಾರ್ಗ ರಸ್ತೆ ನಿರ್ಮಿಸಲು ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ವರದಿ ತರಿಸಲಾಗುವುದು ಎಂದು ವಿವರಿಸಿದರು.

ಮಂಗಳೂರು ಮತ್ತು ಹುಬ್ಬಳ್ಳಿ ಭಾಗದಲ್ಲಿ ಮಳೆಯಿಂದ ರಸ್ತೆಗಳು ಹೆಚ್ಚು ಹಾಳಾಗಿವೆ. ಕೇಂದ್ರ ಸರ್ಕಾರದಿಂದ ಕೇವಲ 500 ಕೋಟಿ ರೂ. ಮಾತ್ರ ಬರುತ್ತದೆ. ಹೀಗಾಗಿ ಕೇಂದ್ರದ ಪಾಲಿನ ಹಣ ಹೆಚ್ಚಿಸುವಂತೆ ಒತ್ತಡ ಹೇರಲು ನಮ್ಮ ಸಂಸದರಿಗೂ ಮನವಿ ಮಾಡಲಾಗಿದೆ. ಈ ಕಾಸು ಎಲ್ಲಿಗೂ ಸಾಕಾಗಲ್ಲ. ಅದಕ್ಕಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು.

ಸಾಲ ಮನ್ನಾ ಮಾಡುವುದು ನಮ್ಮ ಧರ್ಮ: ಸಾಲ ಮನ್ನಾಗೆ ನಮ್ಮ ಬದ್ಧತೆ ಇದೆ. ಕೇಂದ್ರ ಸರ್ಕಾರ ಅನುದಾನ ನೀಡುತ್ತೊ ಗೊತ್ತಿಲ್ಲ. ರೈತರ ಸಾಲ ಮನ್ನಾ ಮಾಡುವುದು ನಮ್ಮ ಧರ್ಮ ಎಂದು ಇದೇ ವೇಳೆ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.

ಸಹಕಾರ ಬ್ಯಾಂಕ್ ಗಳಲ್ಲಿ ಸುಮಾರು 10,500 ಕೋಟಿ ರೂಪಾಯಿ ರೈತರ ಸಾಲ ಇದೆ. ಅದನ್ನು ಮೊದಲಿಗೆ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರದ ಬಳಿ 50ಶೇ. ಹಣಕಾಸು ನೆರವು ಕೋರಿದ್ದೇವೆ. ಕೊಡೋದು ಬಿಡೋದು ಅವರಿಗೆ ಬಿಟ್ಟಿದ್ದು, ಆದರೆ ರೈತರ ಸಾಲ ಮನ್ನಾ ಮಾಡುವುದು ರಾಜ್ಯ ಸರ್ಕಾರದ ಧರ್ಮವಾಗಿದೆ. ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೆ ನಾವು ಸ್ಪಂದಿಸಬೇಕಾಗಿದೆ. ಅವರ ಸಾಲ ಮನ್ನಾ ಮಾಡುವುದೇ ನಮ್ಮ ಮೊದಲ ಗುರಿ ಎಂದು ಇದೇ ವೇಳೆ ಸ್ಪಷ್ಟ ಪಡಿಸಿದರು.


Spread the love
1 Comment
Inline Feedbacks
View all comments
Henry James
6 years ago

ದೊಡ್ಡ ಗೌಡ್ರ ಹಿರಿ ಮಗ ಮಾನ್ಯ ಶ್ರೀ. ಹೆಚ್. ಡಿ. ವೇಲಣ್ಣರವರು ಅತಿ ಬೇಡಿಕೆಯುಳ್ಳ ಲೋಕೋಪಯೋಗಿ ಇಲಾಖೆಯನ್ನೇ ಗಿಟ್ಟಿಸಿಕೊಂಡಿದ್ದಾರೆ. ಇನ್ನು ನೋಡಿ ಇವರ…. ಮಹಿಮೆ ಮುಂದಿನ ದಿನಗಳಲ್ಲಿ.