ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ
ಉಡುಪಿ: ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಲಾಯಿತು.
ಈ ವೇಳೆ ಮಾತನಾಡಿದ ಬಜರಂಗದಳ ಮಂಗಳೂರು ವಿಭಾಗ ಸಹ ಸಂಚಾಲಕರಾದ ಸುನೀಲ್ ಕೆ. ಆರ್ ಅವರು ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ಅನಾವಶ್ಯಕವಾಗಿ ಬಹುಸಂಖ್ಯಾತ ಹಿಂದೂಗಳ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದು, ಹಿಂದೂಗಳ ಹಕ್ಕನ್ನು ಕಸಿಯುವ, ಸ್ವಾತಂತ್ರ್ಯವನ್ನು ಹರಣ ಮಾಡುವ ಕೆಲಸವನ್ನು ಮಾಡುತ್ತಿದೆ. ಕರಾವಳಿಯ ಜಿಲ್ಲೆಗಳಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿ ಯಾವುದೇ ಹಿಂದೂ ಹಬ್ಬ ಹರಿದಿನಗಳು ಸಾರ್ವಜನಿಕ ಸಭೆ ಸಮಾರಂಭಗಳು, ಪ್ರತಿಭಟನೆಗಳನ್ನು ನಡೆಸದಂತೆ ನಿರ್ಭಂಧವನ್ನು ಹೇರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಯೆ ಬಹುಸಂಖ್ಯಾತ ಹಿಂದೂಗಳ ಆರಾಧ್ಯ ದೈವ, ಶ್ರದ್ಧಾಕೇಂದ್ರ ಕೋಟಿ ಚೆನ್ನಯ್ಯರವರ ತಾಯಿ ದೇಹಿ ಬೈದಿತಿಯವರ ಮೂರ್ತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಹಿಂದೂಗಳ ಭಾವನೆಗೆ ಘಾಸಿಗೋಳಿಸುವ ಕೆಲಸ ಮಾಡಲಾಗಿದೆ. ಅಲ್ಲದೆ ಈ ಕೃತ್ಯದಿಂದ ಅಪವಿತ್ರಗೊಂಡ ದೇವಸ್ಥಾನದ ಶುದ್ದೀಕರಣಕ್ಕಾಗಿ ತೆರಳಿದ ಸ್ಥಳೀಯ ಹಿಂದು ಮಹಿಳೆಯರಿಗಿ ಅಲ್ಲಿನ ಪೋಲಿಸ್ ಸಿಬಂದಿ ಹಾಗೂ ಅರಣ್ಯಇಲಾಖೆ ಸಿಬಂದಿ ಅಡ್ಡಿಪಡಿಸಿದ್ದಾರೆ ಇದು ಖಂಡನೀಯ.
ಕರಾವಳಿ ಜಿಲ್ಲೆಗಳ ಹಿಂದೂ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ದ ಆಧಾರವಿಲ್ಲದ ಆರೋಪಗಳನ್ನು ಹೊರಿಸಿ ಮೊಕದ್ದಮೆಗಳನ್ನು ದಾಖಲಿಸಿ ಅವರನ್ನು ಬಂಧಿಸುವಂತೆ ಜಿಲ್ಲೆಯ ಉಸ್ತುವಾರಿ ಸಚಿವರು ಬಹಿರಂಗವಾಗಿ ಆದೇಶ ನೀಡಿದ್ದಾರೆ. ಅದೇ ಧ್ವನಿಯಲ್ಲಿ ಜವಾಬ್ದಾರಿಯುತ ಮುಖ್ಯಮಂತ್ರಿ ಕೂಡ ಅದನ್ನು ಸಾರ್ವಜನಿಕವಾಗಿ ಅನುಮೋದಿಸಿ ಅವರನ್ನು ಬಂಧಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಾರೆ.
ಆರ್ ಎಸ್ ಎಸ್ ಕಾರ್ಯಕರ್ತ ಬಂಟ್ವಾಳದ ಶರತ್ ಮಡಿವಾಳ ಕೊಲೆಯ ನಂತರ ನಡೆದ ಅಹಿತಕರ ಘಟನೆಯಲ್ಲಿ ಅಮಾಯಕಾರದ ಹಿಂದೂ ನಾಯಕರ ಮೇಲೆ ಸುಳ್ಳು ಆರೋಪವನ್ನು ಹೊರಿಸಿ ಮೊಕದ್ದಮೆಗಳನ್ನು ದಾಖಲಿಸಿ ಅಧಿಕಾರಿಗಳು ದೌರ್ಜನ್ಯವನ್ನು ಎಸಗಿರುತ್ತಾರೆ.
ಅಲ್ಲದೆ ಪುತ್ತೂರಿನಲ್ಲಿ ನಡೆದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಹಿಂದೂ ನಾಯಕ ಜಗದೀಶ್ ಕಾರಂತ ಅವರು ಭಾಷಣ ಮಾಡಿದ್ದು ಅವರ ವಿರುದ್ದ ಯಾವುದೇ ಸಾರ್ವಜನಿಕರಿಂದ ದೂರು ದಾಖಲಾಗದಿದ್ದರೂ ಕೂಡ ಗೃಹಮಂತ್ರಿಗಳು ಅನಾವಶ್ಯಕವಾಗಿ ಮಧ್ಯಪ್ರವೇಶ ಮಾಡಿ ಸಾರ್ವಜನಿಕವಾಗಿ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ದೂರು ದಾಖಲಾಗುವಂತೆ ಮಾಡಿರುತ್ತಾರೆ. ಈ ಮೂಲಕ ಹಿಂದೂಗಳ ಧ್ವನಿಯನ್ನು ತುಳಿಯವು ಕೃತ್ಯದಲ್ಲಿ ಸರಕಾರ ಭಾಗಿಯಾಗಿದೆ. ಇಂತಹ ಕೃತ್ಯಗಳು ಹೀಗೆಯೇ ಮುಂದುವರಿದಲ್ಲಿ ಇನ್ನೂ ಉಗ್ರ ರೀತಿಯ ಪ್ರತಿಭಟನೆ ನಡೆಸಬೇಕಾಗಿದಿತು ಎಂದು ಎಚ್ಚರಿಕೆ ನೀಡಿದರು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲವರಿಗೆ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹಿಂದೂ ನಾಯಕರಾದ ಗೀತಾಂಜಲಿ ಸುವರ್ಣ, ದೀನೇಶ್ ಮೆಂಡನ್, ಸಂತೋಶ್ ಸುವರ್ಣ ಹಾಗೂ ಇತರರು ಉಪಸ್ಥಿತರಿದ್ದರು.