ಉಡುಪಿ : ಕೃಷಿ, ಶೈಕ್ಷಣಿಕ, ಸಮಾಜ ಕಲ್ಯಾಣ, ಕೈಗಾರಿಕೆ ಹಾಗೂ ನಗರಾಭಿವೃದ್ಧಿಗೆ ಮಾನ್ಯ ಮುಖ್ಯ ಮಂತ್ರಿಗಳು ತಮ್ಮ 11ನೇ ಬಜೆಟ್‍ನಲ್ಲಿ ಹೆಚ್ಚಿನ ಒತ್ತು ನೀಡಿದ್ದು ಅತ್ಯುತ್ತಮ ಬಜೆಟ್ ಮಂಡನೆಯಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆ ಅಭಿಪ್ರಾಯ ಪಟ್ಟಿದ್ದಾರೆ.
UIDSSMT ಹಾಗೂ JNNURM ಯೋಜನೆಗಳಿಗೆ ಕೇಂದ್ರ ಸರಕಾರ ಕಡಿತಗೊಳಿಸಿದ ಅನುದಾನಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರಕಾರವೇ ಅನುದಾನವನ್ನು ನೀಡಿದೆ. ಮುಂದಿನ ಮೂರು ವರ್ಷಗಳಲ್ಲಿ 972.68 ಕೋಟಿ ರೂ.ಗಳನ್ನು ಒದಗಿಸಿ, ಈ ಕೊರತೆಯನ್ನು ತಗ್ಗಿಸಲು ನಿರ್ಧರಿಸಲಾಗಿದೆ.
ಘನತ್ಯಾಜ್ಯ ನಿರ್ವಹಣೆಗೆ ರಾಜ್ಯ ಸರಕಾರ ಆದ್ಯತೆ ನೀಡಿದ್ದು, ನಗರಗಳ ಸ್ವಚ್ಛತೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಸಾಧ್ಯವಾಗಲಿದೆ. ಇದಕ್ಕೆಂದೇ 579 ಕೋಟಿ ರೂ ಅಂದಾಜು ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಕೇಂದ್ರ ಪುರಸ್ಕøತ ಅಟಲ್ ನಗರ ಪರಿವರ್ತನಾ ಪುನರುಜ್ಜೀವನ ಅಭಿಯಾನ (AMRUT)ಯೋಜನೆಯಲ್ಲಿ ರಾಜ್ಯದ 26 ನಗರಗಳು ಮತ್ತು ಪಾರಂಪರಿಕ ಪಟ್ಟಣ ಬಾದಾಮಿ ಸೇರಿ ಒಟ್ಟು 27 ನಗರಗಳು ಆಯ್ಕೆಯಾಗಿದ್ದು, ಕಾಮಗಾರಿಗಳು ಸಂಪೂರ್ಣಗೊಳ್ಳಲಿವೆ.
ಉಡುಪಿ ಜಿಲ್ಲೆಯ ಹಂಗಾರಕಟ್ಟೆ-ಕೋಡಿ ಬೆಂಗ್ರೆಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ಅಗತ್ಯ ಪೂರ್ವಭಾವಿ, ಅಧ್ಯಯನಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಮತ್ಸ್ಯಾಶ್ರಯ ಯೋಜನೆಯಡಿ ವಸತಿ ರಹಿತ ಮೀನುಗಾರರಿಗೆ 3000 ಮನೆಗಳನ್ನು ನಿರ್ಮಿಸಲಾಗುವುದು.
ನಗರೋತ್ಥಾನ -3ನೇ ಹಂತದಲ್ಲಿ ಪುರಸಭೆ,ಪಟ್ಟಣ ಪಂಚಾಯತ್, ನಗರಸಭೆಗಳಿಗೆ 2093 ಕೋಟಿ ಅನುದಾನ ಬಿಡುಗಡೆಯಾಗಿದ್ದು, ನಗರಾಭಿವೃದ್ಧಿಗೆ ಒತ್ತು ನೀಡಿರುವ ಬಜೆಟ್‍ನಿಂದಾಗಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.