ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5 ವರ್ಷದ 17ನೇ ಶ್ರಮದಾನ

Spread the love

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5 ವರ್ಷದ 17ನೇ ಶ್ರಮದಾನ

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 17ನೇ ಆದಿತ್ಯವಾರದ ಶ್ರಮದಾನವನ್ನು ದಿನಾಂಕ 31-3-2019 ರಂದು ಬೆಳಿಗ್ಗೆ 7-30ರಿಂದ 10-30 ರವರೆಗೆ ಅತ್ತಾವರ ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು. ಯೋಗ ಗುರು ಜಗದೀಶ್ ಶೆಟ್ಟಿ ಹಾಗೂ ಪೆÇ್ರೀ. ರಮ್ಯಾ ಶೆಟ್ಟಿ, ಎಸ್.ಡಿ.ಎಂ ಮೆನೇಜಮೆಂಟ್ ಕಾಲೇಜು ಮಂಗಳೂರು ಇವರುಗಳು ಅತ್ತಾವರ ಬಿಗ್‍ಬಜಾರ್ ಮುಂಭಾಗದಲ್ಲಿ ಶ್ರಮದಾನಕ್ಕೆ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಜಗದೀಶ್ ಶೆಟ್ಟಿ “ಪ್ರಸ್ತುತ ಈ ಪ್ರಕೃತಿಯು ಮಾನವ ಸಹಿತ ಅನೇಕ ಜೀವಸಂಕುಲಕ್ಕೆ ಆಧಾರವಾಗಿದೆ. ಆದರೆ ಮನುಷ್ಯ ಇದನ್ನು ಕೇವಲ ತನ್ನ ಸ್ವಾರ್ಥಕ್ಕೆ ಉಪಯೋಗಿಸಿ ಹಾಳು ಮಾಡುತ್ತಿದ್ದಾನೆ. ಇದನ್ನು ತಡೆಗಟ್ಟಬೇಕಿದೆ. ಇಂತಹ ಅಭಿಯಾನಗಳ ಮೂಲಕ ಅದರ ಕುರಿತು ಅರಿವು ಮೂಡಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಯೋಗದಲ್ಲಿ ಆಂತರಿಕ ಹಾಗೂ ಬಾಹ್ಯ ಶುದ್ಧತೆಗೆ ಬಹಳ ಮಹತ್ವ ನೀಡಲಾಗಿದೆ. ಪ್ರತಿಯೊಬ್ಬರು ಅದನ್ನು ಅಬ್ಯಾಸ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಲಿ. ಎಂದು ತಿಳಿಸಿ ಶುಭಹಾರೈಸಿದರು.

ಬಳಿಕ ಮಾತನಾಡಿದ ಪೆÇ್ರ. ರಮ್ಯಾ ಶೆಟ್ಟಿ ಮಾತನಾಡಿ “‘ಏಳಿ ಎದ್ದೇಳಿ ಗುರಿತಲುಪುವ ತನಕ ನಿಲ್ಲದಿರಿ’ ಎನ್ನುವ ವಿವೇಕಾನಂದರ ಮಾತಿನಂತೆ ಸಂಪೂರ್ಣ ಸ್ವಚ್ಛತೆ ನಮ್ಮ ಗುರಿ ಅದನ್ನು ಸಾಧಿಸುವವರೆಗೂ ಎಲ್ಲರೂ ನಿರಂತರವಾಗಿ ಶ್ರಮಿಸಬೇಕು. ಆ ಹಿನ್ನಲೆಯಲ್ಲಿ ಇಂತಹ ಸ್ವಚ್ಛತಾ ಶ್ರಮದಾನಗಳಲ್ಲಿ ಅಧಿಕ ಸಂಖ್ಯೆಯ ಯುವಜನತೆ ಪಾಲ್ಗೊಂಡು ಸಾಮಾಜಿಕ ಕಾಳಜಿ ತೋರುತ್ತಿರುವುದು ವಿಶೇಷವಾಗಿದೆ. ಮಂಗಳೂರು ಹಿಂದೆಂದಿಗಿಂತಲೂ ಸ್ವಚ್ಛವಾಗಿ ಸುಂದರವಾಗಿ ತೋರುತ್ತಿದೆ. ಇದಕ್ಕೆ ರಾಮಕೃಷ್ಣ ಮಿಷನ್ ಕಾರ್ಯಕರ್ತರ ಶ್ರಮವೇ ಕಾರಣ.” ಎಂದು ತಿಳಿಸಿದರು. ಅಭಿಯಾನದ ಮುಖ್ಯ ಸಂಯೋಜಕ ಉಮಾನಾಥ್ ಕೋಟೆಕಾರ್, ಪ್ರಮೀಳಾ ಶೆಟ್ಟಿ, ಡಾ. ರಾಜೇಂದ್ರ ಪ್ರಸಾದ, ನರೇಂದ್ರ ಕುಮಾರ್, ಅನಿರುದ್ಧ ನಾಯಕ್, ತಾರಾನಾಥ್ ಆಳ್ವ, ಸುಬ್ರಾಯ ನಾಯಕ್, ಮಸಾ ಹಿರೋ, ಸಂದೀಪ್ ಕೋಡಿಕಲ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶ್ರಮದಾನ: ಚಾಲನೆ ನೀಡಿದ ಬಳಿಕ ಸ್ವಯಂಸೇವಕರು ಗುಂಪುಗಳನ್ನು ರಚಿಸಿಕೊಂಡು ಶ್ರಮದಾನ ಕೈಗೊಂಡರು. ಮೊದಲಿಗೆ ಎಸ್ ಎಂ ಕುಶೆ ಶಾಲೆಗೆ ತೆರಳುವ ಅಡ್ಡರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ರಸ್ತೆಯ ಬದಿಯಲ್ಲಿ ಹಲವು ವರ್ಷಗಳಿಂದ ಬಿದ್ದಿದ್ದ ಮಣ್ಣಿನ ರಾಶಿಯನ್ನು ಜೆಸಿಬಿ ಮೂಲಕ ತೆಗೆದು ಹಾಕಲಾಯಿತು. ಅಲ್ಲದೇ ಅಲ್ಲಿ ಬಿದ್ದಿದ್ದ ಅಧಿಕ ಪ್ರಮಾಣದ ಕಸವನ್ನು ತೆಗೆದು ಶುದ್ಧಗೊಳಿಸಲಾಯಿತು. ಹಳೆಯ ಗುಜರಿ ವಾಹನಗಳನ್ನು ತೆರವು ಮಾಡಿ, ಅಲ್ಲಿ ಬೆಳೆದಿದ್ದ ಪೆÇದೆಗಳನ್ನು ಕತ್ತರಿಸಿ ತೆಗೆದು ಸ್ವಚ್ಛ ಮಾಡಲಾಯಿತು. ಉಮಾಕಾಂತ ಸುವರ್ಣ ನೇತೃತ್ವ ವಹಿಸಿದ್ದರು.

ಎಸ್.ಡಿ.ಎಂ ಮೆನೇಜಮೆಂಟ್ ಕಾಲೇಜಿನ ವಿದ್ಯಾರ್ಥಿಗಳು ಆನಂದ ಶೆಟ್ಟಿ ವೃತ್ತದ ಮೇಲ್ಭಾಗದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಮತ್ತೊಂದೆಡೆ ಅತ್ತಾವರ ಕಟ್ಟೆಯ ಹತ್ತಿರದಲ್ಲಿದ್ದ ‘ಹಿರಿಯರ ಉದ್ಯಾನವನ’ ನಿರ್ವಹಣೆ ಇಲ್ಲದೇ ಕಸ ಪೆÇದೆಗಳಿಂದ ತುಂಬಿ ನಿರುಪಯುಕ್ತವಾಗಿತ್ತು, ಇಂದು ಅದನ್ನು ಮೂರನೇ ತಂಡದಲ್ಲಿದ್ದ ಕಮಲಾಕ್ಷ ಪೈ ಸಹಿತ ಕಾರ್ಯಕರ್ತರು ಹುಲ್ಲು ಕಸವನ್ನು ತೆಗೆದು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ್ದಾರೆ. ನಾಲ್ಕನೇ ತಂಡದಿಂದ ಚಕ್ರಪಾಣಿ ದೇವಸ್ಥಾನದ ಬದಿಯ ಮುಖ್ಯ ರಸ್ತೆಯನ್ನು ಸ್ವಚ್ಚಗೊಳಿಸಿ ಅಲ್ಲಿದ್ದ ಕಸರಾಶಿಯನ್ನು ತೆಗೆದು ಅಲ್ಲಿ ಹೂಕುಂಡಗಳನ್ನಿಟ್ಟು ಸುಂದರವಾಗಿ ತೋರುವಂತೆ ಮಾಡಲಾಗಿದೆ. ಸುಭದ್ರಾ ಭಟ್, ಕೃತಿಕಾ ಶೆಟ್ಟಿ, ಮೋಹನ್ ಕೊಟ್ಟಾರಿ ಸಹಿತ ಅನೇಕರು ಈ ತಂಡದಲ್ಲಿ ಶ್ರಮದಾನಗೈದರು. ಸುರೇಶ್ ಶೆಟ್ಟಿ ನೇತೃತ್ವದ ಸ್ವಯಂ ಸೇವಕರ ತಂಡ ಅತ್ತಾವರದ ನೂರಾರು ಮನೆಗಳಿಗೆ ತೆರಳಿ ಸ್ವಚ್ಛತೆಯ ಕುರಿತು ಜಾಗೃತಿ ಕಾರ್ಯಕ್ರಮ ಮಾಡಿದರು. ಈ ಸಂದರ್ಭದಲ್ಲಿ ನೂತನವಾಗಿ ಹೊರತರಲಾದ ಸ್ವಚ್ಛತೆಯ ಕುರಿತ ಸಮಗ್ರ ಮಾಹಿತಿಯುಳ್ಳ ‘ಸ್ವಚ್ಛ ಮಂಗಳೂರು ಕನಸಲ್ಲ!’ ಎಂಬ ಮಾಹಿತಿ ಪತ್ರವನ್ನು ಸಾರ್ವಜನಿಕರಿಗೆ ನೀಡಲಾಯಿತು.

ದಿಲ್‍ರಾಜ್ ಆಳ್ವ, ಸೌರಜ್ ಮಂಗಳೂರು, ಕೋಡಂಗೆ ಬಾಲಕೃಷ್ಣ ನಾೈಕ್ ಮತ್ತಿತರು 17ನೇ ಶ್ರಮದಾನದಲ್ಲಿ ಭಾಗಿಯಾಗಿದ್ದರು.

50ನೇ ಸ್ವಚ್ಛ ಸೋಚ್:ವಿಚಾರ ಸಂಕಿರಣ ಹಾಗೂ ಸಮಾರೋಪ ಸಮಾರಂಭ: ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಸ್ವಚ್ಛ ಸೋಚ್ ವಿಚಾರ ಸಂಕಿರಣಗಳ ಸಮಾರೋಪ ಸಮಾರಂಭ ಸಹ್ಯಾದ್ರಿ ಇಂಜನಿಯರಿಂಗ್ ಹಾಗೂ ಮೆನೇಜಮೆಂಟ್ ಕಾಲೇಜಿನಲ್ಲಿ ದಿನಾಂಕ 27-3-2019 ರಂದು ಅಪರಾಹ್ನ 3-30ಕ್ಕೆ ಜರುಗಿತು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮಂಜುನಾಥ್ ಭಂಡಾರಿ ಭಾಗವಹಿಸಿದರು. ವಿಶೇಷ ಆಹ್ವಾನಿತರಾಗಿ ಪೆÇ್ರಫೆಸರ್ ಎಸ್.ಎಸ್. ಬಾಲಕೃಷ್ಣ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ವಾಮಿ ಜಿತಕಾಮಾನಂದಜಿ “ಸ್ವಚ್ಛತೆಯ ಕುರಿತು ಯುವಜನತೆಯಲ್ಲಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಅಧಿಕವಾಗಿದೆ. ಇಂತಹ ಉದ್ದೇಶದಿಂದ ಸ್ವಚ್ಛಸೋಚ್ ವಿಚಾರ ಸಂಕಿರಣಗಳನ್ನು ಆಯೋಜಿಸಲಾಯಿತು.” ಎಂದು ತಿಳಿಸಿದರು. ಡಾ. ಮಂಜುನಾಥ್ ಭಂಡಾರಿ ಮಾತನಾಡಿ “ಯುವಕರಲ್ಲಿ ರಾಷ್ಟಪ್ರಜ್ಞೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಜಾಗೃತಗೊಳಿಸುವಲ್ಲಿ ಈ ಸ್ವಚ್ಛತಾ ಅಭಿಯಾನದ ಪಾತ್ರ ಬಹು ಮುಖ್ಯವಾಗಿದೆ. ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಚಾರ ಸಂಕಿರಣಗಳನ್ನು ನಡೆಸಿಕೊಟ್ಟ ಪೆÇ್ರೀ. ರಾಜಮೋಹನ್ ರಾವ್, ರಾಜಮಣಿ ರಾಮಕುಂಜ, ಸುರೇಶ್ ಶೆಟ್ಟಿ, ಗೋಪಿನಾಥ್ ರಾವ್, ಸುಭದ್ರಾ ಭಟ್, ಸತೀಶ್ ಸದಾನಂದ, ರಾಹುಲ್ ಟಿ. ಜಿ, ವಿಶಾಲ್, ನಿವೇದಿತಾ ಕಾಮತ್, ಸರಿತಾ ಶೆಟ್ಟಿ ಇವರುಗಳನ್ನು ಅಭಿನಂದಿಸಲಾಯಿತು. ಸ್ವಚ್ಛಸೋಚ್ ಅಭಿಯಾನದ ಮುಖ್ಯ ಸಂಯೋಜಕ ರಂಯು ನಿರೂಪಿಸಿದರು. ಈ ಕಾರ್ಯಕ್ರಮಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿಜನ್ ಬೆಳ್ಳರ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಚ್ಛಸೋಚ್ ಅಭಿಯಾನದ ವರದಿ ನೀಡಿದರು. ಶ್ರೀಲತಾ ದೆ


Spread the love