ರಾಮಕೃಷ್ಣ ಮಿಷನ್ ಪ್ರೇರೆಪಿತ ಸ್ವಚ್ಛ ಮಂಗಳೂರು; ಒಂಬತ್ತು ಪ್ರದೇಶಗಳಲ್ಲಿ ಸ್ವಚ್ಛತೆ

Spread the love

ರಾಮಕೃಷ್ಣ ಮಿಷನ್ ಪ್ರೇರೆಪಿತ ಸ್ವಚ್ಛ ಮಂಗಳೂರು; ಒಂಬತ್ತು ಪ್ರದೇಶಗಳಲ್ಲಿ ಸ್ವಚ್ಛತೆ

ಮಂಗಳೂರು: ರಾಮಕೃಷ್ಣ ಮಿಷನ್ನಿನಿಂದ ಪ್ರೇರೇಪಿತರಾದ ಸುಮಾರು 700 ಜನ ಸ್ವಯಂಸೇವಕರು ನಗರದಒಂಬತ್ತು ಬೇರೆ ಬೇರೆ ಪ್ರದೇಶಗಳಲ್ಲಿ ಭಾನುವಾರ ಬೆಳಿಗ್ಗೆ 7:30 ರಿಂದ 9:30 ರವರೆಗೆ ಸ್ವಚ್ಛತಾಅಭಿಯಾನವನ್ನುಕೈಗೊಂಡರು.

ಕೊಡಿಯಾಲ್ ಬೈಲ್: ಶ್ರೀ ಸದಾನಂದಉಪಾಧ್ಯಾಯಇವರ ನೇತೃತ್ವದ ಪ್ರೇರಣಾತಂಡ ಪಿವಿಎಸ್ ವೃತ್ತದ ಬಳಿ ಶುಚಿತ್ವದಕಾರ್ಯಕೈಗೊಂಡಿತು.

ರಾಮಕೃಷ್ಣ ಮಠದ ಸ್ವಾಮಿ ಪೂರ್ಣಕಾಮಾನಂದಜಿಹಾಗೂ  ಸ್ವಾಮಿಜಿತಕಾಮಾನಂದಜಿ ಮಹರಾಜ್ 11ನೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಗತರಂಗ, ಲಿಯೋಕ್ಲಬ್, ಲಯನ್ಸ ಕ್ಲಬ್ ಮೇಟ್ರೋಗೋಲ್ಡ್ ನ ಸದಸ್ಯರು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

image003ramakrishna-mission-swacch-mangaluru-20161018-003 image004ramakrishna-mission-swacch-mangaluru-20161018-004 image008ramakrishna-mission-swacch-mangaluru-20161018-008 image010ramakrishna-mission-swacch-mangaluru-20161018-010 image011ramakrishna-mission-swacch-mangaluru-20161018-011 image013ramakrishna-mission-swacch-mangaluru-20161018-013 image018ramakrishna-mission-swacch-mangaluru-20161018-018 image019ramakrishna-mission-swacch-mangaluru-20161018-019 image001ramakrishna-mission-swacch-mangaluru-20161018-001 image002ramakrishna-mission-swacch-mangaluru-20161018-002 image005ramakrishna-mission-swacch-mangaluru-20161018-005 image006ramakrishna-mission-swacch-mangaluru-20161018-006 image007ramakrishna-mission-swacch-mangaluru-20161018-007 south-mumbai-2-killed-major-fire image009ramakrishna-mission-swacch-mangaluru-20161018-009 image012ramakrishna-mission-swacch-mangaluru-20161018-012 image014ramakrishna-mission-swacch-mangaluru-20161018-014 image015ramakrishna-mission-swacch-mangaluru-20161018-015 image016ramakrishna-mission-swacch-mangaluru-20161018-016 image017ramakrishna-mission-swacch-mangaluru-20161018-017

ಬಿಜೈ: “ಮಂಗಳೂರಿನ ಹಿರಿಯರು” ಎಂಬ ವಯೋವೃದ್ಧರ ಆಸಕ್ತ ತಂಡದ ಸದಸ್ಯರು ಕೆ ಎಸ್‍ಆರ್ ಟಿ ಸಿ ಬಸ್ ತಂಗುದಾಣದ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕೈಂಕರ್ಯ ಕೈಗೊಂಡರು. ರಾಮಕೃಷ್ಣ ಮಠದ ಹಿರಿಯ ಸನ್ಯಾಸಿ ಸ್ವಾಮಿ ಪೂರ್ಣಕಾಮಾನಂದಜಿ ಹಾಗೂ ಸೀನಿಯರ್ ಸಿಟಿಜನ್ಸ್ ಅಸೋಸಿಯೇಶನ್ನಿನ ಕಾರ್ಯದರ್ಶಿ ಶ್ರೀ ನಾಗೇಶ್ 12ನೇ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಸ್ವಚ್ಛತೆಯಲ್ಲಿನ ಹಿರಿಯರ ಬದ್ಧತೆಯುವಕರಿಗೆ ಆದರ್ಶವಾಗಲಿ ಎಂದು ಸ್ವಾಮಿಜಿಯವರು ಆಶಿಸಿದರು.

ಕೊಟ್ಟಾರಚೌಕಿ : ಕಿರಣಕುಮಾರ ನೇತೃತ್ವದಲ್ಲಿ ಕುಮಾರ ಜಿಮ್ ಫ್ರೆಂಡ್ಸ್‍ಯುವಕರ ತಂಡ ಕೊಟ್ಟರ ಚೌಕಿಯ ಮೇಲ್ಸೇತುವೆಯ ಕೆಳಭಾಗ   ಹಾಗೂ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್‍ ಗಣೇಶ್‍ಕಾ ರ್ಣಿಕ ಹಾಗೂ ಬ್ರಹ್ಮಚಾರಿ ಶಿವಕುಮಾರ 13ನೇ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಜೆಸಿಬಿ ಮತ್ತು ಟಿಪ್ಪರ ಬಳಸಿ ಬೃಹತ್ ಪ್ರಮಾಣದ ಕಲ್ಲಿನ ಹಾಗೂ ಮಣ್ಣಿನ ರಾಶಿಗಳನ್ನು ತೆರವುಗೊಳಿಸಿ ಶುಚಿಗೊಳಿಸಿದರು.

ನಂತೂರು :  ಹವ್ಯಕ ಮಹಾಸಭಾ ಮಂಗಳೂರು ಇದರ ಸದಸ್ಯರು ನಂತೂರು ಪದುವಾ ಪ್ರದೇಶದ ಹೆದ್ದಾರಿಯ ಅಕ್ಕಪಕ್ಕದಲ್ಲಿ ಸ್ವಚ್ಛ್ಚತೆಯನ್ನು ಕೈಗೊಂಡರು. ಇದಕ್ಕೂ ಮುನ್ನ 10 ತಿಂಗಳ ಸ್ವಚ್ಚತಾ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು. ಸ್ವಾಮಿ ಜಿತಕಾಮಾನಂದಜಿ 14ನೇ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು. ತದನಂತರ ಸುಮಾರು ಎರಡು ಗಂಟೆಗಳ ಕಾಲ ಸ್ವಚ್ಚತೆಯನ್ನು ಕೈಗೊಳ್ಳಲಾಯಿತು. ಡಾ. ರಾಜೇಂದ್ರಪ್ರಸಾದ, ಶ್ರೀ ಜಿ ಕೆ ಸೇರಾಜೆ, ಶ್ರೀ ವೇಣುಗೋಪಾಲ್ ಮತ್ತಿತರರು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.

ಕಂಕನಾಡಿ: ಸಹ್ಯಾದ್ರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಾಧ್ಯಾಪಕ ಶ್ರೀ ಶೇಷಪ್ಪ ಅಮೀನ್‍ ಮಾರ್ಗದರ್ಶನದಲ್ಲಿ ಕಂಕನಾಡಿಯಲ್ಲಿ ಸ್ವಚ್ಛತೆಯನ್ನು ಕೈಗೊಂಡರು. 15ನೇ ಕಾರ್ಯಕ್ರಮಕ್ಕೆ ರಾಮಕೃಷ್ಣ ಮಠದ ಸ್ವಾಮಿ ಧರ್ಮವ್ರತಾನಂದಜಿ ಶುಭ ಹಾರೈಸಿ ಶುಭಾರಂಭಗೈದರು. ಕಾಲೇಜಿನ ಡೀನ್‍ ಪ್ರೋಫೆಸರ್ ಉಮಾಶಂಕರ್‍ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದರು. ಯುವಜನತೆ ಉತ್ಸಾಹದಿಂದ ಅಭಿಯಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಗರೋಡಿ: ಸ್ವಚ್ಛ ಮಂಗಳೂರಿಗಾಗಿ ಸ್ವಚ್ಛಗರೋಡಿ ಎಂಬ ಧ್ಯೇಯೋದ್ದೇಶದಿಂದ ಆರಂಭವಾದ ಯುವಕರ ತಂಡ ಗರೋಡಿಯ ಸುತ್ತಮುತ್ತಲಿನ ಜಾಗೆಗಳಲ್ಲಿ ಸ್ವಚ್ಚತೆಯನ್ನು ಕೈಗೊಂಡರು. ಶಾಸಕ ಶ್ರೀ ಜೆಆರ್ ಲೋಬೋ ಹಾಗೂ ಮನಪಾ ಸದಸ್ಯೆ ಆಶಾ ಡಿಸಿಲ್ವಾ 16ನೇ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಶುಭಾರಂಭ ಮಾಡಿದರು. ಸ್ವಾಮಿ ಏಕಗಮ್ಯಾನಂದಜಿ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದರು.  ಕಾರ್ಯಕ್ರಮದಲ್ಲಿ ಟೀಮ್‍ಗರೋಡಿ, ಗೂಗ್ಲಿ ಕ್ರಿಕೇಟರ್ಸ್ ನಾಗುರಿ, ಗರೋಡಿ ಮಲ್ಟಿ ಜಿಮ್, ಬಿಲ್ಲ್‍ವ  ಸೇವಾ ಸಮಿತಿ ಸದಸ್ಯರು ಸಕಿಯರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪಡೀಲ್: ಮಹಾದೇವಿ ಭಜನಾ ಮಂದಿರದ ಮುಂಭಾಗದಲ್ಲಿ ಸ್ವಚ್ಚ ಪಡೀಲ್‍ಅಭಿಯಾನಕ್ಕೆ ಸ್ವಾಮಿ ಏಕಗಮ್ಯಾನಂದಜಿ ಹಾಗೂ ಶ್ರೀ ವಾಸುದೇವ ಕೊಟ್ಟರಿ ಜಂಟಿಯಾಗಿ ಚಾಲನೆ ನೀಡಿದರು. ಕೋಡಂಗೆ ಬಾಲಕೃಷ್ಣ ನಾಯ್ಕ ಮಾರ್ಗದರ್ಶನದಲ್ಲಿ ಸುಮಾರು75 ಜನ ಸ್ವಯಂ ಸೇವಕರು ಸುಮಾರು ಮೂರು ಗಂಟೆಗಳ ಕಾಲ17ನೇ ಅಭಿಯಾನದಲ್ಲಿ ಭಾಗವಹಿಸಿದರು. ನಿರಂತರವಾಗಿ ಹತ್ತು ತಿಂಗಳ ಕಾಲ ಈ ಸ್ವಚ್ಚತೆಯ ಕೈಂಕರ್ಯ ನಡೆಯಲಿದೆ

ಬೆಂದೂರವೆಲ್: ಸ್ವಚ್ಚ ಮಂಗಳೂರು ಕಾರ್ಯಕ್ರಮಕ್ಕೆ ಭಂಡಾರಿ ಫೌಂಡೇಶನ್ ಸಂಪೂರ್ಣ ಸಹಕಾರ ನೀಡಿದೆ. ಅದರಂತೆ ಸಂಯೋಜಕ ಶ್ರೀ ಉಮಾನಾಥ ಕೋಟೆಕಾರ್ ಮಾರ್ಗದರ್ಶನದಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಬೆಂದೂರವೆಲ್ ವೃತ್ತದಿಂದ ಸೇಂಟ್‍ಆಗ್ನೇಸ್ ವರೆಗೆರಸ್ತೆಯ ಬದಿಗಳನ್ನು ಗುಡಿಸಿ ಸ್ವಚ್ಚಗೊಳಿಸಿದರು. ಕಾಲೇಜಿ ನಡೀನ್‍ ಉಮಾಶಂಕರ್ ಹಾಗೂ ಸ್ವಾಮಿ ಧರ್ಮ ವೃತಾನಂದಜಿ 18ನೇ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಸ್ವಚ್ಚತೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದುದ್ದು ಸಾಮಾನ್ಯವಾಗಿತ್ತು. ಶ್ರೀಮತಿ ಶ್ರೀಲತಾ ಯು ಎ ಕಾರ್ಯಕ್ರಮವನ್ನು ಸಂಘಟಿಸಿದರು.

ಹಂಪಣಕಟ್ಟಾ: ಗಣಪತಿ ಹೈಸ್ಕೂಲ್‍ರಸ್ತೆಯಲ್ಲಿ ಕೃಷ್ಣ ಭವನಆಟೋ ಪಾರ್ಕಿನಆಟೋಚಾಲಕರು ಶ್ರದ್ಧೆಯಿಂದ ಸ್ವಚ್ಛತಾ ಕೈಂಕರ್ಯವನ್ನು ಮಾಡಿದರು. ಸ್ವಾಮಿ ಚಿದಂಬರಾನಂದಜಿ ವೇದಘೋಷದ ಮೂಲಕ 19ನೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೆಸಿಬಿ, ಟಿಪ್ಪರಗಳನ್ನು ಬಳಸಿ ಕಸದ ರಾಶಿಗಳನ್ನು ತೆರವುಗೊಳಿಸಿರುವುದು ವಿಶೇಷವಾಗಿತ್ತು. ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಯೋಜಕ ದಿಲ್ ರಾಜ್ ಆಳ್ವ ಕಾರ್ಯಕ್ರಮವನ್ನು ಸಂಘಟಿಸಿದರು.

ಮಂಗಳೂರು ನಗರದ ಒಂಬತ್ತು ಪ್ರದೇಶಗಳಲ್ಲಿ ಒಟ್ಟು ಸುಮಾರು 700 ಕಾರ್ಯಕರ್ತರು ರಾಮಕೃಷ್ಣ ಮಿಷನ್ನಿನ ಆಯೋಜಿಸಿದ್ದ ಈ ವಾರದ ಸ್ವಚ್ಛತೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ತರುವಾಯ ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು

ಈ ಅಭಿಯಾನ ಮಹಾ ಪೋಷಕರಾಗಿ ನಿಟ್ಟೆ ವಿದ್ಯಾಸಂಸ್ಥೆ ಹಾಗೂ ಎಂಆರ್‍ಪಿಎಲ್ ಸಂಸ್ಥೆ ಧನ ಸಹಾಯ ನೀಡಿ ಪ್ರೋತ್ಸಾಹಿಸುತ್ತಿವೆ.

11 ರಿಂದ 19 ನೇ ಅಭಿಯಾನಗಳ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ಮೇಲ್ಕಂಡ ಸುದ್ದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ನಮ್ಮೊಂದಿಗೆ ಈ “ಸ್ವಚ್ಚ ಮಂಗಳೂರು ಅಭಿಯಾನ” ದಲ್ಲಿ ಕೈಜೋಡಿಸಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುವೆವು.


Spread the love