ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 15 ನೇ ವಾರದಲ್ಲಿ ಜರುಗಿದ 12 ಸ್ವಚ್ಛತಾ ಕಾರ್ಯಕ್ರಮಗಳ ವರದಿ
174) ಸುಲ್ತಾನ ಬತ್ತೇರಿ : ಆರ್ಟ್ ಆಫ್ ಲಿವಿಂಗ್ ಕಾರ್ಯಕರ್ತರ ನೇತೃತ್ವದಲ್ಲಿ ಸುಲ್ತಾನ್ ಬತ್ತೇರಿ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಹಾಗೂ ಶ್ರೀ ಮೋಹನ್ ಶೆಟ್ಟಿ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಬೋಳೂರು ಮೊಗವೀರ ಸಭಾ ಹಾಗೂ ಮಹಿಳಾ ಸಂಘದ ಸದಸ್ಯರ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸದಾಶಿವ ಕಾಮತ್ ಕಾರ್ಯಕರ್ತರನ್ನು ಮಾರ್ಗದರ್ಶಿಸಿದರು.
175) ಮಂಗಳಾ ನಗರ: ಶ್ರೀ ಶಾರಾದಾ ಮಹಿಳಾ ವೃಂದದ ಸದಸ್ಯೆಯರಿಂದ ಮಂಗಳಾ ನಗರದಲ್ಲಿ ಸ್ವಚ್ಛತಾ ಕೈಂಕರ್ಯ ನಡೆಯಿತು. ಮಂಗಳಾ ನಗರ ಹಾಗೂ ಮಂಕಿ ಸ್ಟಾಂಡ್ ರಸ್ತೆಗಳನ್ನು ಶುಚಿಗೊಳಿಸಿದರು. ಮಂಕಿಸ್ಟಾಂಡ್ ರಸ್ತೆಯ ಬದಿಯಲ್ಲಿ ಬೀಳುತ್ತಿದ್ದ ರಾಶಿ ರಾಶಿ ತ್ಯಾಜ್ಯವನ್ನು ತೆಗೆದು ಅಲ್ಲಿನ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿದರು. ಅಲ್ಲದೇ ಇಂದು ಸುಮಾರು 50 ಗೃಹಿಣಿಯರಿಗೆ ಕಸವನ್ನು ಹೇಗೆ ವಿಂಗಡಿಸಬೇಕು, ಅದರಿಂದ ಗೊಬ್ಬರ ತಯಾರಿಕೆ ಹಾಗೂ ಕಸದ ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಅರ್ಥ ಟು ಅರ್ಥ ಸಂಸ್ಥೆಯ ನಂದಿನಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಹಿರಿಯ ಸದಸ್ಯರಾದ ಕೃಷ್ಣಾ ಬಾಯಿ, ಇಂದಿರಾ ಪೈ ಸೇರಿದಂತೆ ಸುಮಾರು 40 ಮಹಿಳೆಯರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಚಿತ್ರಾ ಪ್ರಭು ಮತ್ತು ಭಾರತಿ ಭಟ್ ಕಾರ್ಯಕ್ರಮ ಸಂಯೋಜಿಸಿದರು.
176) ಉರ್ವಾ ಸ್ಟೋರ್ : ಎಂ ಸಿ ಎಫ್ ಮಂಗಳಾ ಸಿಬ್ಬಂದಿಯವರು ಸ್ಥಳೀಯ ನಾಗರಿಕರ ಸಹಯೋಗದಲ್ಲಿ ಉರ್ವಾ ಮಾರಿಗುಡಿ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡರು. ಮನಪಾ ಸದಸ್ಯ ರಾಧಾಕೃಷ್ಣ ಹಾಗೂ ಶ್ರೀ ಪದ್ಮನಾಭ ಅಮೀನ್ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಎಮ್ ಸಿ ಎಫ್ ಜನರಲ್ ಮಾನೇಜರ್ ಪ್ರಭಾಕರ್ ರಾವ್ ಮಾರ್ಗದರ್ಶನದಲ್ಲಿ ಎಸ್ ಸಿ ಎಸ್ ನರ್ಸಿಂಗ್ ಕಾಲೇಜಿನಿಂದ ಅಶೋಕ ನಗರವರೆಗಿನ ಮಾರ್ಗವನ್ನು ಶುಚಿಗೊಳಿಸಿ ಬದಿಯ ತೋಡುಗಳನ್ನು ಸ್ವಚ್ಛ ಮಾಡಿದರು. ಅಲ್ಲದೇ ಎಸ್ ಸಿ ಎಸ್ ನರ್ಸಿಂಗ್ ಕಾಲೇಜ್ ರಸ್ತೆಯ ಬದಿಯಲ್ಲಿ ಸ್ವಚ್ಛತೆಯ ಜಾಗೃತಿಯನ್ನುಂಟುಮಾಡುವ ಸುಂದರವಾದ ಕಲಾಕೃತಿಗಳನ್ನು ರಚಿಸಲಾಯಿತು. ಅವಿನಂದನ್ ಕಾರ್ಯಕ್ರಮವನ್ನು ಸಂಯೋಜಿಸಿದರು.
177) ಲ್ಯಾಂಡ್ ಲಿಂಕ್ಸ್: ಮಾತೃಧಾವi ಸದಸ್ಯೆಯರಿಂದ ಹಾಗೂ ಲ್ಯಾಂಡಲಿಂಕ್ಸ್ ನಾಗರಿಕರ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಶ್ರೀಮುರಳಿ ಪ್ರಭು ಹಾಗೂ ಪ್ರಸನ್ನ ರವಿ ಕಾರ್ಯಕ್ರಮವನ್ನು ಶುಭಾರಂಭ ಮಾಡಿದರು. ಮಾತೃಧಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ನಡೆಸಲಾಯಿತು. ಮನಪಾ ಸದಸ್ಯ ರಾಜಶೇಖರ ಅಭಿಯಾನದ ಮುಂಚೂಣಿಯಲ್ಲಿದ್ದರು. ಸುಮಾರು 80 ಕಾರ್ಯಕರ್ತರು ಭಾಗವಹಿಸಿದ್ದರು. ಸತ್ಯನಾರಾಯಣ ಕೆ ವಿ ಹಾಗೂ ಶಾಂಭವಿ ಕಾರ್ಯಕ್ರಮವನ್ನು ಸಂಘಟಿಸಿದರು.
178) ಜೆಪ್ಪು : ಜೆಪ್ಪು ನಾಗರಿಕರಿಂದ ಗುಜ್ಜರಕೆರೆ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶ್ರೀ ಸೀತಾರಾಮ್ ಆಳ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆರೆಯ ಸುತ್ತಮುತ್ತ ಕಳೆಯನ್ನು ತೆಗೆಯಲಾಯಿತು. ರಸ್ತೆಯ ಮೇಲೆ ಹರಡಿಕೊಂಡಿದ್ದ ಮಣ್ಣನ್ನು ತೆಗೆದು ಹಾಕಲಾಯಿತು. ಚರಂಡಿಯನ್ನು ಸ್ವಚ್ಛಗೊಳಿಸಲಾಯಿತು. ನಿತೇಶ್ ಹಾಗೂ ರೂಪೇಶ್ ಕಾರ್ಯಕ್ರಮವನ್ನು ಸಂಯೋಜಿಸಿದರು.
179) ಮಣ್ಣಗುಡ್ಡ : ಮಣ್ಣಗುಡ್ದ ನಾಗರಿಕರು ಇಂದು ಗುಂಡೂರಾವ್ ಲೇನ್‍ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಶ್ರೀ ನಕುಲ್ ಪೈ ಹಾಗೂ ಶ್ರೀಮತಿ ವಂದನಾ ನಾಯಕ ಅಭಿಯಾನಕ್ಕೆ ಚಾಲನೆ ನೀಡಿದರು. ಗುಂಡೂರಾವ್ ರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಮುಖ್ಯವಾಗಿ ಬದಿಯಲ್ಲಿದ್ದ ತೋಡಿನಲ್ಲಿದ್ದ ತ್ಯಾಜ್ಯವನ್ನು ಹೊರತೆಗೆಯಲಾಯಿತು. ನಂತರ ಪಕ್ಕದಲ್ಲಿದ್ದ ಕಸದ ವಾಹನ ನಿಲ್ಲಿಸುವ ಜಾಗೆಯನ್ನು ಶುಚಿಗೊಳಿಸಲಾತು. ಅನೆಕ ಗೃಹಿಣಿಯರು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮನಪಾ ಸದಸ್ಯೆ ಜಯಂತಿ ಆಚಾರ್ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ಶ್ರೀ ಮನೋಹರ್ ಪ್ರಭು ಸಂಯೋಜಿಸಿದರು.
180) ಬಲ್ಮಠ : ಟೀಮ್ ದೇಶಾಭಿಮಾನಿ ಸದಸ್ಯರು ಇಂದು ಬಲ್ಮಠ ಮಹಿಳಾ ಕಾಲೇಜಿನ ಆವರಣ ಹಾಗೂ ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು. ಕಾಲೇಜಿನ ಪ್ರಾಂಶುಪಾಲರಾದ ಪೆÇ್ರೀ. ರಮಾನಂದ ಹಾಗೂ ಶ್ರೀಕರ ಪ್ರಭು ಅಭಿಯಾನವನ್ನು ಶುಭಾರಂಭಗೊಳಿಸಿದರು. ಕಾಲೇಜಿನ ಮುಖ್ಯದ್ವಾರದ ಆವರಣ ಗೋಡೆಗಳ ಮೇಲೆ ಬೆಳೆದಿದ್ದ ಹುಲ್ಲು ಹಾಗೂ ಪೆÇದೆಗಳನ್ನು ತೆಗೆದು ಸ್ವಚ್ಛ ಮಾಡಲಾಯಿತು. ನಂತರ ಆವರಣದೊಳಗಿನ ತ್ಯಾಜ್ಯ ತೆಗೆದು ಶುಚಿಗೊಳಿಸಲಾಯಿತು. ನಾಗೇಶ್ ಶೆಣೈ ಹಾಗೂ ಅಶ್ವಿತ್ ಕಾರ್ಯಕ್ರಮವನ್ನು ಸಂಯೋಜಿಸಿದರು.
181) ಬಂಟ್ಸ್ ಹಾಸ್ಟೆಲ್ ವೃತ್ತ : ಲಯನ್ಸ್ ತಂಡದ ನೇತೃತ್ವದಲ್ಲಿ ಶ್ರೀರಾಮಕೃಷ್ಣ ಕಾಲೇಜಿನ ಎನ್ ಎಸ್ ಎಸ್ ವಿಭಾಗ ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಕರಂಗಲಪಾಡಿಯವರೆಗೆ ಸ್ವಚ್ಛತೆಯನ್ನು ಕೈಗೊಂಡರು. ಡಾ. ನವೀನ್ ಶೆಟ್ಟಿ ಹಾಗೂ ಹರ್ಷ ಕೇದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಸಕ್ರಿಯವಾಗಿ ಅಭಿಯಾನದಲ್ಲಿ ಪಾಲ್ಗೊಂಡರು. ಶ್ರೀ ಸದಾಶಿವ ರೈ ಸಂಯೋಜಿಸಿದರು.
182) ಕೊಲ್ಯ: ಶ್ರೀಕ್ಷೇತ್ರದ ಕೊಲ್ಯದ ಭಕ್ತರ ಹಾಗೂ ಊರಿನ ನಾಗರಿಕರ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಯೋಗ ಶಿಕ್ಷಕ ಬಾಳಪ್ಪ ಪೂಜಾರಿ ಹಾಗೂ ಶ್ರೀಮತಿ ಪೂರ್ಣಕಲಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಹಾಗೂ ಮಠದ ಮುಂಭಾಗದಲ್ಲಿ ಸ್ವಚ್ಛತಾ ಕೈಕಂರ್ಯ ಜರುಗಿತು. ಶ್ರೀಮಧುಸೂದನ ಅಯ್ಯರ ಹಾಗೂ ಶ್ರೀಸೀತಾರಾಮ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
183) ನವಭಾರತ ವೃತ್ತ: ಪ್ರೇರಣಾ ತಂಡದಿಂದ ಇಂದು ನವಭಾರತ ವೃತ್ತದ ಸುತ್ತಮುತ್ತ ಸ್ವಚ್ಛತೆ ನಡೆಯಿತು. ಶ್ರಿ ಕೆ ಸಿ ಪ್ರಭು ಹಾಗೂ ಡಾ. ಪ್ರಭಾಕರ ರಾವ್ ಜೊತೆಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸದಾನಂದ ಉಪಾಧ್ಯಾಯ ಮಾರ್ಗದರ್ಶನದಲ್ಲಿ ರಸ್ತೆಯ ಬದಿಯ ತೋಡುಗಳನ್ನು ಹಾಗೂ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸಲಾಯಿತಿ. ಸದಾನಂದ ಮೇಲಾಂಟ, ಗೋಪಾಲಕೃಷ್ಣ ಉಡುಪ, ಜಯಶ್ರೀ ಅರವಿಂದ ಮತ್ತಿತರರು ಅಭಿಯಾನದಲ್ಲಿ ಭಾಗವಹಿಸಿದರು.
184) ನಂತೂರು ಪದುವಾ : ಮಂಗಳೂರು ಹವ್ಯಕ ಸಭಾ ಸಹಯೋಗದಲ್ಲಿ ನಂತೂರ ಪದುವಾ ಪ್ರದೇಶದಲ್ಲಿ ಅಭಿಯಾನ ಜರುಗಿತು. ನಾಲ್ಕನೇ ತಿಂಗಳಿನ ಈ ಕಾರ್ಯಕ್ರಮವನ್ನು ದಕ ಜಿಲ್ಲಾ ಹೋಂ ಗಾರ್ಡ್ಸ್ ಕಮಾಂಡೆಟ್ ಡಾ. ಮುರಳಿಮೋಹನ್ ಚೂಂತಾರು ಉದ್ಘಾಟಿಸಿದರು. ವೇಣುಗೋಪಾಲ್ ಭಟ್ ಸ್ವಾಗತಿಸಿದರು. ಡಾ. ರಾಜೇಂದ್ರ ಪ್ರಸಾದ ವಂದಿಸಿದರು. ಹಿರಿಯ ಹೋಂ ಗಾರ್ಡ್ಸ್ ಗಳಾದ ರಾಜಶ್ರೀ ಹಾಗೂ ಕೇಶವ ಶೆಟ್ಟಿಗಾರ್ ಸಹಿತ 50 ಜನ ಪಾಲ್ಗೊಂಡರು.
185) ರಥಬೀದಿ : ಶ್ರೀ ಗೋಕರ್ಣ ಮಠದ ಭಕ್ತರಿಂದ ಭವಂತಿ ರಸ್ತೆಯ ಕ್ರಾಸ್ ನಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಶ್ರೀಬಸ್ತಿ ಪುರುಷೋತ್ತಮ ಶೆಣೈ ಕಾರ್ಯಕ್ರಮವನ್ನು ಶುಭಾರಂಭಿಸಿದರು. ಸತ್ಯನಾರಾಯಣ ಬಾಳಿಗಾ, ಕಮಲಾಕ್ಷ ಪೈ, ದಾಮೋದರ ಭಟ್ ಮತ್ತಿತರರು ಅಭಿಯಾನದಲ್ಲಿ ಭಾಗವಹಿಸಿದರು. ಶ್ರೀ ನರೇಶ್ ಕಿಣಿ ಕಾರ್ಯಕ್ರಮ ಸಂಘಟಿಸಿದರು.
ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ಸಹಯೋಗದಲ್ಲಿ ಕಲ್ಲಡ್ಕ ವೃತ್ತದಲ್ಲಿ ಅಭಿಯಾನ ನಡೆಯಿತು. ಎನ್ ಎಸ್ ಎಸ್ ಯೋಜನಾಧಿಕಾರಿ ಶ್ರೀ ಹರೀಶ್ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯ ಕೃಷ್ಣ ಪ್ರಸಾದ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು. ಸಂಯೋಜಕ ಪ್ರಕಾಶ ಬೊರ್ಕರ್ ಸೇರಿದಂತೆ ಅನೆಕ ವಿದ್ಯಾರ್ಥಿಗಳು
ಕಲ್ಲಡ್ಕ ವಿಟ್ಲ ರಸ್ತೆ ಸ್ವಚ್ಛಗೊಳಿಸಿ ಸಾರ್ವಜನಿಕ ಶೌಚಾಲಯವನ್ನು ಶುಚಿಗೊಳಿಸಿದರು.