ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 22 ನೇ ವಾರದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 22 ನೇ ವಾರದ ವರದಿ

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 22 ನೇ ವಾರದಲ್ಲಿ ಜರುಗಿದ 10 ಸ್ವಚ್ಛತಾ ಕಾರ್ಯಕ್ರಮಗಳ ವರದಿ

240) ಎಬಿ ಶೆಟ್ಟಿ ವೃತ್ತ :ಹಿಂದೂ ವಾರಿಯರ್ಸ್‍ತಂಡ ಎಬಿ ಶೆಟ್ಟಿ ವೃತ್ತದಿಂದಕ್ಲಾಕ್‍ಟವರ್ ವೃತ್ತದ ವರೆಗೆ ಸ್ವಚ್ಛತಾಕಾರ್ಯವನ್ನುಕೈಗೊಂಡಿತು. ಬೆಳಿಗ್ಗೆ 7:30ಕ್ಕೆ ಸ್ವಾಮಿಜಿತಕಾಮಾನಂದಜಿ ಹಾಗೂ ಅಭಿಯಾನದ ಮಾರ್ಗದರ್ಶಿಕ್ಯಾಪ್ಟನ್‍ಗಣೇಶ್‍ಕಾರ್ಣಿಕ್‍ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಶ್ರೀ ಯೋಗಿಶ್‍ಕಾಯರ್ತ್ತಡ್ಕ ಮಾರ್ಗದರ್ಶನದಲ್ಲಿಕೆಲವು ಯುವಕರುಬೀದಿ ದೀಪಗಳ ಕಂಬಕ್ಕೆ ಕಟ್ಟಲಾಗಿದ್ದ ಹಳೆಯ ಬ್ಯಾನರ್, ಬಂಟಿಂಗ್ಸ್‍ಹಾಗೂ ಅನೇಕ ದಿನಗಳಿಂದ ವಿದ್ಯುತ್ತ ದೀಪದ ಕಂಬಗಳಲ್ಲಿ ಶೇಖರಣೆಯಾಗಿದ್ದ ಹಗ್ಗ,ದಾರ, ಹುರಿಗಳನ್ನು ಕತ್ತರಿಸಿ ತೆಗೆದು ಸ್ವಚ್ಛಗೊಳಿಸಿದರು. ಶ್ರೀ ಶಿವು ಪುತ್ತೂರು ಸೇರಿದಂತೆ ಇನ್ನುಳಿದ ಯುವಕರು ಮಾರ್ಗವಿಭಾಜಕಗಳ ಮಧ್ಯದಲ್ಲಿದ್ದ ಕಸ ಹಾಗೂ ಹುಲ್ಲನ್ನುತೆಗೆದು ಶುಚಿಗೊಳಿಸಿದರು.

241)ಜೆಪ್ಪು : ಭಗಿನಿ ಸಮಾಜದ ವಿದ್ಯಾರ್ಥಿಗಳು ಹಾಗೂ ಸ್ಥಳಿಯರು ಮೋರ್ಗನ್ಸ್‍ಗೇಟ್ ಹಾಗೂ ಜೆಪ್ಪು ಭಗಿನಿ ಸಮಾಜದ ಆಸುಪಾಸಿನಲ್ಲಿ ಸ್ವಚ್ಛತಾಕಾರ್ಯವನ್ನು ಹಮ್ಮಿಕೊಂಡಿದ್ದರು. ಡಾ ವರ್ಣೋಧರ ಪ್ರದೀಪ ಹಾಗೂ ಶ್ರೀ ರಾಜಶ್ರೀ ಅಭಿಯಾನಕ್ಕೆಜಂಟಿಯಾಗಿ ಚಾಲನೆ ನೀಡಿದರು. ಭಗಿನಿ ಸಮಾಜದಿಂದ ಮೋರ್ಗನ್ಸ್‍ಗೇಟ್ ವರೆಗಿನ ಪ್ರದೇಶವನ್ನುಸಂಯೋಜಕಿ ಶ್ರೀಮತಿ ರತ್ನಾ ಆಳ್ವ ಮಾರ್ಗದರ್ಶನದಲ್ಲಿವಿದ್ಯಾರ್ಥಿಗಳು ಶುಚಿಗೊಳಿಸಿದರು. ಅಲ್ಲದೇಜೆಪ್ಪು ಪ್ರದೇಶದ ಮನೆಮನೆಗಳಿಗೆ ತೆರಳಿ ಸ್ವಚ್ಛತೆಯಕರಪತ್ರ ಹಂಚಿಜಾಗೃತಿ ಮೂಡಿಸಲು ಪ್ರಯತ್ನಿಸಲಾಯಿತು. ಹವ್ಯಾಸಿ ಕಲಾವಿದಡಾ. ವರ್ಣೋಧರ ಪ್ರದೀಪ ನೇತೃತ್ವದಲ್ಲಿ ಭಗಿನಿ ಸಮಾಜದ ಗೋಡೆಗಳನ್ನು ಶುಚಿಗೊಳಿಸಿ ಸಾಮಾಜಿಕ ಕಾಳಜಿಯುಳ್ಳ ಚೆಂದದಥ್ರೀಡಿ ಚಿತ್ರಗಳನ್ನು ಬರೆಯಲಾಗುತ್ತಿದೆ. ಶ್ರೀ ಸುರೇಶ್ ಶೆಟ್ಟಿ, ಅಧ್ಯಾಪಕಿ ಶ್ರೀಮತಿ ವಿಜಯಲಕ್ಷ್ಮೀಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು
242)ಕರಂಗಲಪಾಡಿ: ಸ್ವಚ್ಛಕರಂಗಲಪಾಡಿತಂಡದ ಸದಸ್ಯರುಇಂದುಜೈಲ್‍ರಸ್ತೆ ಹಾಗೂ ಸಿ ಜಿಕಾಮತ್ ರಸ್ತೆಗಳಲ್ಲಿ ಸ್ವಚ್ಛತಾಕಾರ್ಯ ನಡೆಸಿದರು. ಶ್ರೀ ಎಂ ಆರ್ ವಾಸುದೇವಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಸ್ಥಳಿಯ ನಿವಾಸಿಗಳು ಹಾಗೂ ಕರಂಗಲಪಾಡಿಆಟೋಚಾಲಕರು ಸ್ವಚ್ಛತಾಕಾರ್ಯವನ್ನುಕೈಗೊಂಡರು. ಜೈಲ್‍ರಸ್ತೆಯ ಮೂಲೆಯಲ್ಲಿ ರಾಶಿರಾಶಿಯಾಗಿ ಬಿದ್ದಿದ್ದತ್ಯಾಜ್ಯವನ್ನುತೆಗೆದು ಸ್ವಚ್ಛಗೊಳಿಸಲಾಯಿತು. ತದನಂತರ ಸುತ್ತಮುತ್ತಲಿನ ಪ್ರದೇಶಗಳನ್ನು ಶುಚಿಗೊಳಿಸಲಾಯಿತು. ಶ್ರೀ ಸತ್ಯನಾರಾಯನ ಕೆ ವಿ, ಶ್ರೀ ಪ್ರಶಾಂತ ಉಬರಂಗಳ, ಶ್ರೀಮತಿ ವಿದ್ಯಾ ಶೆಣೈ ಸೇರಿದಂತೆ ಅನೇಕ ನಾಗರಿಕರು, ಆಟೋಚಾಲಕರು ಸ್ವಚ್ಛತಾಕಾರ್ಯದಲ್ಲಿ ಕೈಜೋಡಿಸಿದರು.
243)ಮಣ್ಣಗುಡ್ಡ :ಆರ್ಟ್‍ಆಫ್ ಲೀವಿಂಗ್‍ನ ಸದಸ್ಯರು ಮಣ್ಣಗುಡ್ಡೆಯಗಾಂಧಿ ಪಾರ್ಕ್‍ನ ಸುತ್ತ ಮುತ್ತಸ್ವಚ್ಛತೆಯಕೈಂಕರ್ಯಕೈಗೊಂಡರು. ಸ್ವಾಮಿಜಿತಕಾಮಾನಂದಜಿ ಹಾಗೂ ಶ್ರಿಮತಿ ಸುಮನಾ ಕಾಮತ್‍ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಪಾರ್ಕ ಸುತ್ತಮುತ್ತಲಿನ ತೋಡು ಹಾಗೂ ಮಾರ್ಗಗಳನ್ನು ಶುಚಿಗೊಳಿಸಲಾಯಿತು. ಶ್ರೀಸದಾಶಿವ ಕಾಮತ್,ಶ್ರಿಮತಿ ತನುಜಾ, ಆಶಾ ರವಿ, ಶ್ರೀಮತಿ ರೇಣುಕಾ ಶೆಟ್ಟಿ ಸೇರಿದಂತೆಆರ್ಟ್‍ಆಫ್ ಲೀವಿಂಗ್ ನ ಅನೇಕ ಸದಸ್ಯರುಅಭಿಯಾನದಲ್ಲಿ ಪಾಲ್ಗೊಂಡರು.
244)ಕೆಪಿಟಿ :ಕರ್ನಾಟಕ ಪಾಲಿಟೆಕ್ನಿಕ್‍ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಕೆಪಿಟಿ ಪರಿಸರದಲ್ಲಿ ಸ್ವಚ್ಛತಾಕಾರ್ಯಜರುಗಿತು. ಹೆದ್ದಾರಿಯಅಕ್ಕಪಕ್ಕದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಕೆಪಿಟಿಕಾಲೇಜಿನಕಂಪೌಂಡಿಗೆಅಂಟಿಸಲಾಗಿದ್ದ ಭಿತ್ತಿ ಪತ್ರಗಳನ್ನು ತೆಗೆದು ಶುಚಿಗೊಳಿಸಲಾಯಿತು. ವಿದ್ಯಾರ್ಥಿನಿಯರುಏರಪೆÇೀರ್ಟ್‍ರಸ್ತೆ ಹಾಗೂ ಪುಟ್‍ಪಾಥ್‍ಗಳನ್ನು ಗೂಡಿಸಿ ಸ್ವಚ್ಛಗೊಳಿಸಿದರು. ವಿಧಾನ್ ಪರಿಷತ್ ಸದಸ್ಯಕ್ಯಾಪ್ಟನ್‍ಗಣೇಶ್‍ಕಾರ್ಣಿಕ್‍ಕಾರ್ಯಕ್ರಮಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
245)ಕಾಟಿಪಳ್ಳ: ಜೆಸಿಆಯ್ ಗಣೇಶಪುರ ಸದಸ್ಯರು ಅಯೋಜಿಸಿದ್ದ ಸ್ವಚ್ಛತಾಅಭಿಯಾನ ಬೆಳಿಗ್ಗೆ 7:30ರಿಂದ10ಗಂಟೆಯವರೆಗೆಜರುಗಿತು. ಶ್ರೀ ಹರೀಶ್ ನಾಯ್ಕ ಹಾಗೂ ಶ್ರೀ ಶರತ್‍ಕುಮಾರ್‍ಅಭಿಯಾನಕ್ಕೆ ಚಾಲನೆ ನೀಡಿದರು. ಜೆಸಿಆಯ್ ಕೇಸರಿ ಫ್ರೇಂಡ್ಸ್ ಹಾಗೂ ನವೋದಯಯುವಕ ಮಂಡಳದ ಸದಸ್ಯರುಗಣೇಶಪುರರಂಗಮಂದಿರದ ಮುಂಭಾಗ ಹಾಗೂ ದೇವಸ್ಥಾನದ ಮುಂಭಾಗದ ರಸ್ತೆಗಳನ್ನು ಶುಚಿಗೊಳಿಸಿದರು. ಶ್ರೀ ಬ್ರಿಜೇಶ್, ಶ್ರೀ ಗೌತಮ್ ನಾಯಕ್, ಲಕ್ಷ್ಮೀಶ್‍ಅಂಚನ್‍ಸೇರಿದಂತೆ ಅನೇಕ ಸಂಘಸಂಸ್ಥೆಗಳ ಪದಾಧಿಕಾರಿಗಳು ಶ್ರಮದಾನದಲ್ಲಿ ಪಾಲ್ಗೊಂಡರು. ಡಾಸಂಪತ್‍ಕುಮಾರ್ ಹಾಗೂ ಶ್ರೀಶ ಕರ್ಮರನ್ ಸಂಯೋಜಿಸಿದರು.
246)ಬಿಜೈ:ಮಂಗಳೂರು ಹಿರಿಯರ ಅಸೋಸಿಯೆಶನ್ ಸದಸ್ಯರಿಂದ ಬಿಜೈ-ಕರಂಗಲಪಾಡಿರಸ್ತೆಯಲ್ಲಿ ಸ್ವಚ್ಛತಾಕಾರ್ಯಕ್ರಮಜರುಗಿತು. ಶ್ರೀ ರಮೇಶ್‍ರಾವ್ ಹಾಗೂ ಇನ್ನುಳಿದ ಹಿರಿಯರು ವಿವೇಕಾನಂದ ಪಾರ್ಕ್‍ನಿಂದ ಬಿಜೈಚರ್ಚ್ ವರೆಗಿನರಸ್ತೆ ಹಾಗೂ ತೋಡುಗಳನ್ನು ಶುಚಿಗೊಳಿಸಿದರು. ಪಾಲಿಕೆ ಸದಸ್ಯ ಶ್ರೀ ಪ್ರಕಾಶ್ ಸಾಲಿಯಾನ್ ಸಕ್ರಿಯವಾಗಿಅಭಿಯಾನದಲ್ಲಿ ಭಾಗವಹಿಸಿದರು. ಶ್ರೀಕೃಷ್ಣ ಶೆಟ್ಟಿ, ಲಾನ್ಸಿ ಪೀಟರ್ಸ್‍ಅಭಿಯಾನವನ್ನು ಆರಂಭಗೊಳಿಸಿದರು. ಶ್ರೀ ಸಿ ಡಿ ಕಾಮತ್, ಡಾಅನೂಸೂಯಾ ಮತ್ತಿತರರು ಸ್ವಚ್ಛತೆಯಲ್ಲಿ ಕೈಜೋಡಿಸಿದರು. ಶ್ರೀ ನಾಗೇಶ್ ಹಾಗೂ ಶ್ರೀ ರಾಮಕುಮಾರ್ ಬೇಕಲ್ ಸಂಯೋಜಿಸಿದರು
247)ಚಿಲಿಂಬಿ:ಅಲ್ಪಸಂಖ್ಯಾತ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿಒಯರಿಂದ ಸ್ವಚ್ಛ ಮಂಗಳೂರು ಅಭಿಯಾನಚಿಲಿಂಬಿ ಕೋಟೆಕಣಿಯಲ್ಲಿಜರುಗಿತು. ಶ್ರೀಮತಿ ಪೂರ್ಣಿಮಾ ಕುಲಾಲ ಹಾಗೂ ಶ್ರೀ ಸತೀಶ್‍ಕಾಮತ್‍ಜಂಟಿಯಾಗಿಅಭಿಯಾನಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿನಿಯರುಕೋಟೆಕಣಿ ಪರಿಸರದಲ್ಲಿ ಸುಮಾರುಎರಡು ಗಂಟೆಗಳ ಕಾಲ ಶ್ರಮದಾನಗೈದರು. ಶ್ರೀ ವಿಠಲದಾಸ ಪ್ರಭು ಹಾಗೂ ಶ್ರೀ ಸುಬ್ರಾಯ ನಾಯಕ ಮಾರ್ಗದರ್ಶಿಸಿದರು.
248) ವಲಚ್ಚಿಲ: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಲಚ್ಚಿಲ ಜಂಕ್ಷಣನಲ್ಲಿ ಸ್ವಚ್ಛತಾಅಭಿಯಾನವನ್ನು ಕೈಗೊಳ್ಳಲಾಯಿತು. ಮೇರ್ಲಪದವು ಹೋಗುವ ರಸ್ತೆಯ ತಿರುವುಗಳಲ್ಲಿ ಬಿದ್ದಿದ್ದ ಕಸ ತ್ಯಾಜ್ಯವನ್ನುತೆಹ್ಗೆದು ಶುಚಿಗೊಳಿಸಲಾಯಿತು. ಜೊತೆಗೆ ಬಸ್ ತಂಗುದಾಣಆಟೋನಿಲ್ದಾಣಗಳನ್ನು ಸ್ವಚ್ಛಗೊಳಿಸಲಾಯಿತು.
249) ಕೋಟೆಕಾರ:ಶ್ರೀ ಅಯ್ಯಪ್ಪ ಭಜನಾ ಮಂದಿರದ ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರ ಸಹಯೋಗದಲ್ಲಿಕೋಟೆಕಾರ ಪರಿಸರದಲ್ಲಿ ಸ್ವಚ್ಛತಾಕಾರ್ಯ ನಡೆಯಿತು. ಕೋಟೆಕಾರ್‍ಜಂಕ್ಷಣ್ ಬಸ್ ನಿಲ್ದಾಣ ಹಾಗೂ ಸೋಮೇಶ್ವರದತ್ತ ಸಾಗುವ ಮಾರ್ಗಗಳನ್ನು ಸ್ವಚ್ಛಗೊಳಿಸಲಾಯಿತು. ಶ್ರೀ ಜಿತೇಂದ್ರಕಾರ್ಯಕ್ರಮ ಸಂಯೋಜಿಸಿದರು. ಈ ಎಲ್ಲ ಕಾಯಕ್ರಮಗಳಿಗೆ ಎಂಆರ್‍ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿವೆ.


Spread the love
1 Comment
Inline Feedbacks
View all comments
Truth Seeker
7 years ago

Kudos to those girls from ‘Minority Hostel’ for stepping out and participating in this great event. I also thank Capt.Karnik for his regular participation and leadership. By the way, where are the MLAs and MLC who happen to be from minority communities? Never seen them showing any interest in this campaign. Same way, the organization and institutions run by minorities have shown zero interest. Talk about intolerance!! They were all falling over themselves when it came to 2000 koti rupaayees granted under ‘smart city’ scheme. My request to media is to be more assertive and call out these questionable individuals.… Read more »