ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ  27ನೇ ವಾರದಲ್ಲಿ ಜರುಗಿದ ಸ್ವಚ್ಛತಾ ಕಾರ್ಯಕ್ರಮ

Spread the love

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ ಪ್ರಯುಕ್ತ ದಿನಾಂಕ 9-04-2017 ರಂದು ಸತತ 27ನೇ ವಾರದಲ್ಲಿ ಜರುಗಿದ ಸ್ವಚ್ಛತಾ ಕಾರ್ಯಕ್ರಮ

322) ಪಾಂಡೇಶ್ವರ: ಫೋರಂ ಫಿಜಾ ಮಾಲ್ ಸಿಬ್ಬಂದಿಯ ಸಹಯೋಗದಲ್ಲಿ ಪಾಂಡೇಶ್ವರದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛ ಮಂಗಳೂರು ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಉಪಸ್ಥಿತಿಯಲ್ಲಿ ಬೆಳಿಗ್ಗೆ 7 ಗಂಟೆಗೆ ಶ್ರೀ ಮನೋಜ್ ಸಿಂಗ್ ಹಾಗೂ ಶ್ರೀ ಸುನೀಲ್ ಕೆ ಎಸ್ ಜಂಟಿಯಾಗಿ ಹಸಿರು ನಿಶಾನೆ ತೋರಿ ಅಭಿಯಾನಕ್ಕೆ ಫೆÇೀರ್‍ಂ ಮಾಲ್ ಎದುರುಗಡೆ ಚಾಲನೆ ನೀಡಿದರು.  ಸುಮಾರು 100 ಜನರ ಕಾರ್ಯಕರ್ತರನ್ನು ನಾಲ್ಕು ತಂಡಗಳಂತೆ ವಿಂಗಡಿಸಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ಕಾರ್ಪೋರೇಷನ್ ಬ್ಯಾಂಕ್ ಎದುರಿಗಿನ ವೃತ್ತ ಹಾಗೂ ರಸ್ತೆ, ನೆಹರು ವೃತ್ತದಿಂದ ಎ ಬಿ ಶೆಟ್ಟಿ ವೃತ್ತದೆಡೆಗೆ ಸಾಗುವ ಮಾರ್ಗ ಹಿಡಿದು ಕ್ಲಾಕ್ ಟವರ್ ನವರೆಗಿನ ರಸ್ತೆಯ ಇಕ್ಕೆಲಗಳನ್ನು ಶುಚಿಗೊಳಿಸಲಾಯಿತು. ಶ್ರೀ ಸುರೇಶ್ ಶೆಟ್ಟಿ ಮಾರ್ಗದರ್ಶನದಲ್ಲಿ ಒಂದು ತಂಡ ರಸ್ತೆಯ ಬದಿ ಬಿದ್ದಿದ್ದ ಪ್ಲಾಸ್ಟಿಕ್ ತೊಟ್ಟೆಗಳನ್ನು ಹೆಕ್ಕಿದರು. ಮತ್ತೊಂದು ತಂಡ ಶ್ರೀ ಉಮಾನಾಥ್ ಕೋಟೆಕಾರ್ ನೇತೃತ್ವದಲ್ಲಿ ಮಾರ್ಗವಿಭಾಜಕದಲ್ಲಿದ್ದ ಹುಲ್ಲುತ್ಯಾಜ್ಯ ತೆಗೆದು ಹಸನುಗೊಳಿಸಿದರು. ಉಪನ್ಯಾಸಕ ಶ್ರೀ ಮೆಹಬೂಬ್ ಸಾಬ್ ನೇತೃತ್ವದಲ್ಲಿ ಅಲ್ಲಲ್ಲಿ ಹಾಕಲಾಗಿದ್ದ ಅನಧಿಕೃತ ಬ್ಯಾನರ್ ಗಳನ್ನು ತೆಗೆಯಲಾಯಿತು. ಸುಮಾರು 9:30 ರ ವರೆಗೆ ಸ್ವಚ್ಛತಾ ಶ್ರಮದಾನ ನಡೆಯಿತು. ಶ್ರೀ ದಿಲ್‍ರಾಜ್ ಆಳ್ವ ಹಾಗೂ ಅಶ್ವಿತ ಕುಮಾರ ಶೆಟ್ಟಿ ಅಭಿಯಾನವನ್ನು ಸಂಯೋಜಿಸಿದರು.

323) ಕರ್ನಾಟಕ ಪಾಲಿಟೆಕ್ನಿಕ್ : ಕೆಪಿಟಿ ಎನ್ನೆಸ್ಸೆಸ್ ವಿದ್ಯಾರ್ಥಿಗಳ ವಿಶೇಷ ಆಸಕ್ತಿಯಿಂದ ಕಳೆದ 10 ವಾರಗಳಿಂದ ನಿರಂತರವಾಗಿ ಸಾಗಿ ಬಂದ ಅಭಿಯಾನದ ಕೊನೆಯ ಕಾರ್ಯಕ್ರಮ ಇಂದು ನಡೆಯಿತು. ಕೆಪಿಟಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಪ್ರಮುಖರಾದ ಕು. ಪ್ರತೀಕ್ಷಾ ಹಾಗೂ ಕು. ಜಿತೇಶ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಮೊದಲಿಗೆ ಕೆಪಿಟಿ ಮುಂಭಾಗದ ರಸ್ತೆ ಹಾಗೂ ಕಾಲುದಾರಿ ಗುಡಿಸಿ ಶುಚಿಗೊಳಿಸಲಾಯಿತು. ನಂತರ ಮಳೆ ನೀರು ಹೋಗುವ ತೋಡಿನಲ್ಲಿ ತುಂಬಿಕೊಂಡಿದ್ದ ತ್ಯಾಜ್ಯ ತೆಗೆಯಲಾಯಿತು. ಅಲ್ಲದೇ ಕಾಲೇಜಿನ ಆವರಣದಲ್ಲಿದ್ದ ಕಸದ ರಾಶಿಗಳನ್ನು ತೆಗೆದು ಟಿಪ್ಪರ ಹಾಕಿ ವಿಲೇವಾರಿ ಮಾಡಲಾಯಿತು. ವಿಶೇಷ ಕಾರ್ಯ: ಕಳೆದೆರಡು ವಾರಗಳಿಂದ ಸ್ವಚ್ಛಗೊಳಿಸಲಾಗಿದ್ದ ಕರ್ನಾಟಕ ಪಾಲಿಟೆಕ್ನಿಕ್ ಎಂಬ ಬೃಹತ್ ನಾಮಫಲಕದ ಕಿತ್ತುಹೊಗಿದ್ದ ಅಕ್ಷರಗಳನ್ನು ಇಂದು ಹೊಸದಾಗಿ ಹಾಕಿಸಿ, ಬಣ್ಣ ಬಳಿದು ನವೀಕರಿಸಲಾಯಿತು.

ಸಮಾರೋಪ: 10 ಅಭಿಯಾನಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ರಾಮಕೃಷ್ಣ ಮಿಷನ್ ನಲ್ಲಿ ಕೆಪಿಟಿ ವಿದ್ಯಾರ್ಥಿಗಳಿಗಾಗಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ವಾಮಿ ಧರ್ಮವ್ರತಾನಂದಜಿ ಸರ್ಟಿಫಿಕೆಟ್ ವಿತರಿಸಿ ಮಾತನಾಡಿದರು. ಸಂಯೋಜಕರಾದ ರಾಜೇಂದ್ರ ಹಾಗೂ ಅಂಕುಶ್ ಕುಮಾರ್ ಅನುಭವಗಳನ್ನು ಹಂಚಿಕೊಂಡರು. ಸ್ವಾಮಿ ಏಕಗಮ್ಯಾನಂದಜಿ ಧನ್ಯವಾದ ಸಮರ್ಪಿಸಿದರು.

324) ಪಡೀಲ್ : ಸ್ವಚ್ಛ ಪಡೀಲ್ ಕಾರ್ಯಕರ್ತರು ರೈಲ್ವೆ ಅಂಡರ್ ಪಾಸ್ ಬ್ರಿಡ್ಜ್ ಹಾಗೂ ಬಸ್ ತಂಗುದಾಣದ ಸುತ್ತಮುತ್ತ ಸ್ವಚ್ಛತೆಯನ್ನು ಕೈಗೊಂಡರು. ಶ್ರೀ ಭರತಕುಮಾರ ಜಲ್ಲಿಗುಡ್ದ ಹಾಗೂ ಶ್ರೀ ವಾಮನ ಕೊಟ್ಟಾರಿ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಪಡೀಲ್ ಬಜಾಲ್ ಕ್ರಾಸ್ ದಿಂದ ಪ್ರಾರಂಭಿಸಿ ಕಂಕನಾಡಿ ರೈಲ್ವೇ ಸ್ಟೇಶನ್ ರಸ್ತೆಯವರೆಗಿನ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಅಲ್ಲದೇ ಜನರು ನಿಲ್ಲುತ್ತಿದ್ದ ಬಸ್ ನಿಲ್ದಾಣದ ಮುಂಭಾಗದ ಹೊಂಡ ಮುಚ್ಚಲಾಗಿದೆ.

325) ವೈದ್ಯನಾಥ ನಗರ – ರೋಟರಿ ಕ್ಲಬ್ ದೇರಳಕಟ್ಟೆ ಸಹಯೋಗದಲ್ಲಿ ವೈದ್ಯನಾಥ ನಗರದಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಶ್ರೀ ಎನ್ ಟಿ ರಾಮಚಂದ್ರ ನಾಯಕ್ ಹಾಗೂ ಶ್ರೀ ಪುರುಷೋತ್ತಮ್ ಅಂಚನ್ ಅಭಿಯಾನವನ್ನು ಆರಂಭಗೊಳಿಸಿದರು. ವೈದ್ಯನಾಥ್ ನಗರದ ಮುಖ್ಯರಸ್ತೆ ಸ್ವಚ್ಛಗೊಸಲಾಯಿತು. ಅಲ್ಲದೇ ಬದಿಯಲ್ಲಿದ್ದ ಹುಲ್ಲನ್ನು ತೆಗೆದು ಶುಚಿಗೊಳಿಸಲಾಯಿತು. ಪಂಚಾಯತ್ ಸದಸ್ಯ ಶ್ರೀ ಸುರೇಶ್ ಶೆಟ್ಟಿ, ಶ್ರೀಮತಿ ವಿದ್ಯಾ ಮನಿಯಾನಿ, ಶ್ರೀ ಭಾಸ್ಕರ್ ಮನಿಯಾನಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರೀ ವಿಕ್ರಮ ದತ್ತ ಅಭಿಯಾನವನ್ನು ಸಂಯೋಜಿಸಿದರು.

326) ಗಣೇಶಪುರ: ಜೆಸಿಆಯ್ ಬಳಗದವರಿಂದ ಗಣೇಶಪುರ ವೃತ್ತ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಶ್ರೀಸುಬ್ರಮಣ್ಯ ರಾವ್ ಹಾಗೂ ಶ್ರೀ ಹರ್ಷೇಂದ್ರ ಪಾಲನ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಸ್ವಚ್ಛತೆಯ ಜೊತೆ ಜೊತೆಗೆ ಬಸ್ ನಿಲ್ದಾಣವನ್ನು ಬಣ್ಣ ಹಚ್ಚಿ ಸುಂದರಗೊಳಿಸಲಾಯಿತು. ಶ್ರೀರವಿಕಾಂತ, ಪ್ರಶಾಂತ ನಾಯಕ, ಶ್ರೀಮತಿ ಸುಮಿತ್ರಾ ಗೌತಮ ಹಾಗೂ ಶ್ರೀ ಸಂದೇಶ್ ಸೇರಿದಂತೆ ಅನೇಕರು ಅಭಿಯಾನಕ್ಕೆ ಕೈಜೋಡಿಸಿದರು.

ಸ್ವಚ್ಛ ಮನಸ್ಸು: ಜಾಗೃತಿ ಕಾರ್ಯಕ್ರಮಗಳು:

ಕಾರ್ಪೋರೇಟ್ ಟ್ರೈನರ್  ಡಾ. ವಿವೇಕ ಮೋದಿಯವರಿಂದ  ಸ್ವಚ್ಛ ಮನಸ್ಸು ಪರಿಕಲ್ಪನೆಯಲ್ಲಿ ಜಿಲ್ಲೆಯ ಹಲವೆಡೆ ಸಂವಾದ ಗೋಷ್ಟಿಗಳನ್ನು ಆಯೋಜಿಸಲಾಗಿತ್ತು.

3-4-2017 ರಂದು ಎಸ್‍ಡಿಎಂ ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ “ಟ್ಯಾಕ್ಲಿಂಗ್ ಮಂಕಿ ಮೈಂಡ್” ಎನ್ನುವ ವಿಷಯದ ಕುರಿತು ಸಂವಾದ ನಡೆಯಿತು. ಡಾ. ದೇವರಾಜ್, ಶ್ರಿಮತಿ ದೀಪಾ ನಾಯಕ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

4-4-2017 ರಂದು ಬೆಳಿಗ್ಗೆ 9 ಗಂಟೆಗೆ ಜಸ್ಟಿಸ್ ಕೆ ಎಸ್ ಹೆಗ್ಡೆ ಮ್ಯಾನೆಜ್ ಮೆಂಟ್ ಇನ್ಸಟ್ಯೂಟ್, ನಿಟ್ಟೆಯಲ್ಲಿ “ಟ್ರೂ ಸಕ್ಸಸ್”ಎಂಬ ವಿಷಯದ ಕುರಿತು ಸಂವಾದ ಜರುಗಿತು. ಕಾಲೇಜಿನ ನಿರ್ದೇಶಕ ಡಾ. ಸುಧೀರ್ ರಾಜ್ ಕೆ ಮುಖ್ಯ ಅತಿಥಿಗಳಾಗಿದ್ದರು.

4-4-2017 ಸಾಯಂ 4 ಗಂಟೆಗೆ ಆಳ್ವಾಸ್ ಇಂಜನಿಯರಿಂಗ್ ಕಾಲೇಜಿನಲ್ಲಿ “ಗ್ರೋಯಿಂಗ್ ರೈಟ್ ವೇ” ಎನ್ನುವ ವಿಷಯದ ಕುರಿತು ಸಂವಾದವೇರ್ಪಟ್ಟಿತು. ಡಾ. ಪೀಟರ್ ಫರ್ನಾಂಡಿಸ್, ಡಾ ವಿನಿತಾ ಶೆಟ್ಟಿ ಸೇರಿದಂತೆ ಸುಮಾರು 500 ವಿದ್ಯಾರ್ಥಿಗಳು ಪಾಲ್ಗೊಂಡರು.

5-4-2017 ಬೆಳಿಗ್ಗೆ 10 ಗಂಟೆಗೆ ಸಹ್ಯಾದ್ರಿ ಮ್ಯಾನೆಜ್ ಮೆಂಟ್ ಕಾಲೇಜು ಅಡ್ಯಾರಿನಲ್ಲಿ “ಕ್ಯಾರೆಕ್ಟರ್ ಅಂಡ್ ಕರಿಯರ್” ಎಂಬ ವಿಷಯದ ಮೇಲೆ ಸಂವಾದ ನಡೆಯಿತು. ಶ್ರೀ ಮಂಜುನಾಥ್ ಭಂಡಾರಿ, ಡಾ. ಉಮೇಶ್ ಭೂಶಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮಗಳಿಗೆ  ಎಂಆರ್‍ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

ಸಂಪರ್ಕ – 9448353162 (ಸ್ವಾಮಿ ಏಕಗಮ್ಯಾನಂದ, ಸಂಚಾಲಕ, ಸ್ವಚ್ಛ ಮಂಗಳೂರು)


Spread the love