ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 38 ನೇ ಶ್ರಮದಾನದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 38 ನೇ ಶ್ರಮದಾನದ ವರದಿ

ಮಂಗಳೂರು: 38ನೇ ಶ್ರಮದಾನ: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 38ನೇ ಸ್ವಚ್ಛತಾ ಶ್ರಮದಾನವನ್ನು ಕುಂಟಿಕಾನದ ಮೇಲ್ಸೇತುವೆಯ ಕೆಳಭಾಗ ಹಾಗೂ ಸುತ್ತಮುತ್ತ್ತಲಿನ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಯಿತು.

ರವಿವಾರದಂದು ಮುಂಜಾನೆ 7:30 ಕ್ಕೆ ಪೂಜ್ಯ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತಿಯಲ್ಲಿ ಡಾ ಮಂಜುನಾಥ ರೇವಣ್ಕರ್ ಅಧ್ಯಕ್ಷರು ಕೆನರಾ ಬಿಲ್ಡರ್ಸ್ ಅಸೋಸಿಯೇಶನ್ ಹಾಗೂ ಶ್ರೀ ಸಂತೋಷ ಶೇಟ್ ಅಧ್ಯಕ್ಷರು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇವರುಗಳು ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಈ ಸಮಯದಲ್ಲ್ಲಿ ರೊಟೇರಿಯನ್ ಇಲಿಯಾಸ್ ಸಾಂತೋಸ್, ಉಮಾಕಾಂತ ಸುವರ್ಣ, ಮೋಹನ್ ಕೊಟ್ಟಾರಿ, ಪ್ರವೀಣ ರವೀಂದ್ರನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ ಮಂಜುನಾಥ ರೇವಣ್ಕರ್ “ಸ್ವಚ್ಛತೆಯ ಕುರಿತು ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಜಾಗೃತಿ ಉಂಟಾಗಿದ್ದರೂ ಇನ್ನೂ ಕೆಲವರು ಅಲ್ಲಲ್ಲಿ ತ್ಯಾಜ್ಯ ಬಿಸಾಡುತ್ತಿರುವುದು ದುರದುಷ್ಟಕರ. ಸ್ಥಳಿಯ ಆಡÀಳಿತಗಳು ಇಂತವರನ್ನು ಕಂಡುಹಿಡಿದು ದಂಡ ವಿಧಿಸುವಂತಾದಾಗ ಮಾತ್ರ ಈ ಅಭಿಯಾನಗಳು ಸಂಪೂರ್ಣವಾಗಿ ಯಶಸ್ವಿಯಾಗಲು ಸಾಧ್ಯ. ಮುಂಬರುವ ದಿನಗಳಲ್ಲಿ ಪಾಲಿಕೆಯು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ ಕಾರ್ಯಾಚರಣೆ ಮಾಡುವಂತಾಗಬೇಕು” ಎಂದು ತಿಳಿಸಿದರು. ಸಂತೋಷ್ ಶೇಟ್ ಹಾಗೂ ಇಲಿಯಾಸ್ ಸಾಂತೋಸ್ ಮಾತನಾಡಿ ಸ್ವಯಂ ಸೇವಕರನ್ನು ಅಭಿನಂದಿಸಿ, ಶುಭಹಾರೈಸಿದರು.

ಸ್ವಚ್ಛತೆ: ಕುಂಟಿಕಾನ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೆತುವೆಯ ತಳÀಭಾಗದಲ್ಲಿ ಶ್ರಮದಾನವನ್ನು ಕೈಗೊಳ್ಳಲಾಯಿತು. ಮೊದಲಿಗೆ ಸ್ವಾಮಿಜಿಗಳು ಹಾಗೂ ಗಣ್ಯರು ಒಂದಿಷ್ಟು ಹೊತ್ತು ಶ್ರಮದಾನದಲ್ಲಿ ಪಾಲ್ಗೊಂಡು ಪೆÇರಕೆ ಹಿಡಿದು ಪ್ಲೈಒವರ್ ಕೆಳಭಾಗದಲ್ಲಿ ಸ್ವಚ್ಚತೆ ನಡೆಸಿದರು. ಜೊತೆಜೊತೆಗೆ ಕಾರ್ಯಕರ್ತರು ಮೂರು ಗುಂಪುಗಳಾಗಿ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಒಂದು ಗುಂಪು ರಸ್ತೆಯ ಪಕ್ಕದಲ್ಲಿ ಹಾಗೂ ಪಾರ್ಕಿಂಗ್ ಜಾಗೆಗಳನ್ನು ಕಸಗುಡಿಸಿ ಸ್ವಚ್ಛಗೊಳಿಸಿತು. ಮತ್ತೊಂದು ಗುಂಪು ಪ್ಲೈಒವರ್ ಕಂಬಗಳಿಗೆ ಅಂಟಿಸಿದ್ದ ಪೆÇೀಸ್ಟರ್‍ಗಳನ್ನು ಕಿತ್ತು ನೀರು ಹಾಕಿ ಶುಚಿಗೊಳಿಸಿದರು. ಬಸ್ ತಂಗುದಾಣದ ಬಳಿ ಸುರಿದಿದ್ದ ತ್ಯಾಜ್ಯ ರಾಶಿ ದುರ್ವಾಸನೆ ಬೀರುತ್ತಿತ್ತು. ಇದನ್ನು ಸುಧೀರ್ ವಾಮಂಜೂರು, ಚೇತನಾ ನೇತೃತ್ವದಲ್ಲಿ ಇನ್ನೊಂದು ಗುಂಪು ಮಳೆಯನ್ನೂ ಲೆಕ್ಕಿಸದೇ ತೆಗೆದು ಹಸನುಗೊಳಿಸಿದರು. ಸೌರಜ್ ಮಂಗಳೂರು ಹಾಗೂ ಉದಯ ಕೆ ಪಿ ಜೊತೆಗೂಡಿದ ಪ್ರಮುಖ ಕಾರ್ಯಕರ್ತರು ಅಲ್ಲಲ್ಲಿ ಬಿದ್ದಿದ್ದ ಅಪಾಯಕಾರಿ ತ್ಯಾಜ್ಯವನ್ನು ಶ್ರಮವಹಿಸಿ ತೆಗೆದು ಹಾಕಿದರು. ಕುಂಟಿಕಾನ ಆಟೋ ನಿಲ್ದಾಣದ ಹತ್ತಿರ, ಲೋಹಿತ ನಗರಕ್ಕೆ ಸಾಗುವ ದಾರಿ ಹಾಗೂ ದೇರೆಬೈಲ್ ಹೋಗುವ ಮಾರ್ಗಗಳನ್ನು ಕಾರ್ಯಕರ್ತರು ಪೆÇ್ರ. ಶೇಷಪ್ಪ ಅಮೀನ ಜೊತೆಗೂಡಿ ಸ್ವಚ್ಛಗೊಳಿಸಿದರು. ಕಮಲಾಕ್ಷ ಪೈ, ಅನಿರುದ್ಧ ನಾಯಕ್ ಮತ್ತಿತರರು ಸೇರಿ ತೋಡುಗಳಲ್ಲಿ ಸ್ವಚ್ಛ ಮಾಡಲು ಪ್ರಯತ್ನಿಸಿದರು. ಅದರಲ್ಲಿದ್ದ ತ್ಯಾಜ್ಯ ಕಸವನ್ನು ಸಾಧ್ಯವಾದಷ್ಟು ತೆಗೆದು ಹಾಕಿದರು. ಪ್ಲೈಒವರ್ ಹಾಗೂ ಸುತ್ತಮುತ್ತಲಿನ ಪ್ರದೇಶÀಗಳಲ್ಲಿ ಬೆಳೆದಿದ್ದ ಹುಲ್ಲನ್ನು ಕಳೆಕೊಚ್ಚುವ ಯಂತ್ರದ ಸಹಾಯದಿಂದ ಕತ್ತರಿಸಿ ತೆಗೆದು ಜಾಗವನ್ನು ಸ್ವಚ್ಛವಾಗಿ ಕಾಣುವಂತೆ ಮಾಡಲಾಯಿತು. ಅನಧಿಕೃತವಾಗಿ ಅಳವಡಿಸುತ್ತಿರುವ ಪ್ಲೆಕ್ಸ್ ಬ್ಯಾನರ್ ಹಾವಳಿವನ್ನು ತಡೆಯುವ ಸಲುವಾಗಿ ಬ್ಯಾನರ್ ಹಾಕಿದವರನ್ನು ಮತ್ತು ಹಾಕಿಸಿದವರನ್ನು ಸಂಪರ್ಕಿಸಿ ಅಳವಡಿಸದಂತೆ ವಿನಂತಿಸಲಾಯಿತು. ಜೊತೆಗೆ ಸುಮಾರು ಐನೂರಕ್ಕೂ ಅಧಿಕ ಬ್ಯಾನರ್‍ಗಳನ್ನು ತೆಗೆಯಲಾಯಿತು. ಪಿ ಎನ್ ಭಟ್, ರಘುನಾಥ್ ಆಚಾರ್ಯ, ಸ್ಮಿತಾ ಶೆಣೈ, ಶೃತಿ ತುಂಬ್ರಿ, ಚಿಂತನ್ ಡಿ ವಿ, ವಿಧಾತ್ರಿ ಕೆ, ನಿಶಾ ನಾಯಕ್ ಸೇರಿದಂತೆ ಅನೇಕರು ಶ್ರಮದಾನಗೈದರು.

ಸ್ವಚ್ಛ ಗ್ರಾಮ ಅಭಿಯಾನ –ವಿಶೇಷ ಸಭೆ : ರಾಮಕೃಷ್ಣ ಮಿಷನ್ ಹಾಗೂ ದಕ್ಷಿಣ ಕನ್ನಡ ಜಿಲಾ ಪಂಚಾಂiÀiತ್ ಸಹಯೋಗದಲ್ಲಿ ಸ್ವಚ್ಛ ಗ್ರಾಮದ ಕುರಿತು ವಿಶೇಷ ಸಭೆಯನ್ನುರಾಮಕೃಷ್ಣ ಮಠದಲ್ಲಿ ಆಯೋಜನೆ ಮಾಡಲಾಗಿತ್ತು. ಮಂಗಳೂರು ತಾಲೂಕು ಹಾಗೂ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ ಆರ್ ರವಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ವಚ್ಛ ಗ್ರಾಮ ಅಭಿಯಾನದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.

“ಕಳೆದ ವರ್ಷದಿಂದ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ನಡೆಸುತ್ತಿರುವ ಸ್ವಚ್ಛ ಗ್ರಾಮ ಅಭಿಯಾನವು ಒಂದು ಮಾದರಿ ಯೋಜನೆಯಾಗಿದೆ. ಸಂಘಸಂಸ್ಥೆಗಳ ಹಾಗೂ ಜನರ ಸಹಭಾಗಿತ್ವವನ್ನು ಬಳಸಿಕೊಂಡು ಒಂದು ಸರಕಾರ ಹೇಗೆ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಬಹುದು ಎನ್ನುವುದಕ್ಕೆ ನಿದರ್ಶನವಾಗಿದೆ. ನಾವು ಬದುಕಲಿಕ್ಕೆ ಯೋಗ್ಯವಾದ ವಾತವರಣನ್ನು ನಿರ್ಮಾಣ ಮಾಡಿಕೊಳ್ಳುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದೆ ಈ ಮೂಲಕ ಮುಂದಿನ ಜನಾಂಗಕ್ಕೂ ಒಂದು ಸೂಕ್ತವಾದ ಪರಿಸರವನ್ನು ಬಿಟ್ಟು ಹೋಗಬೇಕಾಗಿದೆ. ಇದು ಪ್ರತಿಯೊಬ್ಬರು ಮಾಡಲೇಬೇಕಾದ ಸಾಮಾಜಿಕ ಹೊಣೆಗಾರಿಕೆ. ಇದರ ಅರಿವು ನಮಗೆ ಉಂಟಾದಾಗ ಸಮುದಾಯದ ಸಬಲೀಕರಣವಾಗಬಲ್ಲದು. ಈ ಹಿನ್ನಲೆಯಲ್ಲಿ ಈ ಅಭಿಯಾನ ಪ್ರತಿ ಗ್ರಾಮದಲ್ಲೂ ಅತ್ಯಂತ ಅವಶ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕು ಹಾಗೂ ಎಲ್ಲ ಗ್ರಾಮಗಳಲ್ಲಿಯೂ ಸ್ವಚ್ಛತಾ ಅಭಿಯಾನ ನಡೆಯುವಂತಾಗಬೇಕು“ ಎಂದು ತಿಳಿಸಿದರು.

ಸ್ವಾಮಿ ಜಿತಕಾಮಾನಂದಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕಿ ಶ್ರೀಮತಿ ಮಂಜುಳಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾನಾಥ್ ಕೋಟೆಕಾರ್ ಸ್ವಾಗತಿಸಿದರು. ಸ್ವಾಮಿ ಏಕಗಮ್ಯಾನಂದಜಿ ವಂದಿಸಿದರು. ನವೀನ್ ಕೊಣಾಜೆ ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು ನೂರೈವತ್ತಕೂ ಅಧಿಕ ಜನ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಸಂವಾದ ಗೋಷ್ಟಿ ಹಾಗೂ ಮಡಕೆ ಗೊಬ್ಬರ ಪ್ರಾತ್ಯಕ್ಷಿಕೆÉಗಳು ನಡೆದವು. ಈ ಎಲ್ಲ ಕಾರ್ಯಕ್ರಮಗಳಿಗೆ ಎಂ ಆರ್‍ಪಿಎಲ್ ಸಂಸ್ಥೆ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.


Spread the love