ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 31 ನೇ ವಾರದಲ್ಲಿ (7-5-17 ರಂದು) ಜರುಗಿದ 10 ಸ್ವಚ್ಛತಾ ಕಾರ್ಯಕ್ರಮಗಳ ವರದಿ
362) ಹಂಪಣಕಟ್ಟೆ: ಸಹ್ಯಾದ್ರಿ ಇಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಮಿಲಾಗ್ರಿಸ್ ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ತಿರುಪತಿ ರಾಮಕೃಷ್ಣ ಮಿಷನ್ನಿನ ಸ್ವಾಮಿ ಪ್ರಜ್ಞಾನಾಥಾನಂದಜಿ ಹಾಗೂ ಶ್ರೀಮತಿ ಸುನೀತಾ ಪ್ರಿಯಾ ಡಿಸಿಲ್ವಾ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹ್ಯಾದ್ರಿ ಕಾಲೇಜಿನ ಉಪಪ್ರಾಂಶುಪಾಲ ಶ್ರೀ ಎಸ್ ಎಸ್ ಬಾಲಕೃಷ್ಣ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮೂರು ರಸ್ತೆಗಳಲ್ಲಿ ಸ್ವಚ್ಛತೆಯನ್ನು ನಡೆಸಿದರು. ಫಳ್ನಿರ್ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ ಹಾಗೂ ಹಂಪಣಕಟ್ಟೆ ಮುಖ್ಯರಸ್ತೆಗಳ ಬದಿಗಳನ್ನು ಶುಚಿಗೊಳಿಸಿದರು. ಅಲ್ಲದೇ ಶ್ರೀ ದಿಲ್ರಾಜ್ ಆಳ್ವ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅನಧಿಕೃತ ಪೆÇೀಸ್ಟರ್, ಬ್ಯಾನರ್ ತೆಗೆದುಹಾಕಿದರು. ಶ್ರೀಮತಿ ರಶ್ಮಿತಾ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿದ್ದರು.
363) ಪದವಿನಂಗಡಿ: ಫ್ರೆಂಡ್ಸ್ ಫಾರ್ ಎವರ್ ಸದಸ್ಯರು ಹಾಗೂ ಶ್ರೀನಿಧಿ ಎಂಟರ್ ಪ್ರೈಸಸ್ ಜಂಟಿ ಸಹಯೋಗದಲ್ಲಿ ಪದವಿನಂಗಡಿ ಜಂಕ್ಷನ್ ನಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಸ್ವಾಮಿ ಏಕಗಮ್ಯಾನಂದಜಿ ಹಾಗೂ ಶ್ರೀನಿಧಿ ಎಂಟರ್ ಪ್ರೈಸಸ್ ಮಾಲೀಕರಾದ ಶ್ರೀಸುರೇಶ್ ಕುಮಾರ್ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಶ್ರೀ ಶುಭೋದಯ ಆಳ್ವ ನೇತೃತ್ವದಲ್ಲಿ ಏರಪೆÇೀರ್ಟ್ ರಸ್ತೆ ಹಾಗೂ ಜಂಕ್ಷನ್ ಸುತ್ತಮುತ್ತಲಿನ ಪರಿಸರವನ್ನು ಗುಡಿಸಿ ಸ್ವಚ್ಛಗೊಳಿಸಲಾಯಿತು. ಅಲ್ಲದೇ ಕಾಂಕ್ರಿಟ್ ರಸ್ತೆಯಲ್ಲಿ ಸಂಗ್ರಹವಾಗಿದ್ದ ರಾಶಿ ಮಣ್ಣು ಸಂಚಾರಕ್ಕೆ ಅಡೆತಡೆಯಾಗುತ್ತಿತ್ತು. ಅದನ್ನಿಂದು ಸಂಪೂರ್ಣವಾಗಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಶ್ರೀ ಪ್ರಭಾಕರ ಪದವಿನಂಗಡಿ, ಶ್ರೀಮತಿ ಅನಿತಾ ಕಾಂಚನ್ ಹಾಗೂ ಶ್ರೀ ಸಂದೀಪ ಸಾವಂತ್ ಸೇರಿದಂತೆ ಅನೇಕರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.
364) ಲೇಡಿಹಿಲ್ ವೃತ್ತ: ಆರ್ಟ್ ಆಫ್ ಲಿವಿಂಗ್ ಬಳಗದವರಿಂದ ಲೇಡಿಹಿಲ್ ವೃತ್ತದ ಸುತ್ತಮುತ್ತ ಹಾಗೂ ಚಿಲಿಂಬಿಯಲ್ಲಿ ಸ್ವಚ್ಛತಾ ಕಾರ್ಯ ಜರುಗಿತು. ಪ್ರಖ್ಯಾತ ಜಾದೂಗಾರ ಶ್ರೀ ಕುದ್ರೋಳಿ ಗಣೇಶ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಒಂದು ಗುಂಪು ಲೇಡಿಹಿಲ್ ವೃತ್ತ ಹಾಗೂ ಉಡುಪಿಯತ್ತ ಸಾಗುವ ಮಾರ್ಗವನ್ನು ಶುಚಿಗೊಳಿಸಿದರೆ, ಮತ್ತೊಂದು ಗುಂಪು ಅಲ್ಲಿರುವ ಮೂರು ಬಸ್ ತಂಗುದಾಣಗಳನ್ನು ಸ್ವಚ್ಛಗೊಳಿಸಿದರು. ಅಲ್ಲದೇ ತಂಗುದಾಣಕ್ಕೆ ಬಣ್ಣ ಹಚ್ಚಿ ಸುಂದರಗೊಳಿಸಲಾಯಿತು. ಜೊತೆಗೆ ಅಲ್ಲಲ್ಲಿ ನೇತಾಡುತ್ತಿದ್ದ ಫ್ಲೆಕ್ಸ್, ಪೆÇೀಸ್ಟರ್ಗಳನ್ನೂ ತೆಗೆಯಲಾಯಿತು. ಡಾ. ಶಿವರಾಂ ರಾವ್, ಶ್ರೀಮತಿ ತನುಜಾ ಮತ್ತಿತರರು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಶ್ರೀ ಸದಾಶಿವ ಕಾಮತ್ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು.
365) ಪಾಂಡೇಶ್ವರ: ಭಗಿನಿ ಸಮಾಜ ಹಾಗೂ ನಿವೇದಿತಾ ಬಳಗದ ವಿದ್ಯಾರ್ಥಿಗಳು ಪಾಂಡೇಶ್ವರ ರೈಲ್ವೆ ಕ್ರಾಸಿಂಗ್ ಬಳಿ ಶ್ರೀಮತಿ ರತ್ನಾ ಆಳ್ವ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶ್ರೀಮತಿ ವಿಜಯಲಕ್ಷ್ಮೀ ರಾವ್ ಸ್ವಚ್ಛತಾ ಕಾರ್ಯಕ್ಕೆ ಹಸಿರು ನಿಶಾನೆ ತೋರಿ ಚಾಲನೆಗೊಳಿಸಿದರು. ರೈಲ್ವೆ ಗೇಟ್ ಹಾಗೂ ಟ್ರಾಕ್ ಬಳಿಯ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸಲಾಯಿತು. ತದನಂತರ ಮುಖ್ಯರಸ್ತೆಯ ಎರಡೂ ಪಾರ್ಶ್ವಗಳನ್ನು ಗುಡಿಸಿ ಸ್ವಚ್ಛ ಮಾಡಲಾಯಿತು. ಶ್ರೀಮತಿ ವಿಜಯಲಕ್ಷ್ಮೀ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
366) ಬಿಜೈ: ಮಂಗಳೂರಿನ ಹಿರಿಯ ನಾಗರಿಕರು ಬಿಜೈ ನ್ಯೂ ರಸ್ತೆಯಲ್ಲಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಹಮ್ಮಿಕೊಂಡಿದ್ದರು. ಡಾ. ಅನೂಸೂಯಾ ಹಾಗೂ ಶ್ರೀ ಕೃಷ್ಣಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ರಮೇಶ್ ರಾವ್ ನೇತೃತ್ವದಲ್ಲಿ ಹಿರಿಯರು ರಸ್ತೆಯನ್ನು ಶುಚಿಗೊಳಿಸಿ ತೋಡುಗಳಲ್ಲಿದ್ದ ತ್ಯಾಜ್ಯವನ್ನು ಹೊರತೆಗೆದು ಸ್ವಚ್ಛಗೊಳಿಸಿದರು. ಶ್ರೀ ಸಿ ಡಿ ಕಾಮತ್, ಶ್ರೀ ನಾಗೇಶ್ ಕೆ. ಮತ್ತಿತರರು ಪಾಲ್ಗೊಂಡಿದ್ದರು. ಶ್ರೀ ರಾಮಕುಮಾರ್ ಬೇಕಲ್ ಅಭಿಯಾನವನ್ನು ಸಂಯೋಜನೆ ಮಾಡಿದರು.
367) ಗಣೇಶಪುರ: ಜೆಸಿಆಯ್ ಸದಸ್ಯರಿಂದ ಗಣೇಶಪುರ ದೇವಸ್ಥಾನದ ಬಳಿ ಸ್ವಚ್ಚತಾ ಕಾರ್ಯ ನಡೆಯಿತು. ಶ್ರೀ ಗೌತಮ್ ನಾಯಕ್ ಹಾಗೂ ಶ್ರೀ ಪ್ರಶಾಂತ ನಾಯಕ್ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕರ್ತರು ಡಾ. ಸಂಪತಕುಮಾರ್ ಮಾರ್ಗದರ್ಶನದಲ್ಲಿ ಮಂಗಳಪೇಟೆಯವರೆಗೆ ಸ್ವಚ್ಛತೆ ಕೈಗೊಂಡರು. ಶ್ರೀ ಸಂದೇಶ್ ಶರತ್, ಶ್ರೀ ಚಂದನ್ ರಾಬಿನ್ ಸನ್ಡಿಸೋಜಾ ಮತ್ತಿತರರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಶ್ರೀಶ ಕರ್ಮರನ್ ಅಭಿಯಾನವನ್ನು ಸಂಯೋಜಿಸಿದರು.
368) ಪರಂಗಿಪೇಟೆ: ಶ್ರೀನಿವಾಸ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶ್ರೀ ನಾಗನಾಗಿನಿ ದೇವಸ್ಥಾನದ ಕಾರ್ಯಕರ್ತರು ಪರಂಗಿಪೇಟೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡರು. ಶ್ರೀಸಂತೋಷಕುಮಾರ್ ತುಪ್ಪೆಕಲ್ ಹಾಗೂ ಶ್ರೀ ಸುಕುಮಾರ್ ಧರ್ಮಗಿರಿ ಅಭಿಯಾನಕ್ಕೆ ಚಾಲನೆ ನೀಡಿದರು. ಹೆದ್ದಾರಿಯ ಅಕ್ಕಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛಗೊಳಿಸಿದರು ಹಾಗೂ ಬ್ಯಾನರ್ ಮತ್ತು ಪೆÇೀಸ್ಟರಗಳನ್ನೂ ತೆರವುಗೊಳಿಸಿದರು. ಜೊತೆಗೆ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ, ಪೇಂಟ್ ಮಾಡಿ ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಶ್ರೀ ಅಭಿಷೇಕ್ ವಿ ಎಸ್ ಅಭಿಯಾನವನ್ನು ಸಂಯೋಜಿಸಿದರು.
369) ದೇರಲಕಟ್ಟೆ: ‘ಕ್ಷೇಮ’ದ ವೈದ್ಯ ವಿದ್ಯಾರ್ಥಿಗಳಿಂದ ದೇರಲಕಟ್ಟೆಯಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಡಾ. ಸಚಿನ್ ಹಾಗೂ ಡಾ ಶಶಿಕಿರಣ ಅಭಿಯಾನಕ್ಕೆ ಚಾಲನೆ ನೀಡಿದರು. ದೇರಳಕಟ್ಟೆ ಶಾಘ್ಲಿ ಟವರ್ಸ್ ನಿಂದ ಪ್ರಾರಂಭಿಸಿ ಕ್ಷೇಮ ಆಸ್ಪತ್ರೆಯ ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಕಸತ್ಯಾಜ್ಯವನ್ನು ತೆಗೆದು ಶುಚಿಗೊಳಿಸಲಾಯಿತು. ಕ್ಷೇಮ ಅಲೈಡ್ ಹೆಲ್ತ್ ವಿಭಾಗ ಅಭಿಯಾನದಲ್ಲಿ ಕೈಜೋಡಿಸಿತ್ತು.
370) ರಥಬೀದಿ: ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ರಥಬೀದಿ ಹಾಗೂ ಕಾಲೇಜಿನ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳಲಾಯಿತು. ಪ್ರಾಚಾರ್ಯರಾದ ಶ್ರೀ ರಾಜಶೇಖರ್ ಹೆಬ್ಬಾರ್ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪ್ರಾಧ್ಯಾಪಕ ಶ್ರೀ ಶೇಷಪ್ಪ ಅಮೀನ್ ಅಭಿಯಾನವನ್ನು ಸಂಯೋಜಿಸಿದರು.
371) ಕರಂಗಲಪಾಡಿ: ಸಿ ಜಿ ಕಾಮತ್ ರಸ್ತೆಯಲ್ಲಿ ಕರಂಗಲಪಾಡಿ ನಿವಾಸಿಗಳು ಹಾಗೂ ಆಟೋ ಚಾಲಕರು ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದರು. ಶ್ರೀ ಎಂ ಆರ್ ವಾಸುದೇವ ನೇತೃತ್ವದಲ್ಲಿ ಶ್ರಮದಾನ ಜರುಗಿತು. ಶ್ರೀ ಮನೀಶ್ ರಾವ್, ಶ್ರೀ ರಕ್ಷಿತ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಎಲ್ಲ ಕಾರ್ಯಕ್ರಮಗಳಿಗೆ ಎಂಆರ್ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಧನ ಸಹಾಯ ನೀಡಿ ಪ್ರೋತ್ಸಾಹಿಸುತ್ತಿದೆ.
ಸಂಪರ್ಕ – 9448353162 (ಸ್ವಾಮಿ ಏಕಗಮ್ಯಾನಂದ, ಸಂಚಾಲಕ, ಸ್ವಚ್ಛ ಮಂಗಳೂರು ಅಭಿಯಾನ)
True heroes!! I should also applaud those sponsoring groups (Nitte and MRPL) and media(this portal) for encouraging these real heroes!! You can tell who is really honest about making things better and who is not. Even elderly people and children are doing their best. But….I don’t see any of the elected reps here. I don’t see any ‘social activists’, ‘champions of education’ or other usual suspects. How sad!!