ರಾಮಕೃಷ್ಣ ಮಿಷನ್‍ ತೃತೀಯ ಹಂತದ ಸ್ವಚ್ಛ ಮಂಗಳೂರು ಕಾರ್ಯಕ್ರಮ

Spread the love

ತೃತೀಯ ಹಂತದ ಸ್ವಚ್ಛ ಮಂಗಳೂರು 400 ಅಭಿಯಾನಗಳ ಪ್ರಥಮ 10 ಸ್ವಚ್ಛತಾ ಕಾರ್ಯಕ್ರಮ

“ರಾಮಕೃಷ್ಣ ಮಿಷನ್‍ಪ್ರೇರಿತ ಸ್ವಚ್ಛ ಮಂಗಳೂರು”ಅಭಿಯಾನದ ಪ್ರಥಮ 10 ತಂಡಗಳು ದಿನಾಂಕ 9-10-2016ರಂದು ಮಂಗಳೂರು ನಗರದ ಹತ್ತು ವಿವಿಧಪ್ರದೇಶಗಳಲ್ಲಿ ಸ್ವಚ್ಛತಾಕೈಂಕರ್ಯ ನಡೆಸಿದವು.

ಮುಳಿಹಿತ್ಲು: ಅಂಬಾ ಮಹೇಶ್ವರೀ ಭಜನಾ ಮಂದಿರದ ಸ್ವಯಂಸೇವಕರು ಮುಳಿಹಿತ್ಲು ಪರಿಸರದಲ್ಲಿ ಸ್ವಚ್ಛತಾಅಭಿüಯಾನವನ್ನುಕೈಗೊಂಡರು. ಸ್ವಚ್ಛ ಮಂಗಳೂರು ಅಭಿüಯಾನದ ಸಂಚಾಲಕರಾದ ಸ್ವಾಮಿಚಿದಂಬರಾನಂದಜಿ ಹಾಗೂ ಸೀತಾರಾಮ್ ಎ ಮುಳಿಹಿತ್ಲು ಜಂಟಿಯಾಗಿ ಪ್ರಥಮಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಯೋಜಕ ಶ್ರೀ ಉಮಾನಾಥಕೋಟೆಕಾರ್ ನೇತೃತ್ವದಲ್ಲಿಬೆಳಿಗ್ಗೆ ಸುಮಾರು 7:30ರಿಂದ 9:30 ರ ವರೆಗೆ ಸ್ವಚ್ಚತಾಕಾರ್ಯಕ್ರಮ ನಡೆಯಿತು.

ಜೆಪ್ಪು: ನಿವೇದಿತಾ ಬಳಗದ ಸದಸ್ಯೆಯರುಜೆಪ್ಪು ಮಾರ್ಕೆಟ್‍ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು. ಶ್ರೀದೇವಿ ಇಂಜಿನಿಯರಿಂಗ್‍ ಕಾಲೇಜಿನ ಪ್ರಾಚಾರ್ಯರಾದ ಡಾ ದೀಲಿಪಕುಮಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ವಿಜಯಲಕ್ಷ್ಮೀ ಮಾರ್ಗದರ್ಶನದಲ್ಲಿ ನಿವೇದಿತಾ ಬಳಗದ ಸದಸ್ಯೆಯರು ಶುಚಿತ್ವದ ಕೈಂಕರ್ಯಕೈಗೊಂಡರು.

image018ramakrishna-swacch-mangaluru-abhiyan-20161011-018 image017ramakrishna-swacch-mangaluru-abhiyan-20161011-017 image016ramakrishna-swacch-mangaluru-abhiyan-20161011-016 image015ramakrishna-swacch-mangaluru-abhiyan-20161011-015 image014ramakrishna-swacch-mangaluru-abhiyan-20161011-014 image013ramakrishna-swacch-mangaluru-abhiyan-20161011-013 image005ramakrishna-swacch-mangaluru-abhiyan-20161011-005 image006ramakrishna-swacch-mangaluru-abhiyan-20161011-006 image001ramakrishna-swacch-mangaluru-abhiyan-20161011-001 image002ramakrishna-swacch-mangaluru-abhiyan-20161011-002 image004ramakrishna-swacch-mangaluru-abhiyan-20161011-004 image003ramakrishna-swacch-mangaluru-abhiyan-20161011-003

ಕರಾವಳಿ ಮೈದಾನ: ಕ್ಯಾಪ್ಟನ್‍ಗಣೇಶ್‍ಕಾರ್ಣಿಕ ನೇತೃತ್ವದಲ್ಲಿ ರಚಿಸಿಕೊಂಡ ‘ಟೀಂ ವಿವೇಕ’ ಇದರಸ್ವಯಂಸೇವಕರು ಕರಾವಳಿ ಮೈದಾನದಎದುರುರಸ್ತೆಯನ್ನು ಶುಚಿಗೊಳಿಸಿದರು. ರಾಮಕೃಷ್ಣ ಮಿಷನ್ ಬಾಲಕಾಶ್ರಮದ ಸ್ವಾಮಿಧರ್ಮವ್ರತಾನಂದಜಿಭಾನುವಾರ ಬೆಳಿಗ್ಗೆ 8 ಗಂಟೆಗೆಟೀಂ ವಿವೇಕ ಸ್ವಚ್ಛತಾಅಭಿಯಾನಕ್ಕೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯಕ್ಯಾಪ್ಟನ್‍ಗಣೇಶ್‍ಕಾರ್ಣಿಕ್ ಮಾರ್ಗದರ್ಶನದಲ್ಲಿ ಸುಮಾರು 50 ಜನರತಂಡವುಅಭಿüಯಾನವನ್ನು ಯಶಸ್ವಿಗೊಳಿಸಿತು.

ರಥಬೀದಿ: ಶ್ರೀವೆಂಕಟರಮಣ ದೇವಸ್ಥಾನದರಥಬೀದಿಯಲ್ಲಿ ಸ್ವಚ್ಛತಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಳಿಗ್ಗೆ 7:30 ಕ್ಕೆ ಸರಿಯಾಗಿಅಭಿಯಾನಕ್ಕೆಕ್ಯಾಪ್ಟನ್‍ಗಣೇಶಕಾರ್ಣಿಕ್ ಹಾಗೂ ಕಾಲೇಜಿನಪ್ರಾಚಾರ್ಯಡಾ. ರಾಜಶೇಖರ ಹೆಬ್ಬಾರಜಂಟಿಯಾಗಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಥಬೀದಿ ಸರಕಾರಿ ಪ್ರಥಮದರ್ಜೆಕಾಲೇಜಿನ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು. ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಯೋಜಕ ದಿಲ್‍ರಾಜ್ ಆಳ್ವಾ ಕಾರ್ಯಕ್ರಮವನ್ನು ಸಂಘಟಿಸಿದರು.

ಕುದ್ರೋಳಿ: ಶ್ರೀಪರಂಜ್ಯೋತಿ ಮಾನವ ಸೇವಾ ಸಮಿತಿ ಸದಸ್ಯರ ನೇತೃತ್ವದಲ್ಲಿ ನಾರಯಣಗುರುಕಾಲೇಜಿನ ವಿದ್ಯಾರ್ಥಿಗಳು ಕುದ್ರೋಳಿ ಪರಿಸರದಲ್ಲಿ ಸಚ್ಛತಾಅಭಿüಯಾನ ನಡೆಸಿದರು. ಸ್ವಾಮಿಧರ್ಮವ್ರತಾನಂದಜಿ ಹಾಗೂ ಶ್ರೀ ಮನೋಹರ ಪ್ರಭುಜೊತೆಯಾಗಿ ಸ್ವಚ್ಚ ಮಂಗಳೂರು ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು.

ಚಿಲಿಂಬಿ: ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿನಿಲಯ ಹಾಗೂ ಅಲ್ಪ ಸಂಖ್ಯಾತ ವಿದ್ಯಾರ್ಥಿನಿಯರ ವಸತಿ ನಿಲಯದಎರಡು ತಂಡಗಳು ಚಿಲಿಂಬಿ ಪ್ರದೇಶದಲ್ಲಿ ಸ್ವಚ್ಛತೆಯ ಕೈಂಕರ್ಯ ಕೈಗೊಂಡವು. ಮನಪಾ ಸದಸ್ಯ ಶ್ರೀರಜನೀಶ್ ಹಾಗೂ ಸ್ವಚ್ಛ ಮಂಗಳೂರು ಸಂಯೋಜಕ ಶ್ರೀ ಸುರೇಶ ಶೆಟ್ಟಿ ಹಸಿರು ನಿಶಾನೆ ತೋರಿ ಅಭಿಯಾನವನ್ನು ಉದ್ಘಾಟಿಸಿದರು. ಪ್ರಾಧ್ಯಾಪಕ ಮಹೇಶ ಕೆ ಬಿ ಕಾರ್ಯಕ್ರಮವನ್ನು ಸಂಘಟಿಸಿದರು. ಬೆಳಿಗ್ಗೆ 7:30 ರಿಂದ 9:30 ರರೆಗೆ ಸ್ವಚ್ಛತೆಯ ಕಾರ್ಯ ನಡೆಯಿತು.

ಮೋರ್ಗನ್ಸ್‍ಗೇಟ್ : ಭಗಿನಿ ಸಮಾಜದ ವಿದ್ಯಾರ್ಥಿಗಳು ಮೋರ್ಗನ್ಸ್‍ಗೇಟ್ ಸುತ್ತಮುತ್ತಲಿನ ಸ್ವಚ್ಛತಾಕಾರ್ಯವನ್ನುಕೈಗೊಂಡರು. ಸಂಯೋಜಕಿ ಶ್ರೀಮತಿ ರತ್ನಾ ಆಳ್ವಾ ವಿದ್ಯಾರ್ಥಿಗಳಿಂದ ಸ್ವಚ್ಛತೆಯನ್ನು ಮಾಡಿಸಿದರು.

ಕೊಂಚಾಡಿ-ದೇರೆಬೈಲ್ಕೊಂ: ಚಾಡಿ ಫ್ರೆಂಡ್ಸ್ ಸರ್ಕಲ್ ನ ಗೆಳೆಯರು ರಾಮಕೃಷ್ಣ ಮಿಷನ್ನಿಂದ ಪ್ರೇರಿತರಾಗಿ ಮಾಲೆಮಾರ್‍ರಸ್ತೆಯಲ್ಲಿ ಸ್ವಚ್ಛತೆಯನ್ನುಕೈಗೊಂಡರು. ಶ್ರೀ ಜಗದೀಶ ಶೆಟ್ಟಿಹಸಿರು ನಿಶಾನೆ ತೋರಿಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಸ್ವಾಮಿಏಕಗಮ್ಯಾನಂದಜಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬೆಳಿಗ್ಗೆ 7:30ಸುಮಾರು ಎರಡು ಗಂಟೆಗಳ ಕಾಲ ಅಭಿಯಾನ ನಡೆಯಿತು.

ಕಲ್ಲಡ್ಕ : ಸ್ವಚ್ಛ ಭಾರತ ನಿರ್ಮಾಣ ಸಂಘ ಹಾಗೂ ಶ್ರೀ ರಾಮ ವಿದ್ಯಾಕೇಂದ್ರಜಂಟಿಯಾಗಿರಾಮಕೃಷ್ಣ ಮಿಷನ್ನಿನ ಸ್ವಚ್ಛತಾಅಭಿಯಾನದಿಂದ ಪ್ರೇರಿತರಾಗಿ ಸ್ವಚ್ಛಗ್ರಾಮ ಎಂಬ ಮಾಸಿಕ ಸ್ವಚ್ಛತಾಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಅದರಉದ್ಘಾಟನೆಯನ್ನುರಾಮಕೃಷ್ಣ ಮಠದ ಸ್ವಾಮಿಏಕಗಮ್ಯಾನಂದಜಿ ಉದ್ಘಾಟಿಸಿದರು. ಡಾ. ಪ್ರಭಾಕರ ಭಟ್, ನಾರಾಯಣ ಸೋಮಯಾಜಿ, ವಸಂತ ಮಾಧವ, ಪಾಚಾರ್ಯಕೃಷ್ಣಪ್ರಸಾದ ಹಾಗೂ ರಮೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಸ್ವಾಮಿ ಏಕಗಮ್ಯಾನಂದಜಿ ಅವರು ಸ್ವಚ್ಛತೆಯ ಮಹತ್ವ ಹಾಗೂ ಸ್ವಚ್ಛ ಮಂಗಳೂರು ಅಭಿಯಾನದ ಕುರಿತು ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದ ನಂತರ ಕಲ್ಲಡ್ಕದಲ್ಲಿ ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತೆಯ ಕಾರ್ಯ ಕೈಗೊಂಡರು.

ಈ ಅಭಿಯಾನ ಮಹಾಪೋಷಕರಾಗಿ ನಿಟ್ಟೆ ವಿದ್ಯಾಸಂಸ್ಥೆ ಹಾಗೂ ಎಂಆರ್‍ಪಿಎಲ್ ಸಂಸ್ಥೆ ಧನ ಸಹಾಯ ನೀಡಿ ಪ್ರೋತ್ಸಾಹಿಸುತ್ತದೆ. ಅಭಿಯಾನದ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ಮೇಲ್ಕಂಡ ಸುದ್ದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ನಮ್ಮೊಂದಿಗೆ ಈ “ಸ್ವಚ್ಚ ಮಂಗಳೂರು ಅಭಿಯಾನ” ದಲ್ಲಿ ಕೈಜೋಡಿಸಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುವೆವು.


Spread the love