ರಾಮಕೃಷ್ಣ ಮಿಷನ್ಸ್ವಚ್ಛ ಮಂಗಳೂರು ಅಭಿಯಾನದ 26ನೇ ವಾರದ ಸ್ವಚ್ಛತಾ ಕಾರ್ಯಕ್ರಮ
292)ಲಾಲಭಾಗ್- ಬಿರುವೆರ್ಕುಡ್ಲ್ ಸದಸ್ಯರು ಲಾಲಭಾಗ್ ಹಾಗೂ ನಗರ ಪಾಲಿಕೆ ಮುಂಭಾಗದಲ್ಲಿ ಸ್ವಚ್ಛತಾಅಭಿಯಾನವನ್ನು ಆಯೋಜಿಸಿದ್ದರು. ಸ್ವಾಮಿಜಿತಕಾಮಾನಂದಜಿ ಹಾಗೂ ಎಂಆರ್ ಪಿ ಎಲ್ಜನೆರಲ್ ಮ್ಯಾನೇಜರ್ ಶ್ರೀ ಬಿಎಚ್ ವಿ ಪ್ರಸಾದಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯಕ್ಯಾಪ್ಟನ್ಗಣೇಶ್ಕಾರ್ಣಿಕ್ ಸ್ವಚ್ಛತಾಅಭಿಯಾನದಕುರಿತು ಮಾತನಾಡಿದರು. ನಂತರ ಸುಮಾರು 150 ಜನ ಬಿರುವೆರಕುಡ್ಲ್ತಂಡದ ಸದಸ್ಯರು ಲಾಲಭಾಗ್ ಪ್ರದೇಶದಲ್ಲಿ ಸ್ವಚ್ಛತೆಯನ್ನುಕೈಗೊಂಡರು. ಮುಖಂಡರಾದ ಶ್ರೀ ಉದಯ ಪೂಜಾರಿ ಹಾಗೂ ಅಭಿಷೇಕ್ಅಭಿಯಾನವನ್ನು ಸಂಘಟಿಸಿದರು.
293)ಆರ್ ಟಿ ಓ ವೃತ್ತ: ಹಿಂದೂ ವಾರಿಯರ್ಸ್ತಂಡದಯುವಕರಿಂದಎ ಬಿ ಶೆಟ್ಟಿ ವೃತ್ತದ ಬಳಿ ನಡೆದಅಭಿಯಾನವನ್ನುಶ್ರೀ ಮನೋಹರ ಹಾಗೂ ಶ್ರೀ ಸುಂದರ ಪೂಜಾರಿಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಶ್ರೀ ಯೋಗಿಶ್ಕಾಯರ್ತಡ್ಕ ನೇತೃತ್ವದಲ್ಲಿಯುವಕರು ಎಬಿ ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತದ ವರೆಗಿನರಸ್ತೆ ಹಾಗೂ ಕಾಲುದಾರಿಯನ್ನು ಸ್ವಚ್ಛಗೊಳಿಸಿದರು. ಅಲ್ಲದೇಅಲ್ಲಲ್ಲಿ ಹಾಕಲಾಗಿದ್ದಅನಧಿಕೃತ ಬ್ಯಾನರ್ ಪೆÇೀಸ್ಟರಗಳನ್ನು ತೆರವುಗೊಳಿಸಲಾಯಿತು.
294) ಎಂ ಜಿ ರಸ್ತೆ:“ಮಂಗಲೂರಿಯನ್ಡಾಟ್ ಕಾಂ” ನಿಂದಪತ್ರಕರ್ತರು ಹಾಗೂ ಸಿಬ್ಬಂದಿ ಸ್ವಯಂಪ್ರೇರಣೆಯಿಂದಸ್ವಚ್ಛತಾಕಾರ್ಯದಲ್ಲಿ ಭಾಗವಹಿಸಿದರು. ಬೆಂಗಳೂರಿನ ಪೆÇ್ರೀ. ರಘೋತ್ತಮ್ರಾವ ಹಾಗೂ ಡಾ. ವಿವೇಕ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮನಪಾ ಎದುರುಗಡೆ ಹಾಗೂ ಸಾಯಿಬಿನ್ ಕಾಂಪ್ಲೆಕ್ಸ್ ಸುತ್ತಮುತ್ತ ಸ್ವಚ್ಛತೆಯನ್ನುಕೈಗೊಂಡರು. ಶ್ರೀ ಅಲ್ಫಿಡಿಸೋಜಾ ಹಾಗೂ ಶ್ರೀಮತಿ ಪೀರೇರಾಅಭಿಯಾನವನ್ನು ಸಂಯೋಜಿಸಿದರು.
295)ಬಿಜೈ:ಮಂಗಳೂರು ಹಿರಿಯರುಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾಕಾರ್ಯವನ್ನು ಹಮ್ಮಿಕೊಂಡರು. ಶ್ರೀ ಜೆ ವಿ ಶೆಟ್ಟಿ ಹಾಗೂ ಶ್ರೀ ಸಿ ಜಿ ಕಿಣಿಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಶ್ರೀ ರಮೇಶ್ರಾವ್ ಹಾಗೂ ಶ್ರೀ ಜಯರಾಜ್ರೈ ಸೇರಿದಂತೆ ಅನೇಕ ಹಿರಿಯರು ಪೆÇರಕೆ ಹಿಡಿದು ಮಾರ್ಗಗಳನ್ನು ಸ್ವಚ್ಛ ಮಾಡಿದರು. ಅಲ್ಲದೇ ಬಸ್ ನಿಲ್ದಾಣದಆವರಣಗೋಡೆಗೆ ಅಂಟಿಸಿದ್ದ ಪೆÇೀಸ್ಟರ್ಕಿತ್ತು ಶುಚಿಗೊಳಿಸಿ ಬಣ್ಣ ಬಳಿದರು. ಮುಂದಿನ ದಿನಗಳಲ್ಲಿ ಆ ಗೋಡೆಗಳ ಮೇಲೆ ಸ್ವಚ್ಛ ಭಾರತಕ್ಕೆ ಸಂಬಂಧಪಟ್ತ ವಾಕ್ಯಗಳನ್ನು ಬರೆಯಲಾಗುತ್ತದೆ.
296)ಕರಂಗಲಪಾಡಿ: ಸಿ ಜೆಕಾಮತ್ರಸ್ತೆಯಲ್ಲಿಕರಂಗಲಪಾಡಿಆಟೋಚಾಲಕರು ಹಾಗೂ ಸ್ಥಳೀಯ ನಾಗರಿಕರು ಸೇರಿ ಸ್ವಚ್ಛತಾಕಾರ್ಯಕೈಗೊಂಡರು. ಶ್ರೀ ವಾಸುದೇವ ಎಂ ಆರ್ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಉಮೇಶ್, ಸತೀಶ್ ಪ್ರಭು,ರಾಜೇಶ್ ಮತ್ತಿತರರು ಸ್ವಚ್ಛತಾಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
297)ಹಂಪಣಕಟ್ಟೆ: ಶ್ರೀಕೃಷ್ಣ ಭವನರಿಕ್ಷಾಚಾಲಕರುಕ್ಲಾಕ್ಟವರ್ ಸುತ್ತಮುತ್ತ ಸ್ವಚ್ಚತಾಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶ್ರೀ ಯೋಗಿಶ್ಕುಮಾರ್ ಹಾಗೂ ವಿಲ್ಫ್ರೇಡ್ ಪಿಂಟೋಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಗಣೇಶ್ ಬೋಳಾರ ಹಾಗೂ ಸುಧೀರ್ ಪಿಂಟೋ ಸ್ವಚ್ಛತಾಅಭಿಯಾನದ ನೇತೃತ್ವ ವಹಿಸಿದ್ದರು.
298)ಕದ್ರಿ ಮಲ್ಲಿಕಟ್ಟ: ದೇಶಾಭಿಮಾನಿ ಬಳಗದಿಂದ ಮಲ್ಲಿಕಟ್ಟ ಪರಿಸರದಲ್ಲಿ ಸ್ವಚ್ಛತಾಅಭಿಯಾನಜರುಗಿತು. ಶ್ರೀಕರ ಪ್ರಭು ನೇತೃತ್ವದಲ್ಲಿ ನೂರಾರುಯುವಕರು ಸ್ವಚ್ಛತೆಯಲ್ಲಿ ಕೈಜೋಡಿಸಿದರು. ಮಲ್ಲಿಕಟ್ಟೆಯಲ್ಲಿರುವಗ್ರಂಥಾಲಯದಆವರಣ ಹಾಗೂ ಬದಿಯಎರಡೂ ರಸ್ತೆಗಳನ್ನು ಶುಚಿಗೊಳಿಸಲಾಯಿತು.
299) ಶಿವಭಾಗ್: ಶ್ರೀಮತಿ ಶೀಲಾ ಜಯಪ್ರಕಾಶ್ ನೇತೃತ್ವದಲ್ಲಿ ಶಿವಭಾಗ್ ಮುಖ್ಯರಸ್ತೆಯಲ್ಲಿ ಸ್ವಚ್ಛತಾಕಾರ್ಯ ಕೈಗೊಳ್ಳಲಾಯಿತು. ಶ್ರೀ ಪುಟ್ಟಣ್ಣ ಹಾಗೂ ಕ್ರೈಸ್ಟಿ ಕಾರ್ಯಕ್ರಮವನ್ನು ಆರಂಭಗೊಳಿಸಿದರು. ಶ್ರೀಮತಿ ಕಲಾದೀಪಕ, ಶ್ರೀಮತಿ ರಾಜಲಕ್ಷ್ಮೀಸೇರಿದಂತೆ ಅನೇಕ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
300)ಎಕ್ಕೂರು: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸದಸ್ಯರು ಹಾಗೂ ಸ್ಥಳಿಯ ಸಾರ್ವಜನಿಕರುಎಕ್ಕೂರಿನ ಬಸ್ನಿಲ್ದಾಣದಎದುರಿನ ಮೈದಾನದಲ್ಲಿ ಸ್ವಚ್ಛತೆಗಾಗಿ ಶ್ರಮದಾನ ನಡೆಸಿದರು. ಶ್ರೀ ಭರತ್ಕಾರ್ಯಕ್ರಮವನ್ನು ಸಂಯೋಜಿಸಿದರು.
301)ಅತ್ತಾವರ: ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಸದಸ್ಯರ ಸಹಯೋಗದಲ್ಲಿಚಕ್ರಪಾಣಿದೇವಸ್ಥಾನದಆವರಣದಲ್ಲಿ ಸ್ವಚ್ಛತಾಕೈಂಕರ್ಯ ಮಾಡಲಾಯಿತು. ಶ್ರೀ ದಿನೇಶ್, ಶ್ರೀ ಅನಿಲ್ ನಾಯಕ್ ಹಾಗೂ ಚಕ್ರಪಾಣಿದೇವಸ್ಥಾನದ ಭಕ್ತಾದಿಗಳು ಸೇರಿದಂತೆಅನೇಕರು ಸ್ವಚ್ಛತಾಕಾರ್ಯದಲ್ಲಿ ಭಾಗವಹಿಸಿದರು.
302)ದೇರಳಕಟ್ಟೆ: ಕೆ ಎಸ್ ಹೆಗ್ಡೆ ಮೆಡಿಕಲ್ಆಕಾಡಮಿಯ ವಿದ್ಯಾರ್ಥಿಗಳಿಂದ ದೇರಳಕಟ್ಟೆಯಲ್ಲಿ ಸ್ವಚ್ಛತಾಕಾರ್ಯಜರುಗಿತು. ಶ್ರೀ ಭಾಸ್ಕರ್ ಹಾಗೂ ಶ್ರೀಮತಿ ಸ್ವಾತಿ ಸ್ವಚ್ಛತಾಕಾರ್ಯಕ್ಕೆ ಚಾಲನೆ ಕೊಟ್ಟರು. ಉಪನ್ಯಾಸಕರಾದ ಸುಹಾನಾ ಮಾರ್ಗದರ್ಶನದಲ್ಲಿ ಸುಮಾರು 60 ವೈದ್ಯಕೀಯ ವಿದ್ಯಾರ್ಥಿಗಳು ಸ್ವಚ್ಛ ಭಾರತಅಭಿಯಾನದಲ್ಲಿ ತೊಡಗಿಸಿಕೊಂಡರು.
303)ನಂತೂರು: ದ.ಕ ಹವ್ಯಕ ಸಭಾದ ಸದಸ್ಯರಿಂದ ಪದುವಾಹೈಸ್ಕೂಲ್ ಸುತ್ತಮುತ್ತ ಸ್ವಚ್ಛ ಮಾಡಲಾಯಿತು. ಶ್ರೀ ರಮೇಶ್ ಮೂಜಿಬೈಲ್ ಹಾಗೂ ಡಾ. ಈಶ್ವರ ಭಟ್ಅಭಿಯಾನಕ್ಕೆ ಚಾಲನೆ ನೀಡಿದರು. ಮನೆ ಮನೆಗಳಿಗೆ ತೆರಳಿ ಸ್ವಚ್ಛತೆಯ ಮಹತ್ವವನ್ನು ಸಾರುವಕರಪತ್ರ ಹಂಚಲಾಯಿತು.
304)ಕಾವೂರು: ಸ್ವಚ್ಛಕಾವೂರು ತಂಡದಿಂದ ಸ್ವಚ್ಛತಾಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಶ್ರೀ ಕೆ ಎನ್ ಶೆಟ್ಟಿ ಹಾಗೂ ಶ್ರೀ ಮೋಹನ್ಜಾಗೃತಿ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಶ್ರೀ ಸದಾನಂದರೈ ಹಾಗೂ ಶ್ರೀ ರಾಮಚಂದ್ರ ನೇತೃತ್ವದಲ್ಲಿ ಮನೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ಹೋಗಿ ಕರಪತ್ರಹಂಚಿ, ಕಸ ತ್ಯಾಜ್ಯ ಬೀಸಾಡದಂತೆ ವಿನಂತಿಸಲಾಯಿತು.
305)ಕಂಕನಾಡಿ: ಲಯನ್ಸ್ ತಂಡ ದಿಂದ ಹೈಲ್ಯಾಂಡ್ ಕಂಕನಾಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀ ನಾಗೇಶ್ಕುಮಾರ್ ಹಾಗೂ ಶ್ರೀ ರೋನಾಲ್ಡ್ಗೋವ್ಸ್ಕಾರ್ಯಕ್ರಮಕ್ಕೆಚಾಲನೆ ನೀಡಿದರು. ಹೈಲ್ಯಾಂಡ್ ಅಸ್ಪತ್ರೆಯಿಂದ ಕಂಕನಾಡಿ ಮಾರ್ಕೆಟ್ವರೆಗಿನ ರಸ್ತೆ ಹಾಗೂ ತೋಡುಗಳನ್ನು ಶುಚಿಗೊಳಿಸಲಾಯಿತು.
306) ಪಡೀಲ್: ಸಹಕಾರ ಪ್ರಶಾಂತಿ ಮಹಿಳಾ ಮಂದಿರದ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಶ್ರೀವಿಶ್ವನಾಥ್ ಹಾಗೂ ಶ್ರೀಮತಿ ವಿನುತಾ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀ ಮಹಾದೇವಿ ಭಜನಾ ಮಂದಿರದಿಂದ ಪಲ್ಲಕೆರೆವರೆಗೆ ಸ್ವಚ್ಛತೆಯನ್ನು ಮಾಡಲಾಯಿತು.ಶ್ರೀ ಉದಯ ಕೆ ಪಿ ಹಾಗೂ ಶ್ರೀ ಬಾಲಕೃಷ್ಣ ನಾಯ್ಕ ಅಭಿಯಾನದ ಮುಂಚೂಣಿಯಲ್ಲಿದ್ದರು.
307) ಉರ್ವಾ ಮಾರ್ಕೆಟ್: ಎಂ ಸಿ ಎ¥sóï ಮಂಗಳ ಸದಸ್ಯರಿಂದ ಊರ್ವಾ ಮಾರ್ಕೆಟ್ ನಿಂದ ಅಶೋಕ ನಗರದವರೆಗೆ ಸ್ವಚ್ಛತಾಕಾರ್ಯ ನಡೆಸಲಾಯಿತು. ಶ್ರೀ ಪ್ರಭಾಕರ ರಾವ್ ಹಾಗೂ ಶ್ರೀ ಜಯರಾಂ ಕರಂದೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
308) ಮಂಗಳಾದೇವಿ:ಭಗಿನಿ ಸಮಾಜ ವಿದ್ಯಾರ್ಥಿಗಳಿಂದ ಹಾಗೂ ಸ್ಥಳೀಯರಿಂದ ಮಂಗಳಾದೇವಿ ದೇವಸ್ಥಾನ ದಿಂದ ಜೆಪ್ಪು ರಸ್ತೆಯ ವರೆಗೆ ಸ್ವಚ್ಛತಾಕಾರ್ಯ ನಡೆಯಿತು. ಶ್ರೀಮತಿ ಮಾಲಿನಿ ಅರವಿಂದ ಕುಮಾರ್ ಹಾಗೂ ಶ್ರೀಮತಿ ಭಾಗೀರಥಿ ಅಭಿಯಾನಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ ಸುಮಾರು 2 ಗಂಟೆಗಳ ಕಾಲ ಸ್ವಚ್ಛತಾ ಕಾರ್ಯಜರುಗಿತು.
309) ಅಂಬಾನಗರ:ಶ್ರೀ ಅಂಬಾಮಹೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಅಂಬಾನಗರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಶ್ರೀಮತಿ ಹೇಮಲತಾ ಹಾಗೂ ಶ್ರೀಮತಿ ಪುಷ್ಪಾಅಭಿಯಾನವನ್ನು ಆರಂಭಗೊಳಿಸಿದರು. ವಿವೇಕ ಶೆಟ್ಟಿ ಹಾಗೂ ಚರಣ ಶೆಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡರು.
310) ಜೆಪ್ಪು:ನಿವೇದಿತಾ ಬಳಗದವರಿಂದ ಜೆಪ್ಪು ಪ್ರದೇಶದಲ್ಲಿಅಭಿಯಾನಜರುಗಿತು. ಶ್ರೀ ಅರವಿಂದಕುಮಾರ ಹಾಗೂ ಶ್ರೀ ಬಸವರಾಜ್ಕಾರ್ಯಕ್ರಮವನ್ನು ಆರಂಭಗೊಳಿಸಿದರು. ಸ್ವಚ್ಛತೆಯೊಂದಿಗೆಜಾಗೃತಿಕಾರ್ಯಕ್ಕೂಒತ್ತು ನೀಡಲಾಯಿತು.
311) ಗೂಡಶೆಡ್ರಸ್ತೆ: ಶ್ರೀನಿತ್ಯಾನಂದ ಸ್ವಚ್ಛತಾತಂಡದವರಿಂದ ನೀರೇಶ್ವಾಲ್ಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಸುಜಿತ್ ನೇತೃತ್ವದತಂಡಗೂಡಶೆಡ್ ನಿರೇಶ್ವಾಲ್ಯರಸ್ತೆ, ತೋಡುಗಳನ್ನು ಶುಚಿಗೊಳಿಸಿದರು.
312) ಗಣೇಶಪುರ :ಜೆಸಿಆಯ್ ಬಳಗದವರಿಂದ ಗಣೇಶಪುರವೃತ್ತ ಹಾಗೂ ಶ್ರೀ ಶಾರದಾ ಭಜನಾ ಮಂದಿರದಅಕ್ಕಪಕ್ಕದ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಹಮ್ಮಿಕೊಳ್ಳಲಾಯಿತು. ಶ್ರೀ ಜಯಪ್ರಕಾಶ ಹಾಗೂ ಶ್ರೀ ಗಂಗಾಧರ ಫೂಜಾರಿಸ್ವಚ್ಛತೆಗೆ ಚಾಲನೆ ನೀಡಿದರು.
313) ಮಣ್ಣಗುಡ್ಡ: ಆರ್ಟ್ಆಫ್ ಲಿವಿಂಗ ಬಳಗದಿಂದ ಮಣ್ಣಗುಡ್ಡೆಗುರ್ಜಿಯ ಆಸುಪಾಸಿನಲ್ಲಿ ಸ್ವಚ್ಛತಾಕಾರ್ಯ ನಡೆಯಿತು. ಶ್ರೀ ಭಾಸ್ಕರ ಪೈ ಹಾಗೂ ಶ್ರಿಮತಿ ಸುರೇಖಾ ಹೆಗ್ದೆ ಸೇರಿದಂತೆ ಹಲವಾರುಜನ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
314) ಯಯ್ಯಾಡಿ :ಫ್ರೆಂಡ್ಸ್ ಫಾರ್ಎವರ್ ಸದಸ್ಯರಿಂದ ಯಯ್ಯಾಡಿಜಂಕ್ಷನ್ ನಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಶ್ರೀಮತಿ ವಿದ್ಯಾ ಮಲ್ಯ ಹಾಗೂ ಸೌಮ್ಯ ಸುಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಸುಬ್ಬಯ್ಯ, ಶ್ರೀ ನಿರ್ಮಲ ಕುಮಾರ್ ಮತ್ತಿತರರು ಅಭಿಯಾನದಲ್ಲಿ ಭಾಗವಹಿಸಿದರು.
315) ವ್ಯಾಸನಗರ:ಕೆಪಿಟಿ ಎನ್ನೆಸ್ಸೆಸ್ ಕಾರ್ಯಕರ್ತರಿಂದ ವ್ಯಾಸ ನಗರ ಹಾಗೂ ಆರ್ ಟಿ ಓ ಮೈದಾನದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಶ್ರೀ ದಿನೇಶ್ ಆಳ್ವ ಹಾಗೂ ಶ್ರೀ ವಾಲ್ಟರ್ ವೇಗಾಸ್ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಸುಮಾರು 3 ಗಂಟೆಗಳ ಕಾಲ ಸ್ವಚ್ಛತಾಕಾರ್ಯ ನಡೆಯಿತು.
316) ಕಾರಸ್ಟ್ರೀಟ್: ಪೆÇ್ರೀ. ಶೇಷಪ್ಪ ಅಮೀನ ಮಾರ್ಗದರ್ಶನದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಕಾರಸ್ಟ್ರೀಟ್ ನಲ್ಲಿ ಸ್ವಚ್ಛ ಮಂಗಳೂರು ಅಭಿಯಾನಜರುಗಿತು.
317) ಮೇರ್ಲಪದವು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರಿಕರಿಂದ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಗ್ರಾಮಪಂಚಾಯತಿ ಸದಸ್ಯೆ ಶ್ರೀಮತಿ ವಿಮಲಾ ಹಾಗೂ ಶ್ರೀ ಅಶೋಕ ಕೊಟ್ಟಾರಿಅಭಿಯಾನವನ್ನು ಶುಭಾರಂಭಗೊಳಿಸಿದರು. ನಾಗನಾಗಿನಿ ದೇವಸ್ಥಾನದ ಕಾರ್ಯಕರ್ತರೂ ಸಹಯೋಗ ಒದಗಿಸಿದರು. ಸ್ವಚ್ಛತೆಯೊಂದಿಗೆ ಜಾಗೃತಿಯ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು.
318) ವಿ ಟಿ ರಸ್ತೆ: ಶ್ರೀ ಗೋಕರ್ಣ ಮಠದ ಭಕ್ತರು ಹಾಗೂ ಹಾಗೂ ಸ್ಥಳೀಯರಿಂದ ವಿಟಿ ರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಶ್ರೀ ಮುಕುಂದ ಕಾಮತ್ ಹಾಗೂ ಶ್ರೀ ರವೀಂದ್ರನಾಥ್ ಕಾಮತ್ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಶ್ರೀ ಕಮಲಾಕ್ಷ ಪೈ ಸೇರಿದಂತೆಅನೇಕರು ಸಕ್ರಿಯವಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.
319) ಜೈಲ್ರಸ್ತೆ: ಶ್ರೀಕಾಂತ ರಾವ್ ನೇತೃತ್ವದಲ್ಲಿ ಶ್ರೀಸುಬ್ರಮಣ್ಯ ಸಭಾದ ಕಾರ್ಯಕರ್ತರು ಜೈಲ್ ರಸ್ತೆಯಿಂದ ಬಿಜೈ ಚರ್ಚ್ ರಸ್ತೆಯವರೆಗೆ ಸ್ವಚ್ಛತೆಯನ್ನು ಕೈಗೊಂಡರು. ಶ್ರೀ ನಾಗರಾಜ್ ಶರಣ ಹಾಗು ಶ್ರೀ ಜಯಪ್ರಕಾಶ್ ಸ್ವಚ್ಛತಾಕಾರ್ಯಕ್ಕೆ ಚಾಲನೆ ನೀಡಿದರು. ಡಾ. ತಿಪ್ಪೇಸ್ವಾಮಿ, ಶ್ರೀ ಮನಿಶ್ ರಾವ್ ಮತ್ತಿತರರು ಪಾಲ್ಗೊಂಡರು.
320) ಕೋಟೆಕಾರ್:ಅಯ್ಯಪ್ಪ ಭಜನಾ ಮಂದಿರದ ಸದಸ್ಯರು ಕೋಟೆಕಾರ ಮುಖ್ಯರಸ್ತೆ ಹಾಗೂ ಜಂಕ್ಷನ್ ನಲ್ಲಿ ಸ್ವಚ್ಛತೆಮಾಡಿದರು. ಶ್ರೀ ಜಿತೇಂದ್ರ ಕಾರ್ಯಕ್ರಮವನ್ನು ಸಂಯೋಜಿಸಿದರು.
321) ಮಂಗಳಾ ನಗರ: ಶ್ರೀ ಶಾರದಾ ಮಹಿಳಾ ವೃಂದದವರಿಂದ ಮಂಕಿಸ್ಟಾಂಡ್ ನಲ್ಲಿಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಶ್ರೀಮತಿ ವೇದಾವತಿರೈಹಾಗೂ ಕಮಲಮ್ಮ ಸೇರಿದಂತೆ ಅನೇಕ ಮಹಿಳೆಯರು ಸ್ವಚ್ಚತಾಕಾರ್ಯದಲ್ಲಿ ಭಾಗವಹಿಸಿದರು. ಶ್ರೀಮತಿ ಸತ್ಯವತಿ ಸಂಯೋಜಿಸಿದರು.
ಈ ಅಭಿಯಾನಕ್ಕೆ ಎಂಆರ್ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆಧನ ಸಹಾಯ ನೀಡಿ ಪೆÇ್ರೀತ್ಸಾಹಿಸುತ್ತಿವೆ. 292 ರಿಂದ 321ರ ಅಭಿಯಾನಗಳ ಕೆಲ ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ವರದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ಈ “ಸ್ವಚ್ಚಮಂಗಳೂರು ಅಭಿಯಾನ” ದಲ್ಲಿ ಕೈಜೋಡಿಸಿ ಸಹಕರಿಸಬೇಕೆಂದು ಕೇಳಿಕೊಳ್ಳುವೆವು
ಸಂಪರ್ಕ – 9448353162 (ಸ್ವಾಮಿಏಕಗಮ್ಯಾನಂದ, ಸಂಚಾಲಕ, ಸ್ವಚ್ಛ ಮಂಗಳೂರು ಅಭಿಯಾನ