ರಾಷ್ಟ್ರ ಮಟ್ಟದಲ್ಲಿ ಪ್ರಥಮ ‘ಸ್ವಚ್ಛಭಾರತ ಸಮ್ಮರ್ ಇಂಟರ್ನ್‍ಶಿಪ್’ ಪ್ರಶಸ್ತಿ ಪ್ರಕಟ

Spread the love

ರಾಷ್ಟ್ರ ಮಟ್ಟದಲ್ಲಿ ಪ್ರಥಮ ‘ಸ್ವಚ್ಛಭಾರತ ಸಮ್ಮರ್ ಇಂಟರ್ನ್‍ಶಿಪ್’ ಪ್ರಶಸ್ತಿ ಪ್ರಕಟ

ಉಡುಪಿ: ಕೇಂದ್ರ ಸರ್ಕಾರದ ‘ಸ್ವಚ್ಛಭಾರತ ಸಮ್ಮರ್ ಇಂಟರ್ನ್‍ಶಿಪ್ ಯೋಜನೆಯ’ ಭಾಗವಾಗಿ ಕಳೆದ 3 ತಿಂಗಳಲ್ಲಿ (ಮೇ 1 ರಿಂದ ಜುಲೈ31 ರ ತನಕ) ಎಲ್ಲಾ ಜಿಲ್ಲೆಗಳಿಂದ ಪ್ರಥಮ ಸ್ಥಾನ ಪಡೆದು ಆಯ್ಕೆಗೊಂಡ ಯುವಕ/ಯುವತಿ ಮಂಡಳಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದವು. ಈ ನಿಟ್ಟಿನಲ್ಲಿ 15 ದಿನಗಳ ಹಿಂದೆ ಸೇರಿದ್ದ ರಾಜ್ಯ ಮಟ್ಟದ ಆಯ್ಕೆ ಮಂಡಳಿಯ ಸಭೆಯಲ್ಲಿ ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಚೇರ್‍ಕಾಡಿ ಬ್ರಹ್ಮಾವರವನ್ನು ರಾಜ್ಯ ಮಟ್ಟದ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವಲ್ಲಿ ದಾಪುಗಾಲು ಹಾಕಿತ್ತು.

ರಾಷ್ಟ್ರ ಮಟ್ಟ/ ಅಂತಿಮ ಘಟ್ಟದ ಆಯ್ಕೆಯ ಪ್ರಕ್ರಿಯೆ ನವ ದೆಹಲಿಯಲ್ಲಿ ಭಾರತ ಸರ್ಕಾರದ ಕೇಂದ್ರ ಕುಡಿಯುವ ನೀರು ಹಾಗೂ ಸ್ವಚ್ಛತಾ ಸಚಿವಾಲಯದ ನೇತೃತ್ವದಲ್ಲಿ ಸೆಪ್ಟೆಂಬರ್ 27 ರಂದು ಕೊನೆಗೊಂಡು, ಭಾರತ ಸರ್ಕಾರದ ಕೇಂದ್ರ ಕುಡಿಯುವ ನೀರು ಹಾಗೂ ಸ್ವಚ್ಛತಾ ಸಚಿವಾಲಯದಿಂದ ಪ್ರಕಟವಾದ ಆದೇಶದಲ್ಲಿ ಉಡುಪಿ ಜಿಲೆ,್ಲ ಕರ್ನಾಟಕ ರಾಜ್ಯದ “ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಚೇರ್‍ಕಾಡಿ ಬ್ರಹ್ಮಾವರ” ಇವರು ರಾಷ್ಟ್ರ ಮಟ್ಟದಲ್ಲಿ ‘ಪ್ರಥಮ ಸ್ವಚ್ಛಭಾರತ ಸಮ್ಮರ್ ಇಂಟರ್ನ್‍ಶಿಪ್ ಯೋಜನೆಯಲ್ಲಿ’ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಹಾಗೂ ವಿಜೇತ ಮಹಿಳಾ ಮಂಡಳಿಯ ಪ್ರತಿನಿಧಿಗಳು ಅಕ್ಟೋಬರ್ 2 ರಂದು ನಡೆಯುವ 150ನೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿದಿಂದ ಪ್ರಶಸ್ತಿ ಪತ್ರ ಹಾಗೂ 2 ಲಕ್ಷ ರೂ. ನಗದು ಬಹುಮಾನ ಪಡೆಯುವರು.

ಸ್ವಚ್ಛತಾ ಕಾರ್ಯಗಳಲ್ಲಿ ಉತ್ತಮ ರೀತಿಯಲ್ಲಿ ಭಾಗವಹಿಸಿ 100ಗಂಟೆಗೂ ಜಾಸ್ತಿ ಶ್ರಮಧಾನ ಹಾಗೂ ಸ್ವಯಂ ಸೇವೆ ಜಿಲ್ಲೆಯ ಹಲವಾರು ಕಡೆ ನಡೆಸಿಕೊಂಡು ಬಂದಿದ್ದು ಇದು ಸ್ಥಳೀಯರ ಹಾಗೂ ಜಿಲ್ಲಾ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಮಾನ್ಯ ಜಿಲ್ಲಾಧಿಕಾರಿಯವರು ಹಾಗೂ ಹಲವಾರು ಜನಪ್ರತಿನಿಧಿಗಳು ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿಯ ನೇತೃತ್ವದಲ್ಲಿ ಮೂಡಿಬಂದ ಜನಪರ ಸಮಾಜಮುಖೇನ ಸ್ವಯಂ ಸೇವೆಯನ್ನು ಪ್ರಶಂಸಿದ್ದಾರೆ.

ರಾಜ್ಯ ಮಟ್ಟದಲ್ಲಿ ಈ ಮಹಿಳಾ ಸಂಘಕ್ಕೆ ರಾಜ್ಯ ಪ್ರಶಸ್ತಿ- ಪ್ರಥಮ ರೂ.50,000, ನಗದು ಹಾಗೂ ಪ್ರಶಸ್ತಿಗೆ ಈಗಾಗಲೇ ಬಾಜನವಾಗಿದ್ದು ಈ ಮೇಲೆ ತಿಳಿಸಿರುವಂತೆ ರಾಷ್ಟ್ರ ಮಟ್ಟದಲ್ಲಿ ‘ಸ್ವಚ್ಛಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮ’ದಲ್ಲಿ ಎಲ್ಲಾ ರಾಜ್ಯಗಳಿಂದ ಕಠಿಣ ಪೈಪೋಟಿಯ ಹೊರತಾಗಿಯು ರಾಷ್ಟ್ರಮಟ್ಟದಲ್ಲಿ ಪ್ರಥಮ ‘ಸ್ವಚ್ಛಭಾರತ ಸಮ್ಮರ್ ಇಂಟರ್ನ್‍ಶಿಪ್ ಯೋಜನೆಯಡಿ’ ವಿಜೇತರಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದೆ.

ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಚೇರ್‍ಕಾಡಿ ತುಂಬಾ ಶ್ರದ್ಧೆ ಹಾಗೂ ಸಂಯಮದಿಂದ ಸಮಯದ ಅಭಾವವಿದ್ದರು ಶನಿವಾರ ಮತ್ತು ಭಾನುವಾರದಂದು ಜೊತೆಗೂಡಿ ಸ್ವಯಂ ಸೇವೆ ಮಾಡಿ ಸ್ವಚ್ಛ ಭಾರತ ಅಭಿಯಾನದ ಅರಿವು ಮೂಡಿಸುವಲ್ಲಿ ನಿಜವಾಗಿಯು ಉತ್ತಮ ಕಾರ್ಯವನ್ನು ನಿರ್ವಹಿಸಿ ಪ್ರಶಸ್ತಿಗೆ ಪಾತ್ರವಾಗಿದೆ. ವಿಜೇತÀ ಸಮೃದ್ಧಿ ಮಹಿಳಾ ಮಂಡಳಿಯ ನೆತೃತ್ವ ವಹಿಸಿದ ಶ್ರಿಮತಿ ಪ್ರಸನ್ನ ಪಿ ಭಟ್ ಈ ಸುದ್ದಿ ತಿಳಿದು ತಮ್ಮ ಹರ್ಷ ವ್ಯಕ್ತಪಡಿಸುವುದರ ಜೊತೆಗೆ ಇನ್ನು ಮುಂದೆ ಕೂಡ ಸ್ವಚ್ಛಭಾರತದ ಕನಸನ್ನು ನನಸು ಮಾಡಲು ಗ್ರಾಮ ಮಟ್ಟದಲ್ಲಿ ತಮ್ಮ ತಂಡವು ಕಾರ್ಯಮಾಡುವುದಾಗಿ ತಿಳಿಸಿದರು. ಸ್ಥಳೀಯ ನೆಹರು ಯುವ ಕೇಂದ್ರ, ಉಡುಪಿ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಹಾಗೂ ಸ್ವಚ್ಛಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮದ ಜಿಲ್ಲಾ ನೊಡಲ್ ಅಧಿಕಾರಿಯಾದ ವಿಲ್ಫ್ರೆಡ್ ಡಿಸೋಜಾರವರು ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಚೇರ್‍ಕಾಡಿಗೆ ಒಲಿದಿರುವ ಪ್ರಶಸ್ತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಯುವ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಯುವಕ/ಯುವತಿ ಮಂಡಳಗಳ ಆಶ್ರಯದಲ್ಲಿ ಸ್ವಚ್ಛ ಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮದಂಗವಾಗಿ ಹಮ್ಮಿಕೊಂಡು ಜನಜಾಗೃತಿ, ಸ್ವಚ್ಛತೆ ಕಡೆಗೆ ನಮ್ಮೆಲ್ಲರ ನಡಿಗೆ ಇದೀಗ ಗ್ರಾಮದ ಮನೆ-ಮನ ಮುಟ್ಟುವಲ್ಲಿ ನೆರವಾಗಿದೆ. ಯುವಕ/ಯುವತಿ ಮಂಡಳ ಮನೆ-ಮನಗಳಲ್ಲಿ ಬಿಡುಗಡೆಗೊಳಿಸಿದೆ. ಸ್ವಚ್ಛ ಮನೆ, ಸ್ವಚ್ಛ ಭಾರತ ಪರಿಕಲ್ಪನೆ ಮೂಡಿಸುತ್ತಿದೆ. ಜಾಗೃತಿ ಮೂಡಿಸಲು ಭಿತ್ತಿಪತ್ರ ಶಾಲೆ, ಸ್ವಚ್ಛ ನಗರ ಮತ್ತು ಸ್ವಚ್ಛತೆ ಸ್ವಾಭಿಮಾನದ ಸಂಕೇತ, ಇದು ಸರಕಾರಿ ಕಾರ್ಯಕ್ರಮವಲ್ಲ- ಪ್ರತಿಯೊಬ್ಬರ ಜವಾಬ್ದಾರಿ, ಕಸ ಡಬ್ಬದೊಳಗೆ ಹಾಕುವಂತೆ, ಸಿಕ್ಕಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡದಂತೆ, ಕುಡಿಯುವ ನೀರಿನಲ್ಲಿ ಸ್ವಚ್ಛತೆ ಕಾಪಾಡುವಂತೆ, ಬಳಸಿದ ನೀರನ್ನು ಸಸ್ಯಕ್ಕೆ ಮರು ಬಳಕೆ ಮಾಡುವಂತೆ, ಮಣ್ಣಿನ ಮಾಲಿನ್ಯ ತಡೆಗೆ ಸಾವಯವ ಗೊಬ್ಬರ ಬಳಸುವಂತೆ, ಗಿಡ ಬೆಳೆಸಿ ಪರಿಸರ ರಕ್ಷಿಸುವಂತೆ ಗ್ರಾಮ ನೈರ್ಮಲ್ಯ ಕಾಪಾಡಿ ರೋಗ ತಡೆಗಟ್ಟುವಂತೆ ಶಾಲಾ ವಠಾರ, ಧಾರ್ಮಿಕ ಕೇಂದ್ರ, ಸಾರ್ವಜನಿಕ ಸ್ಥಳ, ರಸ್ಥೆಗಳನ್ನು ಸ್ವಚ್ಛಗೊಳಿಸುವಂತೆ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪರಿಸರ ಸ್ವಚ್ಛವಾಗಿಡುವ ಪ್ರತಿಜ್ಞೆ ಕೈಗೊಳ್ಳುವಂತೆ ಭಿತ್ತಿ ಪತ್ರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‍ನ ಕಾರ್ಯನಿರ್ವಹಣಾಧಿಕಾರಿಗಳು ಸಮೃದ್ಧಿ ಮಹಿಳಾ ಮಂಡಳಿಯ ಈ ಪ್ರಶಸ್ತಿ ಲಭಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ತಂಡದ ಪ್ರತಿನಿಧಿಗಳು ಸದ್ಯದಲ್ಲೆ ದೆಹಲಿಗೆ ತೆರಳಲಿದ್ದು ಅಕ್ಟೋಬರ್ 2 ರಂದು ನಡೆಯುವ 150ನೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ಪಡೆಯಲಿದ್ದಾರೆ ಎಂದು ವಿಲ್ಫ್ರೆಡ್ ಡಿಸೋಜಾ, ಜಿಲ್ಲಾ ಯುವಜನ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಉಡುಪಿ ಇವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.


Spread the love