Spread the love
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ: ದ.ಕ. ಜಿಲ್ಲಾಧಿಕಾರಿ ಅಭಿನಂದನೆ
ಮಂಗಳೂರು: ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮಂಗಳೂರಿನ ಚಿಂತನ್ ಎಸ್. ಶೆಟ್ಟಿ ಅವರನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಶುಕ್ರವಾರ ತನ್ನ ಕಚೇರಿಯಲ್ಲಿ ಅಭಿನಂದಿಸಿದರು.
4/100 ಫ್ರೀ ಸ್ಟೈಲ್ ರಿಲೇ ಈಜುಕೂಟದಲ್ಲಿ ಚಿಂತನ್ ಶೆಟ್ಟಿ ಇತರ ಮೂವರು ಕ್ರೀಡಾಪಟುಗಳೊಂದಿಗೆ ಕರ್ನಾಟಕ ತಂಡ ವನ್ನು ಪ್ರತಿನಿಧಿಸಿದ್ದರು. 3:26:26 ನಿಮಿಷದಲ್ಲಿ ಗುರಿ ತಲುಪಿದ ಅವರ ಸಾಧನೆಯು ಕ್ರೀಡಾಕೂಟದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಮಂಗಳಾ ಈಜು ತಂಡದ ಸದಸ್ಯರಾಗಿರುವ ಅವರು ಶಿವಾನಂದ ಗಟ್ಟಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
Spread the love