ರೈತರ ಜನ ಸಾಮಾನ್ಯರ ಬಜೆಟ್-ಸುಶಿಲ್ ನೊರೊನ್ಹ
ಮಂಗಳೂರು: ರಾಜ್ಯದ ಸಮಿಶ್ರ ಸರಕಾರದ ಚೊಚ್ಚಲ ಬಜೆಟ್ ಮಂಡಿಸಿದ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಎರಡು ಲಕ್ಷದ ವರೆಗೆ ಸಾಲಮನ್ನಾ ಹೆರಿಗೆ ಬತ್ತೆ ವ್ರಧ್ಯಾಪ ವೇತನ ಹೆಚ್ಚಳ ಮಾಡಿ ತನ್ನ ಕೊಟ್ಟ ಮಾತನ್ನು ಉಳಿಸಲು ಸಫಲರಾಗಿದ್ದಾರೆ ಎಂದು ಜೆಡಿಎಸ್ ದಕ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹರವರು ಹೇಳಿದ್ದಾರೆ
ಹಿಂದಿನ ಸರಕಾರವು ನೀಡಿದ ಎಲ್ಲಾ ಯೋಜನೆಗಳನ್ನು ಮುಂದುವರಿಸಿದ್ದು ತಾನು ಬಡವರ ಹಾಗೂ ದೀನದಲಿತರ ಪರ ಎಂಬುದನ್ನು ಸ್ವಷ್ಟ ಪಡಿಸಿದ್ದಾರೆ. ತಾಲೂಕಿನಲ್ಲಿ ವ್ರದ್ದಾಪ ಆಶ್ರಮ ಸ್ಥಾಪನೆ, ಸ್ವಸಹಾಯ ಪಂಗಡದವರಿಗೆ ಸಾಲ ಹೆಚ್ಚಳ ಇಂತಹ ಹಲವು ಯೋಜನೆಗಳು ಹೆಚ್ಚಿನವಾಗಿ ಕೊಡುಗೆಯನ್ನು ನೀಡಿದ್ದಾರೆ.
ಕರಾವಳಿ ಪ್ರದೇಶದಲ್ಲಿ ಯಾವುದೇ ಯೋಜನೆಗಳಿಲ್ಲ ಎಂಬ ಬಿಜೆಪಿಯ ಟೀಕೆ ಅರ್ಥ ಹೀನ ಯಾಕೆಂದರೆ ಸಿದ್ದರಾಮಯ್ಯರವರು ಮಂಡಿಸಿದ 2018-19 ಬಜೆಟ್ ಎಲ್ಲಾ ಯೋಜನೆಗಳು ಮುಂದುವರಿಕೊಂಡು ಹೋಗಿವೆ. ಬಿಜೆಪಿ ಪಕ್ಷವು ಒಂದೆಡೆ ರೈತರ ಸಂಪೂರ್ಣ ಸಾಲಮನ್ನ ಮಾಡಬೇಕೆಂದು ವಿಧಾನ ಸಭಾ ಒಳಗೆ ಹೊರಗೆ ಹೇಳಿಕೆ ದರಣಿ ಗದ್ದಲ ಮಾಡುತ್ತಿದೆ. ಇನ್ನೊಂದೆಡೆ ಈ ಹಣವನ್ನು ಎಲ್ಲಿಂದ ಕ್ರೊಡಿ ಕರಿಸುತ್ತೀರಿ ಎಂದು ದ್ವಂದ ಹೇಳಿಕೆಯನ್ನು ನೀಡುತಿದೆ. ಈ ಹೇಳಿಕೆಯು ಬಿಜೆಪಿಯವರಿಗೆ ರೈತರ ಸಾಲಮನ್ನಾ ಮಾಡುವುದರ ವಿರೋದ್ಧ ನಿಲುವನ್ನು ತೋರಿಸುತ್ತದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹರವರು ಹೇಳಿದ್ದಾರೆ.